ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 1000 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ ರೋಚಕ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಆರಂಭಿಕ ಆಟಗಾರ್ತಿ ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಶತಕದ ನೆರವಿನಿಂದ 20 ಓವರ್‌ಗಳ ನಂತರ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕ ಹಾಗೂ ಟಿಮ್ ಡೇವಿಡ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಬೀಗಿತು.
ರೋಹಿತ್ ಶರ್ಮಾ ಹುಟ್ಟುಹಬ್ಬ ಹಾಗೂ ಐಪಿಎಲ್‌ನ ಸಾವಿರನೇ ಪಂದ್ಯ ರೋಚಕ ರೀತಿಯಲ್ಲಿ ಮುಕ್ತಾಯಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದೆ.
ಮುಂಬೈ ಇಂಡಿಯನ್ಸ್ ಪರ ಡೇವಿಡ್ 27 ರನ್ ಹಾಗೂ ತಿಲಕ್ ವರ್ಮಾ 29 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 6 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿದೆ. 19 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 196/4
18ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಇಂಡಿಯನ್ಸ್ ಪರ ಡೇವಿಡ್ 15 ರನ್ ಹಾಗೂ ತಿಲಕ್ ವರ್ಮಾ 27 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 12 ಎಸೆತಗಳಲ್ಲಿ 32 ರನ್‌ಗಳ ಅಗತ್ಯವಿದೆ. 18 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 181/4
17ನೇ ಓವರ್‌ನಲ್ಲಿ ಡೇವಿಡ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಮುಂಬೈ ಇಂಡಿಯನ್ಸ್ ಪರ ಡೇವಿಡ್ 11 ರನ್ ಹಾಗೂ ತಿಲಕ್ ವರ್ಮಾ 20 ರನ್ ಗಳಿಸಿ ಆಡುತ್ತಿದ್ದಾರೆ.17 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 170/4. ಗೆಲುವಿಗೆ 18 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿದೆ.
ಬೌಲ್ಟ್ ಓವರ್‌ನಲ್ಲಿ ಸೂರ್ಯಕುಮಾರ್ 55 ರನ್ ಗಳಿಸಿ ಔಟಾದರು. ಸಂದೀಪ್ ಶರ್ಮಾ ಅದ್ಭುತ ಕ್ಯಾಚ್ ಹಿಡಿದು ರಾಜಸ್ಥಾನಕ್ಕೆ ಯಶಸ್ಸು ತಂದುಕೊಟ್ಟರು. ಸೂರ್ಯಕುಮಾರ್ 8 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು.
ಸೂರ್ಯಕುಮಾರ್ 18ನೇ ಐಪಿಎಲ್ ಅರ್ಧಶತಕ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 55 ರನ್ ಮತ್ತು ತಿಲಕ್ ವರ್ಮಾ 13 ರನ್ ಗಳಿಸಿ ಆಡುತ್ತಿದ್ದಾರೆ. 15 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 150/3
14ನೇ ಓವರ್‌ನಲ್ಲಿ ತಿಲಕ್ ವರ್ಮಾ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. 14 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 141/3
13ನೇ ಓವರ್‌ನಲ್ಲಿ ಸೂರ್ಯಕುಮಾರ್ 3 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 20 ರನ್‌ಗಳು ಕಂಡುಬಂದವು.
ಚಹಲ್ ಎಸೆದ 12ನೇ ಓವರ್‌ನಲ್ಲಿ ಕೇವಲ 3 ರನ್ ಮಾತ್ರ ಬಂತು. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 24 ರನ್ ಹಾಗೂ ತಿಲಕ್ ವರ್ಮಾ 1 ರನ್ ಗಳಿಸಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 104/3
ಅಶ್ವಿನ್ ಅವರ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ 44 ರನ್ ಗಳಿಸಿ ಔಟಾದರು. ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. 11 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 101/2
ಹೋಲ್ಡರ್ ಬೌಲ್ ಮಾಡಿದ 10ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ 3 ಬೌಂಡರಿಗಳನ್ನು ಬಾರಿಸಿದರು. 10 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 98/2
ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 7 ರನ್ ಹಾಗೂ ಕ್ಯಾಮರೂನ್ ಗ್ರೀನ್ 42 ರನ್ ಗಳಿಸಿ ಆಡುತ್ತಿದ್ದಾರೆ. 9 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 84/2.
ಅಶ್ವಿನ್ ಎಸೆತದಲ್ಲಿ ಇಶಾನ್ ಕಿಶನ್ 28 ರನ್ ಗಳಿಸಿ ಕ್ಯಾಚಿತ್ತು ಔಟಾದರು. ಇದೀಗ ಬ್ಯಾಟಿಂಗ್ಗೆ ಸೂರ್ಯಕುಮಾರ್ ಯಾದವ್ ಬಂದಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 23 ರನ್ ಹಾಗೂ ಕ್ಯಾಮರೂನ್ ಗ್ರೀನ್ 32 ರನ್ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 62/1
ಸಂದೀಪ್ ಶರ್ಮಾ ಬೌಲ್ ಮಾಡಿದ 6ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 21 ರನ್ ಹಾಗೂ ಕ್ಯಾಮರೂನ್ ಗ್ರೀನ್ 30 ರನ್ ಗಳಿಸಿ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 58/1
ಮುಂಬೈ ಇಂಡಿಯನ್ಸ್ 50 ರನ್ ಪೂರೈಸಿದೆ. ಆರನೇ ಓವರ್‌ನ ಮೊದಲ ಎಸೆತದಲ್ಲಿ ಇಶಾನ್ ಕಿಶನ್ ಬೌಂಡರಿ ಬಾರಿಸುವ ಮೂಲಕ ತಂಡದ ಅರ್ಧಶತಕ ಪೂರೈಸಿದರು.
5ನೇ ಓವರ್ ಬೌಲ್ ಮಾಡಿದ ಅಶ್ವಿನ್ ಮೊದಲ ಎಸೆತಗಳಲ್ಲಿ ಯಾವುದೇ ಬಿಗ್ ಶಾಟ್ ಹೊಡೆಯಲು ಅವಕಾಶ ನೀಡಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಗ್ರೀನ್ ಸಿಕ್ಸರ್ ಹೊಡೆದರು.
ರೋಹಿತ್ ವಿಕೆಟ್ ಬಳಿಕ ಬಂದ ಗ್ರೀನ್ ಬೋಲ್ಟ್ ಎಸೆದ 3ನೇ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆದರು.
ಸಂದೀಪ್ ಬೌಲ್ ಮಾಡಿದ 2ನೇ ಓವರ್‌ನಲ್ಲಿ ಬೌಂಡರಿ ಬರಲಿಲ್ಲ. ಇದರೊಂದಿಗೆ ಅಂತಿಮ ಎಸೆತದಲ್ಲಿ ರೋಹಿತ್ ಕೂಡ ಕೇವಲ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಮುಂಬೈ ಇನ್ನಿಂಗ್ಸ್ ಆರಂಭವಾಗಿದ್ದು, ಮೊದಲ ಓವರ್ನಲ್ಲೇ ಕಿಶನ್ 2 ಬೌಂಡರಿ ಹೊಡೆದರು. ಮುಂಬೈ 12/0
20ನೇ ಓವರ್ನಲ್ಲೂ ಅಬ್ಬರಿಸಿದ ಜೈಸ್ವಾಲ್ 2 ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿ 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. 5ನೇ ಎಸೆತದಲ್ಲಿ ಅಶ್ವಿನ್ ಬೌಂಡರಿ ಬಾರಿಸುವುದರೊಂದಿಗೆ ಮುಂಬೈಗೆ 213 ರನ್‌ಗಳ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ಚರ್ ಬೌಲ್ ಮಾಡಿದ 19ನೇ ಓವರ್‌ನ 4 ಮತ್ತು 5ನೇ ಎಸೆತವನ್ನು ಜೈಸ್ವಾಲ್ ಸಿಕ್ಸರ್ಗಟ್ಟಿದರು.
18ನೇ ಓವರ್‌ನ ಕೊನೆಯ 3 ಎಸೆತಗಳಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.
ಮೆರಿಡಿತ್ ಬೌಲ್ ಮಾಡಿದ 18ನೇ ಓವರ್‌ನ ಮೊದಲ ಎಸೆತದಲ್ಲೇ ಜುರೆಲ್ ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ಔಟಾದರು.
17ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್ಗಟಿದ ಯಶಸ್ವಿ 90ರ ಗಡಿ ದಾಟಿದ್ದಾರೆ.
17ನೇ ಓವರ್‌ನ 2ನೇ ಎಸೆತವನ್ನು ಸಿಕ್ಸರ್ಗಟ್ಟಲು ಯತ್ನಿಸಿದ ಹೆಟ್ಮಾಯಿರ್ ಡೀಪ್ ಮಿಡ್ ವಿಕೆಟ್ನಲ್ಲಿ ಸೂರ್ಯನಿಗೆ ಕ್ಯಾಚಿತ್ತು ಔಟಾದರು.
16ನೇ ಓವರ್‌ನ ಕೊನೆಯ ಎಸೆತವನ್ನು ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟಿದ ಜೈಸ್ವಾಲ್ ರಾಜಸ್ಥಾನ್ ಮೊತ್ತವನ್ನ 150ರ ಗಡಿ ದಾಟಿಸಿದರು.
ಜೋಫ್ರಾ ಆರ್ಚರ್ ಅವರ ಓವರ್‌ನಲ್ಲಿ ಹೋಲ್ಡರ್ 11 ರನ್ ಗಳಿಸಿ ಔಟಾದರು. ರಾಜಸ್ಥಾನದ ನಾಲ್ಕನೇ ವಿಕೆಟ್ ಪತನಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಸ್ಕೋರ್ 14.1 ಓವರ್‌ಗಳಲ್ಲಿ – 143/4
13ನೇ ಓವರ್‌ನ 3ನೇ ಎಸೆತವನ್ನು ಹೊಲ್ಡರ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದರು. ಕೊನೆಯ ಎಸೆತದಲ್ಲಿ ಜೈಸ್ವಾಲ್ ಬೌಂಡರಿ ಕೂಡ ಹೊಡೆದರು.
12ನೇ ಓವರ್ ಬೌಲ್ ಮಾಡಿದ ಚಾವ್ಲಾ 13 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಜೈಸ್ವಾಲ್ 1 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು.
12ನೇ ಓವರ್‌ನ 3 ಮತ್ತು 4ನೇ ಎಸೆತವನ್ನು ಜೈಸ್ವಾಲ್ ಬೌಂಡರಿಗಟ್ಟಿದರು. ಮೊದಲ ಬೌಂಡರಿ ಥರ್ಡ್ಮ್ಯಾನ್ನಲ್ಲಿ ಬಂದರೆ, 2ನೇ ಬೌಂಡರಿ ಶಾರ್ಟ್ ಫೈನ್ ಲೆಗ್ನಲ್ಲಿ ಬಂತು.
11ನೇ ಓವರ್‌ನ ಐದನೇ ಎಸೆತದಲ್ಲಿ ಪಿಯೂಷ್ ಚಾವ್ಲಾ ದೇವದತ್ ಪಡಿಕ್ಕಲ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ದೇವದತ್ ಪಡಿಕ್ಕಲ್ – 2 ರನ್, 4 ಎಸೆತಗಳು
10ನೇ ಓವರ್‌ನ 5ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದ ಸಂಜು ಡೀಪ್ ಮಿಡ್ ವಿಕೆಟ್ನಲ್ಲಿ ಕ್ಯಾಚಿತ್ತು ಔಟಾದರು. 10 ಓವರ್ ಅಂತ್ಯಕ್ಕೆ ರಾಜಸ್ಥಾನ್ 97/2
9ನೇ ಓವರ್‌ನ 5ನೇ ಎಸೆತವನ್ನು ಸಂಜು ಫೈನ್ ಲೆಗ್ ಮೇಲೆ ಬೌಂಡರಿಗಟ್ಟಿದರು.
8ನೇ ಓವರ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸಿದ ಬಟ್ಲರ್ ಕ್ಯಾಚಿತ್ತು ನಿರ್ಗಮಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ್ದವು.
6ನೇ ಓವರ್‌ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಹೊಡೆದರು.
ಮೆರಿಡಿತ್ ಓವರ್‌ನಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್ ರಾಜಸ್ಥಾನ್ ಮೊತ್ತವನ್ನು 50ರ ಗಡಿ ದಾಟಿಸಿದರು. ಈ 5ನೇ ಓವರ್‌ನಲ್ಲಿ ಒಟ್ಟು 3 ಬೌಂಡರಿ ಬಂದವು.
ಜೋಫ್ರಾ ಆರ್ಚರ್ ಅವರ 4ನೇ ಓವರ್‌ನಲ್ಲಿ 2 ಬೌಂಡರಿ ಸೇರಿದಂತೆ ಒಟ್ಟು 16 ರನ್ ಬಂದವು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 10 ರನ್ ಹಾಗೂ ಯಶಸ್ವಿ ಜೈಸ್ವಾಲ್ 19 ರನ್ ಗಳಿಸಿ ಆಡುತ್ತಿದ್ದಾರೆ.
ಗ್ರೀನ್ ಬೌಲ್ ಮಾಡಿದ 3ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ಬಂತು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 1 ರನ್ ಹಾಗೂ ಯಶ್ವಿ ಜೈಸ್ವಾಲ್ 18 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 26/0
ಜೋಫ್ರಾ ಆರ್ಚರ್ ಅವರ ಓವರ್‌ನಲ್ಲಿ 11 ರನ್ ಬಂತು. ಈ ಓವರ್‌ನ 2ನೇ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಬಾಲ್ ನೋ ಬಾಲ್ ಕೂಡ ಆಗಿತ್ತು. ಆದರೆ ಫ್ರೀ ಹಿಟ್ನಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ. 2 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 19/0
ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ನಡುವಿನ ಈ ಪಂದ್ಯ ಐಪಿಎಲ್‌ನ 1000 ನೇ ಪಂದ್ಯವಾಗಿದೆ. ರಾಜಸ್ಥಾನ್ ಪರ ಜೈಸ್ವಾಲ್ ಹಾಗೂ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಓವರ್‌ನಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಬಾರಿಸಿದರು.
ಐಪಿಎಲ್‌ನ 1000ನೇ ಪಂದ್ಯಕ್ಕೂ ಮುನ್ನ ಬಿಸಿಸಿಐ ಸಚಿನ್ ತೆಂಡೂಲ್ಕರ್ ಮತ್ತು ರಾಜಸ್ಥಾನ್ ರಾಯಲ್ಸ್‌ನ ಕುಮಾರ ಸಂಗಕ್ಕರ್ ಅವರನ್ನು ಗೌರವಿಸಿತು. ಇದಾದ ಬಳಿಕ ಮೈದಾನದಲ್ಲಿ ಪಟಾಕಿ ಸಿಡಿಸಿ, ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕ್ಯಾಮೆರಾನ್ ಗ್ರೀನ್, ಇಶಾನ್ ಕಿಶನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್, ಅರ್ಷದ್ ಖಾನ್, ಟಿಮ್ ಡೇವಿಡ್, ತಿಲಕ್ ವರ್ಮಾ
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್
20ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರದಿದ್ದರು. ಕೇವಲ ಡಬಲ್ಸ್ ಹಾಗೂ ತ್ರಿಬಲ್ಸ್ನಿಂದಲೇ ಪಂಜಾಬ್ ತಂಡ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ. ಪಂಜಾಬ್ ಗೆಲುವಿನಲ್ಲಿ ರಜಾ ಹೀರೋ ಎನಿಸಿಕೊಂಡರು.
ದೇಶಪಾಂಡೆ ಬೌಲ್ ಮಾಡಿದ 19ನೇ ಓವರ್‌ನಲ್ಲಿ 2 ಬೌಂಡರಿ ಯೊಂದಿಗೆ 13 ರನ್ ಬಂದವು. ಅಲ್ಲದೆ ಈ ಓವರ್‌ನಲ್ಲಿ ಜಿತೇಶ್ ಕೂಡ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು.
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - 7:02 pm, Sun, 30 April 23