ಭಾರತದ ಲೆಜೆಂಡರಿ ನಾಯಕ ಎಂಎಸ್ ಧೋನಿ (MS Dhoni) ಭಾನುವಾರ (ಮಾರ್ಚ್ 31) ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ 2024 ರ ಪಂದ್ಯ ನಂ. 13 ರಲ್ಲಿ, 42 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ನಂ. 8 ರಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಕೇವಲ 16 ಎಸೆತಗಳಲ್ಲಿ 37 ರನ್ ಸಿಡಿಸಿ ಅಜೇಯರಾಗಿ ಉಳಿದರು. ಧೋನಿಯ ಈ ಆಟದಲ್ಲಿ ನಾಲ್ಕು ಫೋರ್ ಮತ್ತು ಮೂರು ಸಿಕ್ಸರ್‌ಗಳು ಇದ್ದವು. ಸಿಎಸ್‌ಕೆ ಮಾಜಿ ನಾಯಕ ಗೆಲುವಿಗೆ ಎಷ್ಟೇ ಹೋರಾಡಿದರೂ ಅವರ ಪ್ರಯತ್ನ ವ್ಯರ್ಥವಾಯಿತು, ಚೆನ್ನೈ ಪಂದ್ಯವನ್ನು 20 ರನ್‌ಗಳಿಂದ ಸೋತಿತು.
ಸಿಎಸ್‌ಕೆ ಸೋತರೂ ಅಭಿಮಾನಿಗಳು ಧೋನಿಯ ಮನಮೋಹಕ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಂಡರು. ಇವರು ಸಿಡಿಸಿದ 37 ರನ್ ಅದ್ಭುತವಾಗಿತ್ತು. ಪಂದ್ಯದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 41 ರನ್‌ಗಳ ಅಗತ್ಯವಿದ್ದಾಗ ಡೆಲ್ಲಿ ವೇಗಿ ಅನ್ರಿಚ್ ನಾರ್ಟ್ಜೆ ಬೌಲಿಂಗ್ನಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಗಳಿಸಿದರು. ಅದರಲ್ಲೂ ಎರಡನೇ ಎಸೆತದಲ್ಲಿ ಕೇವಲ ಒಂದೇ ಕೈಯಿಂದ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತು. ಧೋನಿಯ ಒನ್ ಹ್ಯಾಂಡ್ ಸಿಕ್ಸರ್ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಅಗ್ರಸ್ಥಾನದಿಂದ ಕುಸಿದ ಸಿಎಸ್‌ಕೆ: ಪಾಯಿಂಟ್ಸ್ ಟೇಬಲ್ನಲ್ಲಿ ದೊಡ್ಡ ಬದಲಾವಣೆ
Vintage Dhoni 👌#TATAIPL fans were treated to some strong hitting by MS Dhoni
Watch the match LIVE on @JioCinema and @StarSportsIndia 💻📱#DCvCSK | @ChennaiIPL pic.twitter.com/eF4JsOwmsa
— IndianPremierLeague (@IPL) March 31, 2024
There is nothing beyond Thala’s reach 🔥💪 #IPLonJioCinema #Dhoni #TATAIPL #DCvCSK pic.twitter.com/SpDWksFDLO
— JioCinema (@JioCinema) March 31, 2024
20ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ 10 ರನ್ ಗಳಿಸಿದ ನಂತರ, ಧೋನಿ ಮೂರನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ, ಆದರೆ ಅವರು ಪಂದ್ಯದ ನಾಲ್ಕನೇ ಎಸೆತದಲ್ಲಿ ನಾಲ್ಕು ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಆಟವನ್ನು ಮುಗಿಸಿದರು.
ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿದ ಮಥೀಶ ಪತಿರಾನ: ಎಂಎಸ್ ಧೋನಿ ಮೆಚ್ಚುಗೆ
ಭಾನುವಾರದಂದು ಐಪಿಎಲ್ 2024 ರಲ್ಲಿ ಸಿಎಸ್‌ಕೆ ಮೊದಲ ಸೋಲಿನ ಹೊರತಾಗಿಯೂ, ಧೋನಿ ಹೈಲೇಟ್ ಆದರು. ಸಿಎಸ್‌ಕೆ ಪರ ಮೂರು ಸಿಕ್ಸರ್‌ಗಳನ್ನು ಗಳಿಸುವ ಮೂಲಕ ಧೋನಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಪ್ರಮುಖ ಸಿಕ್ಸರ್‌ಗಳ ಪಟ್ಟಿಯಲ್ಲಿ 4 ನೇ ಸ್ಥಾನವನ್ನು ಪಡೆದಿದ್ದಾರೆ. ಇದುವರೆಗೆ ಆಡಿದ 253 ಐಪಿಎಲ್ ಪಂದ್ಯಗಳಲ್ಲಿ, ಧೋನಿ ಅವರ ಹೆಸರಿನಲ್ಲಿ 242 ಸಿಕ್ಸರ್‌ಗಳಿವೆ. ಇದು 240 ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 241 ಸಿಕ್ಸರ್‌ಗಳಿಗಿಂತ ಒಂದು ಹೆಚ್ಚು.
ವೆಸ್ಟ್ ಇಂಡೀಸ್ನ ಮಾಜಿ ನಾಯಕ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಹೊಂದಿದ್ದಾರೆ. 142 ಪಂದ್ಯಗಳಲ್ಲಿ 357 ಗರಿಷ್ಠ ಸಿಕ್ಸರ್ ಬಾರಿಸಿದ್ದಾರೆ. ಅವರ ನಂತರ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ 245 ಪಂದ್ಯಗಳಲ್ಲಿ 261 ಸಿಕ್ಸರ್‌ಗಳನ್ನು ಹೊಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ