MS Dhoni: ಅಭಿಮಾನಿಗಳಿಗೆ ಬಿಸ್ಕೆಟ್ ತಿನ್ನಿಸಿದ ಧೋನಿ; ಫೇಸ್​ಬುಕ್ ಲೈವ್ ಬಂದು ಮಹೀ ಮಾಡಿದ್ದೇನು ಗೊತ್ತಾ?

| Updated By: ಪೃಥ್ವಿಶಂಕರ

Updated on: Sep 25, 2022 | 4:32 PM

MS Dhoni: ಕಳೆದ ರಾತ್ರಿ ಅಂದರೆ ಶನಿವಾರ ರಾತ್ರಿ ಫೇಸ್​ಬುಕ್​ನಲ್ಲಿ ಪೋಸ್ಟೊಂದನ್ನು ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಧೋನಿ, ಇಂದು ಮಧ್ಯಾಹ್ನ ಎಲ್ಲಾ ಊಹಾಪೋಹಗಳಿಗೆ ನಿರಾಳದ ಉತ್ತರ ನೀಡಿದ್ದಾರೆ.

MS Dhoni: ಅಭಿಮಾನಿಗಳಿಗೆ ಬಿಸ್ಕೆಟ್ ತಿನ್ನಿಸಿದ ಧೋನಿ; ಫೇಸ್​ಬುಕ್ ಲೈವ್ ಬಂದು ಮಹೀ ಮಾಡಿದ್ದೇನು ಗೊತ್ತಾ?
ಧೋನಿ
Follow us on

ಕಳೆದ ರಾತ್ರಿ ಅಂದರೆ ಶನಿವಾರ ರಾತ್ರಿ ಫೇಸ್​ಬುಕ್​ನಲ್ಲಿ ಪೋಸ್ಟೊಂದನ್ನು ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಧೋನಿ (MS Dhoni), ಇಂದು ಮಧ್ಯಾಹ್ನ ಎಲ್ಲಾ ಊಹಾಪೋಹಗಳಿಗೆ ನಿರಾಳದ ಉತ್ತರ ನೀಡಿದ್ದಾರೆ. ವಾಸ್ತವವಾಗಿ ಹಿಂದಿನ ದಿನ, ಧೋನಿ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಲೈವ್​ ಬರಲಿದ್ದು, ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ ಎಂದಿ ಬರೆದುಕೊಂಡಿದ್ದರು. ಧೋನಿ ಈ ರೀತಿಯ ಹೇಳಿಕೆ ನೀಡಿದ್ದೆ ತಡ, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಸ್​ನಂತೆ ಎಲ್ಲೆಡೆ ಹಬ್ಬಿತು. ಧೋನಿ ಅಭಿಮಾನಿಗಳ ಜೊತೆಗೆ ಇಡೀ ಕ್ರಿಕೆಟ್​ ಜಗತ್ತೇ ಒಂದು ಕ್ಷಣ ಶಾಕ್​ಗೆ ಒಳಗಾಗಿತ್ತು. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸೋಶಿಯಲ್ ಮೀಡಿಯಾದಲ್ಲೇ ವಿದಾಯ ಹೇಳಿದ್ದ ಧೋನಿ, ಐಪಿಎಲ್​ಗೂ ಸೋಶಿಯಲ್ ಮೀಡಿಯಾ ಮುಖಾಂತರವೇ ವಿದಾಯ ಹೇಳಲಿದ್ದಾರೇನೋ ಎಂಬ ಆತಂಕ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಆದರೆ ಇಂದು ಮಧ್ಯಾಹ್ನ ಫೇಸ್​ಬುಕ್ ಲೈವ್​ಗೆ ಬಂದ ಧೋನಿ ಮಾಡಿದ ಕೆಲಸವೇ ಬೇರೆಯಾಗಿತ್ತು.

ಅಭಿಮಾನಿಗಳಿಗೆ ಬಿಸ್ಕೆಟ್ ತಿನ್ನಿಸಿದ ಧೋನಿ

ವಾಸ್ತವವಾಗಿ ಫೇಸ್​ಬುಕ್ ಲೈವ್​ಗೆ ಬಂದ ಧೋನಿ, ಖಾಸಗಿ ಕಂಪನಿಯ ಬಿಸ್ಕೆಟ್ ಬಗ್ಗೆ ಮಾತನಾಡಿದರು. ಈ ಬಿಸ್ಕೆಟ್ ಜಾಹೀರಾತಿಗೆ 2011 ರ ವಿಶ್ವಕಪ್‌ನ ಭಾರತದ ಐತಿಹಾಸಿಕ ಗೆಲುವನ್ನು ಲಿಂಕ್ ಮಾಡುವ ಮೂಲಕ ಪ್ರಾರಂಭಿಸಿದ ಧೋನಿ, 2011 ರಂದು ಭಾರತ ವಿಶ್ವಕಪ್ ಗೆದ್ದ ವರ್ಷವೇ ಒರಿಯೋ ಬಿಸ್ಕೆಟ್ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೊಮ್ಮೆ ಈ ಬಿಸ್ಕೆಟ್ ದೇಶದಲ್ಲಿ ಬಿಡುಗಡೆಯಾಗುತ್ತಿದ್ದು, ಈ ವರ್ಷ ಟೀಂ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಹೇಳುವು ಮೂಲಕ ವಿಶ್ವಕಪ್ ಗೆಲುವನ್ನ ಒರಿಯೋ ಬಿಸ್ಕೆಟ್​ ಬಿಡುಗಡೆ ಜೊತೆಗೆ ಲಿಂಗ್ ಮಾಡಿದರು.

ಜೊತೆಗೆ ಭಾರತದಲ್ಲಿ ಈ ಒರಿಯೋ ಬಿಸ್ಕೆಟ್​ ಅನ್ನು ಮತ್ತೆ ರೀಲಾಂಚ್ ಮಾಡುವ ಮೂಲಕ 2011 ರ ವಿಶ್ವಕಪ್​ ಗೆಲ್ಲುವನ್ನು ಮತ್ತೆ ಮರುಕಳಿಸುವಂತೆ ಮಾಡೋಣ ಎಂದು ಧೋನಿ ಹೇಳಿದ್ದಾರೆ. ಆದರೆ, ದಿಗ್ಗಜ ನಾಯಕನ ಈ ಹೇಳಿಕೆಯ ನಂತರ ಕೋಪಗೊಂಡಿರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಅಭಿಮಾನಿಗಳ ಆಕ್ರೋಶ

ನೀವು ಕೋಟಿಗಟ್ಟಲೆ ಜನರ ಐಕಾನ್ ಆಗಿದ್ದೀರಿ, ಸ್ವಲ್ಪ ಹಣಕ್ಕಾಗಿ ಅವರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ನೆಟ್ಟಿಗರು ಮಹೀ ವಿರುದ್ಧ ಕೆಂಡಕಾರಿದ್ದಾರೆ.

ಇನ್ನು ವೃತ್ತಿ ಜೀವನದಲ್ಲಿ ಟೀಂ ಇಂಡಿಯಾಕ್ಕೆ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಧೋನಿ ಎಂದರೆ ತಪ್ಪಾಗಲಾರದು. ಮಹೀ ನಾಯಕತ್ವದಲ್ಲಿ 2007 ರಂದು ಭಾರತ ಮೊದಲ T20 ವಿಶ್ವಕಪ್ ಗೆಲ್ಲಲು ಯಶಸ್ವಿಯಾಯಿತು. ಇದರ ನಂತರ, 2011 ರಂದು ತವರಿನಲ್ಲಿ ODI ವಿಶ್ವಕಪ್ ಗೆಲ್ಲುವ ಮೂಲಕ ಧೋನಿ ಇತಿಹಾಸವನ್ನು ಸೃಷ್ಟಿಸಿದರು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೂ ವಶಪಡಿಸಿಕೊಂಡಿತ್ತು. ಹೀಗೆ ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವಾಗಲೇ ಇದಕ್ಕಿದಂತೆ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಿಬಿಟ್ಟಿದ್ದರು.

ಇನ್ನು ಕೇವಲ ಐಪಿಎಲ್​ನಲ್ಲಿ ಮಾತ್ರ ಆಡುತ್ತಿರುವ ಧೋನಿ, ಸಿಎಸ್​ಕೆ ತಂಡದಲ್ಲಿರುವಾಗಲೇ ಐಪಿಎಲ್​ಗೆ ವಿದಾಯ ಹೇಳುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಕೆಲವು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಐಪಿಎಲ್‌ನ ಮುಂದಿನ ಸೀಸನ್​ನಲ್ಲಿ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಖಚಿತಪಡಿಸಿದ್ದರು.

Published On - 4:29 pm, Sun, 25 September 22