Updated on: Sep 25, 2022 | 6:05 PM
ಮುಂಬರುವ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿರುವುದು ಬೌಲರ್ಗಳು.
ಅಂದರೆ ಏಷ್ಯಾಕಪ್ ಹಾಗೂ ಪ್ರಸ್ತುತ ನಡೆಯುತ್ತಿರುವ ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರ್ಗಳು ದುಬಾರಿಯಾಗಿದ್ದಾರೆ. ವಿಶೇಷ ಎಂದರೆ ಈ ವರ್ಷ ಟೀಮ್ ಇಂಡಿಯಾದ ನಾಲ್ವರು ಬೌಲರ್ಗಳು 20 ಕ್ಕಿಂತ ಹೆಚ್ಚು ಸಿಕ್ಸ್ ಹೊಡೆಸಿಕೊಂಡಿದ್ದಾರೆ.
ಹಾಗಿದ್ರೆ ಈ ವರ್ಷ ಅತ್ಯಧಿಕ ಸಿಕ್ಸ್ ಚಚ್ಚಿಸಿಕೊಂಡ ಬೌಲರ್ಗಳು ಯಾರೆಲ್ಲಾ ನೋಡೋಣ...
ಹರ್ಷಲ್ ಪಟೇಲ್: ಟೀಮ್ ಇಂಡಿಯಾ ವೇಗಿ ಹರ್ಷಲ್ ಪಟೇಲ್ ಈ ವರ್ಷ 18 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು ಈ ವೇಳೆ ಬರೋಬ್ಬರಿ 31 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದಾರೆ.
ಅವೇಶ್ ಖಾನ್: ಭಾರತ ತಂಡದ ವೇಗದ ಬೌಲರ್ ಅವೇಶ್ ಖಾನ್ ಕೂಡ ಈ ವರ್ಷ 14 ಪಂದ್ಯಗಳಿಂದ 21 ಸಿಕ್ಸ್ ಚಚ್ಚಿಸಿಕೊಂಡಿದ್ದಾರೆ.
ಯುಜ್ವೇಂದ್ರ ಚಹಾಲ್: ಟೀಮ್ ಇಂಡಿಯಾ ಸ್ಪಿನ್ನರ್ ಚಹಾಲ್ ಈ ವರ್ಷ 17 ಟಿ20 ಪಂದ್ಯಗಳಲ್ಲಿ 20 ಸಿಕ್ಸ್ ಹೊಡೆಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ವರ್ಷ 16 ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, ಈ ವೇಳೆ 20 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದಾರೆ.