Manish Pandey: ಮನೀಶ್ ಪಾಂಡೆಗೆ ಬೌಲಿಂಗ್​ ನಿಷೇಧ..!

| Updated By: ಝಾಹಿರ್ ಯೂಸುಫ್

Updated on: Dec 17, 2023 | 11:40 AM

Manish Pandey: ಕ್ರಿಕೆಟ್​ ಅಂಗಳದಲ್ಲಿ ಮನೀಶ್ ಪಾಂಡೆ ಬ್ಯಾಟ್ಸ್​ಮನ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಹಾಗೆಯೇ ದೇಶೀಯ ಟೂರ್ನಿಗಳಲ್ಲಿ ಅವರು ಇದುವರೆಗೆ 193.5 ಓವರ್​ಗಳನ್ನು ಮಾಡಿದ್ದಾರೆ. ಈ ವೇಳೆ 23 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಅವರ ಮೇಲಿನ ನಿಷೇಧ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.

Manish Pandey: ಮನೀಶ್ ಪಾಂಡೆಗೆ ಬೌಲಿಂಗ್​ ನಿಷೇಧ..!
Manish Pandey
Follow us on

ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ (Manish Pandey) ಮೇಲೆ ಬೌಲಿಂಗ್​ನಿಷೇಧ ಹೇರಲಾಗಿದೆ. ಬಿಸಿಸಿಐ ಪ್ರಕಟಿಸಿರುವ ಅನುಮಾನಸ್ಪದ ಬೌಲಿಂಗ್ ಶೈಲಿ ಪಟ್ಟಿಯಲ್ಲಿ ಮನೀಶ್ ಪಾಂಡೆ ಸೇರಿದಂತೆ ಒಟ್ಟು 8 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಇದರಲ್ಲಿ ಮನೀಶ್ ಪಾಂಡೆ ಹಾಗೂ ಕೆಎಲ್ ಶ್ರೀಜಿತ್ ಅವರಿಗೆ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

ಅಂದರೆ ಈ ಇಬ್ಬರು ಆಟಗಾರರ ಬೌಲಿಂಗ್ ಶೈಲಿಯಲ್ಲಿ ದೋಷಗಳಿವೆ. ಹೀಗಾಗಿ ಇವರನ್ನು ಬೌಲರ್​ಗಳಾಗಿ ಬಳಸಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ. ಹಾಗಾಗಿ ಇನ್ಮುಂದೆ ಮನೀಶ್ ಪಾಂಡೆಯನ್ನು ಯಾವುದೇ ತಂಡ ಬೌಲರ್​ ಆಗಿ ಬಳಸಿಕೊಳ್ಳುವುದಿಲ್ಲ. ಒಂದು ವೇಳೆ ಅವರು ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಟೆಸ್ಟ್​ ಪಾಸ್ ಆದರೆ ಮಾತ್ರ ಅವಕಾಶ ದೊರೆಯಲಿದೆ.

ಮನೀಶ್ ಪಾಂಡೆ ಬೌಲರಾ?

ಕ್ರಿಕೆಟ್​ ಅಂಗಳದಲ್ಲಿ ಮನೀಶ್ ಪಾಂಡೆ ಬ್ಯಾಟ್ಸ್​ಮನ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಹಾಗೆಯೇ ದೇಶೀಯ ಟೂರ್ನಿಗಳಲ್ಲಿ ಅವರು ಇದುವರೆಗೆ 193.5 ಓವರ್​ಗಳನ್ನು ಮಾಡಿದ್ದಾರೆ. ಈ ವೇಳೆ 23 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಅವರ ಮೇಲಿನ ನಿಷೇಧ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅನುಮಾನಾಸ್ಪದ ಶೈಲಿಯ ಬೌಲರ್​ಗಳು:

ಅನುಮಾನಾಸ್ಪದ ಬೌಲಿಂಗ್ ಶೈಲಿ ಹೊಂದಿರುವ ದೇಶೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ತನುಷ್ ಕೋಟ್ಯಾನ್, ಕೇರಳ ಕ್ರಿಕೆಟ್ ಸಂಸ್ಥೆಯ ರೋಹನ್ ಕುನ್ನುಮಲ್, ಗುಜರಾತ್ ಕ್ರಿಕೆಟ್ ಸಂಸ್ಥೆಯ ಚಿರಾಗ್ ಗಾಂಧಿ, ಕೇರಳ ಕ್ರಿಕೆಟ್ ಸಂಸ್ಥೆಯ ಸಲ್ಮಾನ್ ನಿಜಾರ್, ವಿದರ್ಭ ಕ್ರಿಕೆಟ್ ಸಂಸ್ಥೆಯ ಸೌರಭ್ ದುಬೆ ಮತ್ತು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅರ್ಪಿತ್ ಗುಲೇರಿಯಾ ಪಟ್ಟಿಯಲ್ಲಿದ್ದಾರೆ. ಇದಲ್ಲದೇ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪರ ಆಡುವ ಮನೀಶ್ ಪಾಂಡೆ ಮತ್ತು ಕೆಎಲ್ ಶ್ರೀಜಿತ್ ಬೌಲಿಂಗ್​ ನಿಷೇಧ ಹೇರಲಾಗಿದೆ.

ಶಂಕಿತ ಶೈಲಿ ಪಟ್ಟಿಯಲ್ಲಿ ಟೀಮ್ ಇಂಡಿಯಾ ಬೌಲರ್​:

ಅಚ್ಚರಿ ಎಂದರೆ ಬಿಸಿಸಿಐ ಪ್ರಕಟಿಸಿರುವ ಶಂಕಿತ ಶೈಲಿ ಹೊಂದಿರುವ ಬೌಲರ್​ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರ ಚೇತನ್ ಸಕರಿಯಾ ಹೆಸರು ಕೂಡ ಕಾಣಿಸಿಕೊಂಡಿದೆ. ಚೇತನ್ ಸಕರಿಯಾ ಈ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.

ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ಆಯ್ಕೆಯೇ ಮುಂಬೈ ಪಾಲಿಗೆ ಮುಳುವಾಗಬಹುದು..!

ಅಲ್ಲದೆ 2021 ರ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಂದು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನಾಡಿದ್ದರು. ಇದೀಗ ಐಪಿಎಲ್ ಹರಾಜಿಗೂ ಅನುಮಾನಾಸ್ಪದ ಬೌಲರ್​ಗಳ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಹೀಗಾಗಿ ಈ ಪಟ್ಟಿಯಲ್ಲಿರುವ ಚೇತನ್ ಸಕರಿಯಾಗೆ ಈ ಬಾರಿಯ ಐಪಿಎಲ್​ನಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಬಹುದು.