DC vs CSK: ಒಂದೇ ಕೈಯಿಂದ ಅದ್ಭುತ ಕ್ಯಾಚ್‌ ಹಿಡಿದ ಮಥೀಶ ಪತಿರಾನ: ಎಂಎಸ್​ ಧೋನಿ ಮೆಚ್ಚುಗೆ

DC vs CSK: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದ ಕೆಲವು ಕ್ಷಣಗಳು ಇದೀಗ ಭಾರಿ ಚರ್ಚೆ ಹುಟ್ಟುಹಾಕಿವೆ. ಅದರಲ್ಲೂ ಇಂದಿನ ಪಂದ್ಯದಲ್ಲಿ ಸಿಎಸ್‌ಕೆಯ ವೇಗಿ ಮಥೀಶ ಪತಿರಾನ ಅವರು ಒಂದೇ ಕೈಯಿಂದ ಹಿಡಿದ ಅದೊಂದು ಅದ್ಭುತವಾದ ಕ್ಯಾಚ್​ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ.

DC vs CSK: ಒಂದೇ ಕೈಯಿಂದ ಅದ್ಭುತ ಕ್ಯಾಚ್‌ ಹಿಡಿದ ಮಥೀಶ ಪತಿರಾನ: ಎಂಎಸ್​ ಧೋನಿ ಮೆಚ್ಚುಗೆ
ಮಥೀಶ ಪತಿರಾನ
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 31, 2024 | 10:12 PM

ಐಪಿಎಲ್ 2024ರ ಈ ಆವೃತ್ತಿಯ 13ನೇ ಪಂದ್ಯದಲ್ಲಿ ಭಾನುವಾರ ವಿಶಾಖಪಟ್ಟಣಂ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದ ಕೆಲವು ಕ್ಷಣಗಳು ಇದೀಗ ಭಾರಿ ಚರ್ಚೆ ಹುಟ್ಟುಹಾಕಿವೆ. ಅದರಲ್ಲೂ ಇಂದಿನ ಪಂದ್ಯದಲ್ಲಿ ಸಿಎಸ್‌ಕೆಯ ವೇಗಿ ಮಥೀಶ ಪತಿರಾನ (Matheesha Pathirana) ಅವರು ಒಂದೇ ಕೈಯಿಂದ ಹಿಡಿದ ಅದೊಂದು ಅದ್ಭುತವಾದ ಕ್ಯಾಚ್​ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಸದ್ಯ ಪತಿರಾನ ಅವರ ಕ್ಯಾಚ್ ಈ ಆವೃತ್ತಿಯಲ್ಲಿನ ಇದುವರೆಗಿನ ‘ಅತ್ಯುತ್ತಮ ಕ್ಯಾಚ್’ ಎಂದು ಹೇಳಲಾಗುತ್ತಿದೆ.

ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಜೋಡಿಯು ಮೊದಲಿಗೆ ಉತ್ತಮ ಪ್ರದರ್ಶನ ನೀಡಿದರು. ಇಬ್ಬರೂ ಬ್ಯಾಟಿಂಗ್ ಪವರ್‌ಪ್ಲೇ ಒಳಗೆ 62 ರನ್ ಗಳಿಸುವಲ್ಲಿ ಯಶಸ್ವಿಯಾದರು. ಹಾಫ್ ಸೆಂಚುರಿ ಹೊಡೆದ ಡೇವಿಡ್​ ವಾರ್ನರ್ ಮುಸ್ತಾಫಿಜುರ್​ ಎಸೆದ ಚೆಂಡನ್ನು ಹಿಂಬದಿಗೆ ಹೊಡೆದರು. ಈ ವೇಳೆ ಅಲ್ಲೇ ಇದ್ದ ಪತಿರಾನ ಗಾಳಿಯಲ್ಲಿ ಹಾರಿ ಒಂದೇ ಕೈಯಿಂದ ಅದ್ಭುತ ಕ್ಯಾಚ್‌ ಹಿಡಿಯುವ ಮೂಲಕ ವಾರ್ನರ್​​ ಅವರ ವಿಕೆಟ್ ಪತನಗೊಳಿಸಿದರು.

ಮಥೀಶ ಪತಿರಾನ ಅದ್ಭುತವಾದ ಕ್ಯಾಚ್

ಮಥೀಶ ಪತಿರಾನ ಹಿಡಿದ ಕ್ಯಾಚ್​ಗೆ ಎಂಎಸ್​ ಧೋನಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: IPL 2024: ವಾರ್ನರ್ ಸಿಡಿಲಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!

9 ಓವರಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಕೇವಲ ಒಂದು ವಿಕೆಟ್​ ನಷ್ಟಕ್ಕೆ 90 ರನ್​ಗಳನ್ನು ಗಳಿಸಿತ್ತು. ಇತ್ತ ಡೇವಿಡ್ ವಾರ್ನರ್​ 32 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ, ಮುಂದಿನ ಓವರ್‌ನಲ್ಲಿ ಪತಿರಾನ ಅವರ ಅದ್ಭುತ ಕ್ಯಾಚ್‌ನಿಂದ ವಾರ್ನರ್ ಔಟಾದರು.

ಮತ್ತಷ್ಟು ಕ್ರೀಡಾ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್