ತೀಕ್ಷಣ… ಅತೀ ತೀಕ್ಷಣ: ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮಹೀಶ್ ತೀಕ್ಷಣ

| Updated By: ಝಾಹಿರ್ ಯೂಸುಫ್

Updated on: Jan 08, 2025 | 12:54 PM

New Zealand vs Sri Lanka: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡವು 9 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಉಭಯ ತಂಡಗಳು ದ್ವಿತೀಯ ಏಕದಿನ ಪಂದ್ಯವನ್ನು ಆಡುತ್ತಿದ್ದು, ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸ್ಪಿನ್ನರ್ ಮಹೀಶ್ ತೀಕ್ಷಣ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ತೀಕ್ಷಣ... ಅತೀ ತೀಕ್ಷಣ: ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮಹೀಶ್ ತೀಕ್ಷಣ
Maheesh Theekshana
Follow us on

ಹ್ಯಾಮಿಲ್ಟನ್​ನ ಸೆಡನ್ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬೌಲಿಂಗ್ ಆಯ್ದುಕೊಂಡಿದ್ದರು.
ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ರಚಿನ್ ರವೀಂದ್ರ ಭರ್ಜರಿ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ರಚಿನ್ 63 ಎಸೆತಗಳಲ್ಲಿ 9 ಫೋರ್​​ ಹಾಗೂ 1 ಸಿಕ್ಸ್​ನೊಂದಿಗೆ 79 ರನ್ ಬಾರಿಸಿದರು.

ಆ ಬಳಿಕ ಬಂದ ಮಾರ್ಕ್​ ಚಾಪ್ಮನ್ 52 ಎಸೆತಗಳಲ್ಲಿ 2 ಸಿಕ್ಸ್​ ಹಾಗೂ 5 ಫೋರ್​​ಗಳೊಂದಿಗೆ 62 ರನ್ ಬಾರಿಸಿದರು. ಪರಿಣಾಮ 23 ಓವರ್​ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ 3 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು.

ತೀಕ್ಷಣ… ಅತೀ ತೀಕ್ಷಣ:

ಈ ಹಂತದಲ್ಲಿ ದಾಳಿಗಿಳಿಸಿದ ಮಹೀಶ್ ತೀಕ್ಷಣ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 35ನೇ ಓವರ್​ನ 5ನೇ ಎಸೆತದಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ (20) ವಿಕೆಟ್ ಕಬಳಿಸಿದ ತೀಕ್ಷಣ ಮರು ಎಸೆತದಲ್ಲಿ ನಾಥನ್ ಸ್ಮಿತ್ (0) ವಿಕೆಟ್ ಪಡೆದರು.

ಈ ಓವರ್​ ಬಳಿಕ 37ನೇ ಓವರ್​ನ ಮೊದಲ ಎಸೆತದಲ್ಲಿ ಮ್ಯಾಟ್ ಹೆನ್ರಿಯನ್ನು ಔಟ್ ಮಾಡಿದ ಮಹೀಶ್ ತೀಕ್ಷಣ ಹ್ಯಾಟ್ರಿಕ್ ವಿಕೆಟ್​​ಗಳ ಸಾಧನೆ ಮಾಡಿದರು. ಈ ಮೂಲಕ ಶ್ರೀಲಂಕಾ ಪರ ಏಕದಿನ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 7ನೇ ಬೌಲರ್ ಎನಿಸಿಕೊಂಡರು.

37 ಓವರ್​​ಗಳ ಪಂದ್ಯ:

ಮಳೆಯ ಕಾರಣ ಈ ಪಂದ್ಯವನ್ನು 37 ಓವರ್​ಗಳಿಗೆ ಸೀಮಿತಗೊಳಿಸಲಾಗಿದೆ. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 37 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿದೆ. ಇದೀಗ ಬ್ಯಾಟಿಂಗ್ ಮಾಡುತ್ತಿರುವ ಶ್ರೀಲಂಕಾ ತಂಡವು 6 ಓವರ್​​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ.

 

ನ್ಯೂಝಿಲೆಂಡ್ ಪ್ಲೇಯಿಂಗ್ 11: ವಿಲ್ ಯಂಗ್ , ರಚಿನ್ ರವೀಂದ್ರ , ಮಾರ್ಕ್ ಚಾಪ್ಮನ್ , ಡೇರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ (ನಾಯಕ) ನಾಥನ್ ಸ್ಮಿತ್ , ಮ್ಯಾಟ್ ಹೆನ್ರಿ , ಜಾಕೋಬ್ ಡಫ್ಫಿ , ವಿಲಿಯಂ ಒರೋಕ್.

ಇದನ್ನೂ ಓದಿ: ಬರೋಬ್ಬರಿ 8 ಶತಕಗಳು: ದೇಶೀಯ ಅಂಗಳದಲ್ಲಿ ಕನ್ನಡಿಗರ ಕಮಾಲ್

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಅವಿಷ್ಕ ಫೆರ್ನಾಂಡೋ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕಾಮಿಂದು ಮೆಂಡಿಸ್ , ಚರಿತ್ ಅಸಲಂಕಾ (ನಾಯಕ) , ಜನಿತ್ ಲಿಯಾನಗೆ , ಚಾಮಿಂದು ವಿಕ್ರಮಸಿಂಘೆ , ವನಿಂದು ಹಸರಂಗ , ಮಹೀಶ್ ತೀಕ್ಷಣ , ಈಶಾನ್ ಮಾಲಿಂಗ , ಅಸಿತ ಫರ್ನಾಂಡೋ.