IPL 2023: CSK ಅಬ್ಬರಕ್ಕೆ RCB ದಾಖಲೆ ಧೂಳೀಪಟ
IPL 2023 Kannada: ಐಪಿಎಲ್ನ 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಪರ ಡೆವೊನ್ ಕಾನ್ವೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ನೊಂದಿಗೆ ಅಜೇಯ 92 ರನ್ ಬಾರಿಸಿದರು.
Updated on: Apr 30, 2023 | 7:23 PM

IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಬ್ಬರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ತನ್ನ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಐಪಿಎಲ್ನ 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಪರ ಡೆವೊನ್ ಕಾನ್ವೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್ನೊಂದಿಗೆ ಅಜೇಯ 92 ರನ್ ಬಾರಿಸಿದರು. ಪರಿಣಾಮ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಇದರೊಂದಿಗೆ ಸಿಎಸ್ಕೆ ತಂಡವು ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಹೌದು, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ಗಳಿಸಿದ ವಿಶೇಷ ದಾಖಲೆಯೊಂದು ಆರ್ಸಿಬಿ ಹೆಸರಿನಲ್ಲಿತ್ತು. ಆರ್ಸಿಬಿ ಕಳೆದ 15 ಐಪಿಎಲ್ ಸೀಸನ್ಗಳಲ್ಲಿ ಒಟ್ಟು 22 ಬಾರಿ 200+ ಸ್ಕೋರ್ಗಳಿಸಿತ್ತು.

ಅಲ್ಲದೆ ಈ ಬಾರಿ CSK ಹಾಗೂ LSG ವಿರುದ್ಧದ ಪಂದ್ಯಗಳಲ್ಲಿ 200 ಪ್ಲಸ್ ರನ್ ಕಲೆಹಾಕುವ ಮೂಲಕ ಈ ದಾಖಲೆಯನ್ನು 24 ಕ್ಕೆ ಏರಿಸಿದ್ದರು. ಆದರೀಗ ಸಿಎಸ್ಕೆ ತಂಡವು ಒಂದೇ ಸೀಸನ್ನಲ್ಲಿ 4ನೇ ಬಾರಿ 200 ರನ್ ಕಲೆಹಾಕಿ ಆರ್ಸಿಬಿ ತಂಡದ ದಾಖಲೆಯನ್ನು ಹಿಂದಿಕ್ಕಿದೆ.

ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು LSG, RCB, KKR ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 200 ಹಾಗೂ ಅದಕ್ಕಿಂತ ಹೆಚ್ಚಿನ ಸ್ಕೋರ್ ಕಲೆಹಾಕಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಟ್ಟು 27 ಬಾರಿ 200 ರನ್ ಕಲೆಹಾಕಿ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಬಾರಿ 200 ರನ್ಗಳಿಸಿದ ತಂಡಗಳ ಪಟ್ಟಿಯಲ್ಲಿ CSK (27) ತಂಡ ಅಗ್ರಸ್ಥಾನದಲ್ಲಿದ್ದರೆ, RCB (24) ದ್ವಿತೀಯ ಸ್ಥಾನದಲ್ಲಿದೆ. ಇನ್ನು KKR (19) ಹಾಗೂ PBKS (19) ತಂಡಗಳು ನಂತರದ ಸ್ಥಾನದಲ್ಲಿದೆ.



















