T20 World Cup 2022: ಈ ವಿಶ್ವಕಪ್‌ನಲ್ಲಿ ಇದುವರೆಗೆ ದಾಖಲಾಗಿರುವ ಪ್ರಮುಖ 11 ದಾಖಲೆಗಳಿವು

| Updated By: ಪೃಥ್ವಿಶಂಕರ

Updated on: Oct 29, 2022 | 4:03 PM

T20 World Cup 2022: ಟಿ20 ವಿಶ್ವಕಪ್​ನ ಅರ್ಧದಷ್ಟು ಪ್ರಯಾಣ ಮುಗಿಯುವ ಸನಿಹಕ್ಕೆ ಬಂದಿದೆ. ನಡೆದಿರುವ ಅಷ್ಟೂ ಪಂದ್ಯಗಳು ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದು, ಇದುವರೆಗೆ ಈ ಟೂರ್ನಿಯಲ್ಲಿ ದಾಖಲಾಗಿರುವ ಪ್ರಮುಖ ದಾಖಲೆಗಳ ವಿವರ ಹೀಗಿದೆ.

T20 World Cup 2022: ಈ ವಿಶ್ವಕಪ್‌ನಲ್ಲಿ ಇದುವರೆಗೆ ದಾಖಲಾಗಿರುವ ಪ್ರಮುಖ 11 ದಾಖಲೆಗಳಿವು
ಅಂತೆಯೆ ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದ 8 ತಂಡಗಳಿಗೆ ತಲಾ 70,000 ಡಾಲರ್ (57,14,688 ರೂ.) ಮತ್ತು ಪ್ರತಿ ಸೂಪರ್ 12 ಪಂದ್ಯದ ವಿಜೇತರಿಗೆ 40,000 (32,65,536 ರೂ.) ಐಸಿಸಿ ನೀಡಿದೆ.
Follow us on

ಟಿ20 ವಿಶ್ವಕಪ್​ನ (T20 World Cup 2022) ಅರ್ಧದಷ್ಟು ಪ್ರಯಾಣ ಮುಗಿಯುವ ಸನಿಹಕ್ಕೆ ಬಂದಿದೆ. ನಡೆದಿರುವ ಅಷ್ಟೂ ಪಂದ್ಯಗಳು ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಉಳಿದಂತೆ ಕೆಲವು ಪಂದ್ಯಗಳಲ್ಲಿ ಹೊರಬಿದ್ದಿರುವ ಅಚ್ಚರಿಯ ಪಲಿತಾಂಶಗಳು ಈ ಟೂರ್ನಿಗೆ ಇನ್ನಷ್ಟು ಮೆರಗು ತಂದಿವೆ. ಇವೆಲ್ಲವುದರಗಳ ನಡುವೆ ಈ ಟೂರ್ನಿಯಲ್ಲಿ ಹಲವು ಆಟಗಾರರು ವಿಶಿಷ್ಟ ಪ್ರದರ್ಶನದೊಂದಿಗೆ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ಕುಶಾಲ್ ಮೆಂಡಿಸ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅದೇ ಸಮಯದಲ್ಲಿ ನೆದರ್ಲೆಂಡ್ಸ್ ಬೌಲರ್ ಬಾಸ್ ಡಿ ಲೀಡೆ  ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ . ಆದಾಗ್ಯೂ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಆಟಗಾರರು ಈ ಅಂಕಿಅಂಶಗಳಲ್ಲಿ ಅಗ್ರಸ್ಥಾನದಲ್ಲಿರಲು ದೊಡ್ಡ ಕಾರಣವೂ ಇದೆ. ಈ ತಂಡಗಳು ಇತರ ತಂಡಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಿವೆ ಎಂಬುದನ್ನು ಗಮನಿಸಬೇಕು. ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್ ಮತ್ತು ಜಿಂಬಾಬ್ವೆ ಕ್ವಾಲಿಫೈಯರ್‌ ಪಂದ್ಯಗಳನ್ನೂ ಆಡಿದ ಕಾರಣ ದಾಖಲೆಗಳಲ್ಲಿ ಇತರ ತಂಡಗಳಿಗಿಂತ ಮುಂದಿವೆ. ಈ ತಂಡಗಳು ಟಿ20 ವಿಶ್ವಕಪ್ ಸೂಪರ್ 12 ಸುತ್ತಿನಲ್ಲಿ ಆಡುತ್ತಿರುವ ಇತರ ತಂಡಗಳಿಗಿಂತ 3  ಪಂದ್ಯಗಳನ್ನು ಅಧಿಕವಾಗಿ ಆಡಿವೆ.

ಟಿ20 ವಿಶ್ವಕಪ್ ನಲ್ಲಿ ಇದುವರೆಗಿನ ದಾಖಲೆಗಳಿವು

  1.  ಗರಿಷ್ಠ ಸ್ಕೋರ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗೆ 205 ರನ್ ಗಳಿಸಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದೆ.
  2.  ಅತಿದೊಡ್ಡ ಗೆಲುವು: ದಕ್ಷಿಣ ಆಫ್ರಿಕಾ ಬಾಂಗ್ಲಾದೇಶವನ್ನು 104 ರನ್‌ಗಳಿಂದ ಸೋಲಿಸುವ ಮೂಲಕ ಭಾರೀ ಅಂತರದಲ್ಲಿ ಗೆದ್ದ ತಂಡಗಳಲ್ಲಿ ಮೊದಲನೇ ಸ್ಥಾನದಲ್ಲಿದೆ.
  3.  ಗರಿಷ್ಠ ರನ್: ಶ್ರೀಲಂಕಾದ ಆರಂಭಿಕ ಆಟಗಾರ ಕುಶಾಲ್ ಮೆಂಡಿಸ್ 5 ಇನ್ನಿಂಗ್ಸ್‌ಗಳಲ್ಲಿ 176 ರನ್ ಗಳಿಸಿ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.  44 ಬ್ಯಾಟಿಂಗ್ ಸರಾಸರಿ ಮತ್ತು 157.14 ಸ್ಟ್ರೈಕ್ ರೇಟ್​ನಲ್ಲಿ ಮೆಂಡಿಸ್ ರನ್ ಕಲೆಹಾಕಿದ್ದಾರೆ.
  4.  ಅತ್ಯುತ್ತಮ ಇನ್ನಿಂಗ್ಸ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾದ ರಿಲೆ ರೋಸೋ 109 ರನ್ ಬಾರಿಸುವ ಮೂಲಕ ಉತ್ತಮ ಇನ್ನಿಂಗ್ಸ್ ಆಡಿದ್ದರು.
  5.  ಹೆಚ್ಚಿನ ಸಿಕ್ಸರ್‌ಗಳು: ರಿಲೆ ರೋಸೋ ಇದುವರೆಗೆ 8 ಸಿಕ್ಸರ್‌ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.
  6.  ಹೆಚ್ಚು ವಿಕೆಟ್: ನೆದರ್ಲೆಂಡ್ಸ್ ಬೌಲರ್ ಬಾಸ್ ಡಿ ಲೀಡ್, 8.66 ರ ಬೌಲಿಂಗ್ ಸರಾಸರಿ ಹಾಗೂ 14.44 ಎಕಾನಮಿಯೊಂದಿಗೆ 5  ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.
  7. ಅತ್ಯುತ್ತಮ ಬೌಲಿಂಗ್: ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಯಾಮ್ ಕರನ್ 3.4 ಓವರ್‌ಗಳಲ್ಲಿ 10 ರನ್ ನೀಡಿ 5 ವಿಕೆಟ್ ಪಡೆದು ಈ ದಾಖಲೆ ಬರೆದಿದ್ದಾರೆ.
  8.  ಅತ್ಯುತ್ತಮ ವಿಕೆಟ್ ಕೀಪಿಂಗ್: ಇಂಗ್ಲೆಂಡ್ ನ ಜೋಸ್ ಬಟ್ಲರ್ ವಿಕೆಟ್ ಹಿಂದೆ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
  9.  ಅತ್ಯುನ್ನತ ಜೊತೆಯಾಟ: ದಕ್ಷಿಣ ಆಫ್ರಿಕಾದ ರಿಲೆ ರೋಸೋ ಮತ್ತು ಕ್ವಿಂಟನ್ ಡಿ ಕಾಕ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 168 ರನ್​ಗಳ ಬೃಹತ್ ಜೊತೆಯಾಟವನ್ನು ಹಂಚಿಕೊಂಡರು.
  10.  ಹೆಚ್ಚು ಕ್ಯಾಚ್‌ಗಳು: ಐರಿಶ್ ಆಟಗಾರ ಮಾರ್ಕ್ ಎಡರ್ 5 ಪಂದ್ಯಗಳಲ್ಲಿ 4 ಕ್ಯಾಚ್‌ಗಳನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.
  11.  ಮೊದಲ ಶತಕ: ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಿಲೆ ರೋಸೋ ಬಾಂಗ್ಲಾದೇಶ ವಿರುದ್ಧ 109 ರನ್ ಗಳಿಸುವ ಮೂಲಕ ಈ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Published On - 4:00 pm, Sat, 29 October 22