AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿ ಎಕ್ಸ್​ಪ್ರೆಸ್ ಕಂಬ್ಯಾಕ್… 6 ಓವರ್​​ಗಳಲ್ಲಿ 9 ವಿಕೆಟ್​!

ಗಾಯದ ನಂತರ ಮೈದಾನಕ್ಕೆ ಮರಳಿದ ಮಯಾಂಕ್ ಯಾದವ್ ಅವರ ಆರ್ಭಟ ಶುರುವಾಗಿದೆ! ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2026ರಲ್ಲಿ ದೆಹಲಿ ಪರ ಆಡುತ್ತಿರುವ 'ರಾಜಧಾನಿ ಎಕ್ಸ್‌ಪ್ರೆಸ್', ಕೇವಲ 6 ಓವರ್‌ಗಳಲ್ಲಿ 9 ವಿಕೆಟ್ ಕಬಳಿಸಿ ಸಂಚಲನ ಮೂಡಿಸಿದ್ದಾರೆ. ಅದರಲ್ಲೂ ಪಂಜಾಬ್ ವಿರುದ್ಧ ಒಂದೇ ಓವರ್‌ನಲ್ಲಿ 3 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.

ರಾಜಧಾನಿ ಎಕ್ಸ್​ಪ್ರೆಸ್ ಕಂಬ್ಯಾಕ್… 6 ಓವರ್​​ಗಳಲ್ಲಿ 9 ವಿಕೆಟ್​!
Mayank YadavImage Credit source: thehindu.com/R.V. Moorthy
ಝಾಹಿರ್ ಯೂಸುಫ್
|

Updated on: Nov 17, 2026 | 10:50 AM

Share

‘ರಾಜಧಾನಿ ಎಕ್ಸ್‌ಪ್ರೆಸ್’ ಖ್ಯಾತಿಯ ಮಯಾಂಕ್ ಯಾದವ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಯಾಂಕ್, ಪ್ರಸ್ತುತ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಮಾರಕ ಬೌಲಿಂಗ್ ದಾಳಿಯ ಮೂಲಕ ಕೇವಲ 6 ಓವರ್‌ಗಳಲ್ಲಿ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

W, 0, W, 0, W, 0: ಮಿಂಚಿನ ದಾಳಿ

ನವೆಂಬರ್ 16ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದ ಮಯಾಂಕ್ ಯಾದವ್ ಅಕ್ಷರಶಃ ಬೆಂಕಿಯ ಚೆಂಡುಗಳನ್ನು ಎಸೆದರು. ಪಂದ್ಯದ ತಮ್ಮ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

ಆ ಓವರ್‌ನ ಎಸೆತಗಳು W, 0, W, 0, W, 0 ಆಗಿದ್ದವು. ಈ ಪಂದ್ಯದಲ್ಲಿ ಒಟ್ಟು 3 ಓವರ್ ಬೌಲಿಂಗ್ ಮಾಡಿದ ಮಯಾಂಕ್ ಯಾದವ್ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದರು. ಪರಿಣಾಮವಾಗಿ ದೆಹಲಿ ತಂಡ 109 ರನ್‌ಗಳ ಭರ್ಜರಿ ಜಯ ಸಾಧಿಸಿತು.

 5 ವಿಕೆಟ್ ಗೊಂಚಲು:

ಇದಕ್ಕೂ ಮುನ್ನ ನವೆಂಬರ್ 14ರಂದು ಜಮ್ಮು ಮತ್ತು ಕಾಶ್ಮೀರ ವಿರುದ್ಧ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲೂ ಮಯಾಂಕ್ ಯಾದವ್ ಮಿಂಚಿನ ದಾಳಿ ಸಂಘಟಿಸಿದ್ದರು. ಆ ಪಂದ್ಯದಲ್ಲಿ 3 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ವೃತ್ತಿಪರ ಟಿ20 ಕ್ರಿಕೆಟ್‌ನಲ್ಲಿ ಅವರ ಚೊಚ್ಚಲ 5 ವಿಕೆಟ್ ಗೊಂಚಲು ಎಂಬುದು ವಿಶೇಷ. ಮಯಾಂಕ್ ಯಾದವ್ ಅವರ ಈ ಮಾರಕ ದಾಳಿಯ ನೆರವಿನೊಂದಿಗೆ  ಈ ಪಂದ್ಯವನ್ನು ದೆಹಲಿ 103 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

ಮಯಾಂಕ್ ಬೌಲಿಂಗ್ ಪ್ರದರ್ಶನ:

ವಿವರ  ಅಂಕಿಅಂಶ
ಒಟ್ಟು ಪಂದ್ಯಗಳು 2 (ಜಮ್ಮು & ಕಾಶ್ಮೀರ, ಪಂಜಾಬ್ ವಿರುದ್ಧ)
ಒಟ್ಟು ಓವರ್‌ಗಳು 6.0
ನೀಡಿದ ರನ್‌ಗಳು 26
ಕಬಳಿಸಿದ ವಿಕೆಟ್‌ಗಳು  9
ಅತ್ಯುತ್ತಮ ಬೌಲಿಂಗ್  5/14 (ಜಮ್ಮು ಮತ್ತು ಕಾಶ್ಮೀರ ವಿರುದ್ಧ)
ಸರಾಸರಿ  2.88

ಇದನ್ನೂ ಓದಿ: IPL 2027: RCB ತಂಡದಿಂದ ನಾಲ್ವರು ಔಟ್! ಇಲ್ಲಿದೆ ಸಂಭಾವ್ಯ ಪಟ್ಟಿ

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿರುವ ಮಯಾಂಕ್ ಯಾದವ್ ಅವರ ಈ ಭರ್ಜರಿ ಫಾರ್ಮ್, ಮುಂಬರುವ ಅಂತಾರಾಷ್ಟ್ರೀಯ ಸರಣಿಗಳು ಹಾಗೂ ಐಪಿಎಲ್ (IPL) ದೃಷ್ಟಿಯಿಂದ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ದೊಡ್ಡ ಭರವಸೆ ಮೂಡಿಸಿದೆ. ದೆಹಲಿ ತಂಡ ಸದ್ಯ ಎಲೈಟ್ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಮಯಾಂಕ್ ಯಾದವ್ ಟೂರ್ನಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುನ್ನಡೆಯುತ್ತಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್
ಸ್ಟಿಂಗ್ ಆಪರೇಷನ್ ಕೇಸ್​: ಸಿಸಿಬಿ ಮುಂದೆ ಕೃಪಾ ಆಳ್ವಾ ಹಾಜರ್