3 ಪಂದ್ಯವಾಡಿ ಮರೆಯಾದ ಮಯಾಂಕ್ ಯಾದವ್ ಬಗ್ಗೆ ಬಿಗ್ ಅಪ್​ಡೇಟ್

Mayank Yadav: ಮಯಾಂಕ್ ಯಾದವ್ ಐಪಿಎಲ್​ನಲ್ಲಿ ಸ್ಥಿರವಾಗಿ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ರಾಜಧಾನಿ ಎಕ್ಸ್​ಪ್ರೆಸ್ ಎಂದು ಖ್ಯಾತಿ ಪಡೆದಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಆಡಿದ 3 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದರೆ, ಐಪಿಎಲ್​ನಲ್ಲಿ 4 ಪಂದ್ಯಗಳಿಂದ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಆದರೆ ಈ ಮಿಂಚಿನ ಬೆನ್ನಲ್ಲೇ ಮಯಾಂಕ್ ಮರೆಯಾಗಿದ್ದರು.

ಝಾಹಿರ್ ಯೂಸುಫ್
|

Updated on: Feb 05, 2025 | 11:54 AM

ಮಯಾಂಕ್ ಯಾದವ್, ಐಪಿಎಲ್​ನಲ್ಲಿ ಆಡಿದ್ದು 4 ಪಂದ್ಯಗಳು. ಈ ನಾಲ್ಕು ಪಂದ್ಯಗಳಲ್ಲಿ 150+ ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈ ಸಂಚಲನದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಅವಕಾಶ ಲಭಿಸಿತು. ಭಾರತ ಪರ 3 ಟಿ20 ಪಂದ್ಯಗಳನ್ನಾಡಿದ ಬಳಿಕ ಮಯಾಂಕ್ ಯಾದವ್ ಗಾಯಗೊಂಡು ತೆರೆಮರೆಗೆ ಸರಿದರು.

1 / 6
ಆ ಬಳಿಕ ಅವರೇನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಭಾರತ ತಂಡದಿಂದ ಹೊರಗುಳಿದಿರುವ ಆಟಗಾರರು ಐಪಿಎಲ್​ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಮಯಾಂಕ್ ಯಾದವ್ ಅವರ ಬಿಗ್ ಅಪ್​ಡೇಟ್​ ಒಂದು ಹೊರಬಿದ್ದಿದೆ.

2 / 6
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರನಾಗಿರುವ ಮಯಾಂಕ್ ಯಾದವ್ ಮುಂಬರುವ ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯನ್ನು LSG ಮೆಂಟರ್ ಝಹೀರ್ ಖಾನ್ ಅವರ ಮುಂದಿಡಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಝಹೀರ್ ಖಾನ್, ಅವರು ಇನ್ನೂ ಕೂಡ ಚೇತರಿಕೆಯ ಹಂತದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

3 / 6
ಮಯಾಂಕ್ ಯಾದವ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಯಲ್ಲಿ ಫಿಟ್​ನೆಸ್​ಗಾಗಿ​ ಶ್ರಮಿಸುತ್ತಿದ್ದಾರೆ. ಅವರು ಎಲ್‌ಎಸ್‌ಜಿ ತಂಡಕ್ಕೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್‌ಗೂ ಸಹ ಮುಖ್ಯ. ಉತ್ತಮ ಸಾಮರ್ಥ್ಯದ ಬೌಲರ್ ದೀರ್ಘಕಾಲದವರೆಗೆ ಸ್ಥಿರವಾಗಿ ಆಡಬೇಕು ಎಂಬುದು ನಮ್ಮೆಲ್ಲರ ಬಯಕೆ. ಹೀಗಾಗಿ ಸಂಪೂರ್ಣ ಫಿಟ್​ನೆಸ್ ಸಾಧಿಸಿದ ಬಳಿಕ ಕಣಕ್ಕಿಳಿಯಬೇಕೆಂದು ನಾನು ಬಯಸುತ್ತೇನೆ ಎಂದು ಝಹೀರ್ ಖಾನ್ ತಿಳಿಸಿದ್ದಾರೆ.

4 / 6
ಮಯಾಂಕ್ ಯಾದವ್​ ಅವರಿಗೆ ಹೆಚ್ಚು ಕಾಲ ಆಡಲು ಉತ್ತಮ ವಾತಾವರಣವನ್ನು ನಿರ್ಮಿಸುತ್ತಿದ್ದೇನೆ. ಅವರು 150% ಫಿಟ್ ಆಗಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ಅವರನ್ನು ಉತ್ತಮ ಫಿಟ್‌ನೆಸ್‌ಗೆ ತರಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಝಹೀರ್ ಖಾನ್ ಹೇಳಿದ್ದಾರೆ.

5 / 6
ಈ ಮೂಲಕ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮಯಾಂಕ್ ಯಾದವ್ ಮುಂಬರುವ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುವ ವಿಶ್ವಾಸವನ್ನು ಝಹೀರ್ ಖಾನ್ ವ್ಯಕ್ತಪಡಿಸಿದ್ದಾರೆ. ಅದರಂತೆ ಐಪಿಎಲ್​ ಸೀಸನ್-18 ರಲ್ಲಿ ರಾಜಧಾನಿ ಎಕ್ಸ್​ಪ್ರೆಸ್ ಕಡೆಯಿಂದ ಬೆಂಕಿ ಚೆಂಡುಗಳು ತೂರಿ ಬರುವುದನ್ನು ಎದುರು ನೋಡಬಹುದು.

6 / 6
Follow us
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು

ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು

ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ

ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್

ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?

ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ

ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್

ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ

ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ