16 ಸಿಕ್ಸರ್, 49 ಎಸೆತ, 160 ರನ್..! ಭಾರತದಲ್ಲಿ ರನ್ ಸುನಾಮಿ ಎಬ್ಬಿಸಿದ ಕಿವೀಸ್ ಬ್ಯಾಟರ್
Martin Guptill Blasts 160 in Legend 90 League: ಲೆಜೆಂಡ್ 90 ಲೀಗ್‌ನಲ್ಲಿ ಛತ್ತೀಸ್‌ಗಢ ವಾರಿಯರ್ಸ್ ಪರ ಆಡುತ್ತಿರುವ ಗಪ್ಟಿಲ್, 49 ಎಸೆತಗಳಲ್ಲಿ 160 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದರೊಂದಿಗೆ ಛತ್ತೀಸ್‌ಗಢ ವಾರಿಯರ್ಸ್ ತಂಡವು 240 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಬಿಗ್ ಬಾಯ್ಸ್ ಯೂನಿಯನ್ ತಂಡವನ್ನು 89 ರನ್‌ಗಳಿಂದ ಸೋಲಿಸಿದೆ. ಗಪ್ಟಿಲ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 16 ಸಿಕ್ಸರ್‌ಗಳು ಸೇರಿದ್ದವು.

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆಜೆಂಡ್ 90 ಲೀಗ್‌ನಲ್ಲಿ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ನ್ಯೂಜಿಲೆಂಡ್ನ ಸ್ಫೋಟಕ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮೈದಾನದ ತುಂಬಾ ಬೌಂಡರಿಗಳ ಮಳೆಗರೆದಿದ್ದಾರೆ. ತಲಾ 15 ಓವರ್ಗಳ ಮಾದರಿಯಲ್ಲಿ ನಡೆಯುತ್ತಿರುವ ಈ ಲೀಗ್‌ನ 8ನೇ ಪಂದ್ಯದಲ್ಲಿ ಛತ್ತೀಸ್‌ಗಢ ವಾರಿಯರ್ಸ್ ಮತ್ತು ಬಿಗ್ ಬಾಯ್ಸ್ ಯೂನಿಯನ್ ತಂಡಗಳು ಪರಸ್ಪರ ಮುಖಾಮುಖಿಯಾದವು. ಈ ಪಂದ್ಯದಲ್ಲಿ, 38 ವರ್ಷದ ಗಪ್ಟಿಲ್ 300 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 160 ರನ್ ಗಳಿಸಿ ತಂಡವನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದಿದ್ದಾರೆ.
ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್
ವಾಸ್ತವವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಆಟಗಾರರು ಮತ್ತು ಭಾರತೀಯ ದೇಶೀಯ ಕ್ರಿಕೆಟಿಗರು ಲೆಜೆಂಡ್ 90 ಲೀಗ್‌ನಲ್ಲಿ ಆಡುತ್ತಿದ್ದಾರೆ. ಲೀಗ್‌ನ 8ನೇ ಪಂದ್ಯದಲ್ಲಿ ಛತ್ತೀಸ್‌ಗಢ ವಾರಿಯರ್ಸ್ ಪರ ಆಡುತ್ತಿರುವ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್, ಬಿಗ್ ಬಾಯ್ಸ್ ಯೂನಿಯನ್ ತಂಡದ ಪ್ರತಿಯೊಬ್ಬ ಬೌಲರ್ಗೆ ಬೆವರಿಳಿಸಿ ಕೇವಲ 49 ಎಸೆತಗಳಲ್ಲಿ 326.53 ಸ್ಟ್ರೈಕ್ ರೇಟ್‌ನಲ್ಲಿ 160 ರನ್ ಕಲೆಹಾಕಿದರು. ಗಪ್ಟಿಲ್ ಅವರ ಈ ಸಿಡಿಲಬ್ಬರದ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 16 ಸಿಕ್ಸರ್‌ಗಳು ಸೇರಿದ್ದವು.
Martin Guptill smashed 160 runs off just 49 deliveries, including 16 maximums in Legends90 pic.twitter.com/SA5AKCnQj5
— Rohit Baliyan (@rohit_balyan) February 10, 2025
ಗಪ್ಟಿಲ್ ಅವರ ಈ ಬಲಿಷ್ಠ ಇನ್ನಿಂಗ್ಸ್ ನಿಂದಾಗಿ, ಛತ್ತೀಸ್‌ಗಢ ವಾರಿಯರ್ಸ್ ತಂಡವು ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾಯಿತು. ಛತ್ತೀಸ್‌ಗಢ ವಾರಿಯರ್ಸ್ 15 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 240 ರನ್ ಕಲೆಹಾಕಿತು. ಇದು ಈ ಲೀಗ್‌ನಲ್ಲಿ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ಗಪ್ಟಿಲ್ಗೆ ಉತ್ತಮ ಸಾಥ್ ನೀಡಿದ ರಿಷಿ ಧವನ್ ಕೂಡ 42 ಎಸೆತಗಳಲ್ಲಿ 76 ರನ್ ಗಳಿಸಿದರು. ಅವರೂ ಕೂಡ 180.95 ಸ್ಟ್ರೈಕ್ ರೇಟ್‌ನಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ, ಬಿಗ್ ಬಾಯ್ಸ್ ಯುನಿಕಾರಿ ತಂಡವು ಇನ್ನಿಂಗ್ಸ್‌ನಲ್ಲಿ ಒಟ್ಟು 6 ಬೌಲರ್‌ಗಳನ್ನು ಬಳಸಿತು ಆದರೆ ಅವರಲ್ಲಿ ಯಾರಿಗೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಛತ್ತೀಸ್‌ಗಢ ವಾರಿಯರ್ಸ್‌ಗೆ ಭರ್ಜರಿ ಗೆಲುವು
ಈ ಪಂದ್ಯವನ್ನು ಗೆಲ್ಲಲು 241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಿಗ್ ಬಾಯ್ಸ್ ಯುನಿಕಾರಿ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕೇವಲ 41 ರನ್‌ಗಳಿಗೆ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿಕೊಂಡರು. ಇದಾದ ನಂತರ, ಸ್ಕೋರ್ 70 ತಲುಪುವ ಹೊತ್ತಿಗೆ ಇನ್ನಿಬ್ಬರು ಆಟಗಾರರು ವಿಕೆಟ್ ಒಪ್ಪಿಸಿದರು. ತಂಡದ ಪರ ರಾಬಿನ್ ಬಿಸ್ಟ್ ಅರ್ಧಶತಕ ಗಳಿಸಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ಹೀಗಾಗಿ ಬಿಗ್ ಬಾಯ್ಸ್ ಯೂನಿಯನ್ ತಂಡವು 15 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಕೇವಲ 151 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಇದರಿಂದಾಗಿ ಛತ್ತೀಸ್‌ಗಢ ವಾರಿಯರ್ಸ್ ಪಂದ್ಯವನ್ನು 89 ರನ್‌ಗಳಿಂದ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ