MS Dhoni Six: ಎಂಎಸ್ ಧೋನಿ ಸಿಡಿಸಿದ ಆ ಒಂದು ಸಿಕ್ಸ್​ಗೆ ದಂಗಾದ ನರೇಂದ್ರ ಮೋದಿ ಸ್ಟೇಡಿಯಂ: ವೈರಲ್ ವಿಡಿಯೋ

|

Updated on: Apr 01, 2023 | 12:16 PM

GT vs CSK, IPL 2023: ಐಪಿಎಲ್ 2023ರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್​ನ ಕೊನೆಯ 20 ಓವರ್​ನ ಮೂರನೇ ಎಸೆತದಲ್ಲಿ ಎಂಎಸ್ ಧೋನಿ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು.

MS Dhoni Six: ಎಂಎಸ್ ಧೋನಿ ಸಿಡಿಸಿದ ಆ ಒಂದು ಸಿಕ್ಸ್​ಗೆ ದಂಗಾದ ನರೇಂದ್ರ ಮೋದಿ ಸ್ಟೇಡಿಯಂ: ವೈರಲ್ ವಿಡಿಯೋ
MS Dhoni Six
Follow us on

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ 2023 ರ (IPL 2023) ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ರೋಚಕ ಮ್ಯಾಚ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಸಿಎಸ್​ಕೆ (GT vs CSK) ಡೆತ್ ಓವರ್ ಬೌಲಿಂಗ್​ನಲ್ಲಿ ಎಡವಿತು. ರುತುರಾಜ್ ಗಾಯಕ್ವಾಡ್ (Ruturaj Gaikwad) 90 ರನ್ ಸಿಡಿಸಿದ ಪರಿಣಾಮ ಚೆನ್ನೈ ಮೊತ್ತ 178 ಕ್ಕೆ ಬಂದು ನಿಂತಿರು. ಇದಕ್ಕುತ್ತರವಾಗಿ ಜಿಟಿ ಭರ್ಜರಿ ಬ್ಯಾಟಿಂಗ್ ನಡೆಸಿ ಇನ್ನೂ 4 ಎಸೆತ ಇರುವಂತೆ 5 ವಿಕೆಟ್​ಗಳಿಂದ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಚೆನ್ನೈ ಸೋತರೂ ನಾಯಕ ಎಂಎಸ್ ಧೋನಿ (MS Dhoni) ಸಿಡಿಸಿದ ಒಂದು ಸಿಕ್ಸ್ ಅಭಿಮಾನಿಗಳಿಗೆ ಸಂತಸ ಮೂಡಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇನ್ನಿಂಗ್ಸ್​ನ ಕೊನೆಯ 20 ಓವರ್​ನ ಮೂರನೇ ಎಸೆತದಲ್ಲಿ 41 ವರ್ಷದ ಎಂಎಸ್ ಧೋನಿ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಜೋಶ್ವಾ ಲಿಟಲ್ ಎಸೆತದ ಬಾಲ್ ಅನ್ನು ಚೆನ್ನಾಗಿ ಅರಿತು ಕೂಂಡ ಕೂಲ್ ಕ್ಯಾಪ್ಟನ್ ಲೆಗ್​ಸೈಡ್ ಕಡೆಗೆ ಸಿಕ್ಸ್ ಬಾರಿಸಿದರು. ಧೋನಿ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು ಈ ಶಾಟ್ ನೋಡಿ ಒಂದು ಕ್ಷಣ ದಂಗಾದರು. ಇಡೀ ನರೇಂದ್ರ ಮೋದಿ ಸ್ಟೇಡಿಯಂ ಧೋನಿಯ ಹೆಸರು ಜೋರಾಗಿ ಕೂಗಿತು. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ.

ಇದನ್ನೂ ಓದಿ
IPL 2023 Points Table: ಗುಜರಾತ್-ಚೆನ್ನೈ ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಪಾಯಿಂಟ್ ಟೇಬಲ್ ಹೇಗಿದೆ?
IPL 2023, PBKS vs KKR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಒಂದೇ ದಿನ ಎರಡು ಪಂದ್ಯ: ಯಾವುದೆಲ್ಲ?, ಇಲ್ಲಿದೆ ಮಾಹಿತಿ
MS Dhoni: ಎಂಎಸ್ ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ಚೆನ್ನೈ-ಗುಜರಾತ್ ಪಂದ್ಯದ ರೋಚಕ ಫೊಟೋ ಇಲ್ಲಿದೆ

MS Dhoni: ಐಪಿಎಲ್ ಸಿಕ್ಸರ್ ಕಿಂಗ್​ಗಳ ಪಟ್ಟಿಗೆ ಎಂಎಸ್ ಧೋನಿ ಎಂಟ್ರಿ..!

 

ಧೋನಿ ಇಂಜುರಿ:

ಮೊದಲ ಪಂದ್ಯದಲ್ಲೇ ಸಿಎಸ್​ಕೆ ನಾಯಕ ಎಂಎಸ್ ಧೋನಿ ಇಂಜುರಿಗೆ ತುತ್ತಾದ ಘಟನೆ ನಡೆದಿದೆ. ವಿಕೆಟ್ ಕೀಪಿಂಗ್ ಮಾಡುತ್ತಿರುವಾಗ ಚೆಂಡು ಹಿಡಿಯಲು ಡೈವ್ ಬಿದ್ದಾಗ ಧೋನಿ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಎಂಎಸ್​ಡಿಯ ಮೊಣ ಕಾಲಿಗೆ ಜೋರಾದ ಪೆಟ್ಟಾಗಿದ್ದು ಮೈದಾನದಲ್ಲಿ ಏಳಲು ಸಾಧ್ಯವಾಗದೆ ಕಷ್ಟ ಪಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬಳಿಕ ಸಿಎಸ್​ಕೆ ಫಿಸಿಯೊ ಧೋನಿ ಇರುವ ಕಡೆ ಬಂದು ಆರೈಕೆ ಮಾಡಿದರು. ಸದ್ಯ ಧೋನಿಯ ಗಾಯ ಎಷ್ಟರ ಮಟ್ಟಿಗೆ ದೊಡ್ಡದಾಗಿದೆ ಎಂಬುದು ತಿಳಿದುಬಂದಿಲ್ಲ. ಅಥವಾ ಮುಂದಿನ ಪಂದ್ಯಕ್ಕೆ ಲಭ್ಯರಿರುತ್ತಾರ ಎಂಬುದು ಇನ್ನಷ್ಟೆ ಖಚಿತವಾಗಬೇಕಿದೆ.

 

ಗುಜರಾತ್ vs ಚೆನ್ನೈ:

ಈ ಪಂದ್ಯದಲ್ಲಿ ಟಾಸ್ ಸೋತ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಲ್ಲೇ ಡೆವೋನ್ ಕಾನ್ವೆ (1) ವಿಕೆಟ್ ಕಳೆದುಕೊಂಡರೂ ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ (23) ಪವರ್ ಪ್ಲೇ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಆದರೆ, ಬೆನ್ ಸ್ಟೋಕ್ಸ್ (7) ಆಟ ನಡೆಯಲಿಲ್ಲ. ಅಂಬಟಿ ರಾಯುಡು (12) ಕೂಡ ಬೇಗನೆ ನಿರ್ಗಮಿಸಿದರು. ಇದರ ನಡುವೆ ಗಾಯಕ್ವಾಡ್​ ಸ್ಫೋಟಕ ಆಟವಾಡಿ ತಂಡಕ್ಕೆ ಆಧಾರವಾದದರು. 50 ಎಸೆತಗಳಲ್ಲಿ 41ಫೋರ್​ ಹಾಗೂ ಬರೋಬ್ಬರಿ 9 ಸಿಕ್ಸರ್ ಸಿಡಿಸಿ 92 ರನ್ ಚಚ್ಚಿದರು. ಶಿವಂ ದುಬೆ 19 ರನ್ ಗಳಿಸಿದರೆ ಎಂಎಸ್ ಧೋನಿ ಅಜೇಯ 14 ರನ್ ಬಾರಿಸಿದರು. ಚೆನ್ನೈ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು. ಗುಜರಾತ್ ಪರ ಶಮಿ, ರಶೀದ್ ಖಾನ್ ಮತ್ತು ಅಲ್ಜರಿ ಜೋಸೆಫ್ ತಲಾ 2 ವಿಕೆಟ್ ಪಡೆದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಜಿಟಿ ತಂಡ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ ವೃದ್ದಿಮಾನ್ ಸಾಹ (25) ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ 22 ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 8 ರನ್​ಗೆ ನಿರ್ಗಮಿಸಿದರು. ಆದರೆ, ಗಿಲ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ಹತ್ತಿರ ಮಾಡಿದರು. 36 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್​ನೊಂದಿಗೆ 63 ರನ್ ಗಳಿಸಿದರು. ಕೊನೆಯಲ್ಲಿ ವಿಜಯ್ ಶಂಕರ್ (27), ರಾಹುಲ್ ತೇವಾಟಿಯ (15*) ಹಾಗೂ ರಶೀದ್ ಖಾನ್ (10*) ಬ್ಯಾಟ್ ಬೀಸಿ ತಂಡಕ್ಕೆ ಗೆಲುವು ತಂದಿಟ್ಟರು. ಜಿಟಿ 19.2 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿ ಜಯ 5 ವಿಕೆಟ್​ಗಳ ಜಯ ಸಾಧಿಸಿತು. ರಶೀದ್ ಖಾನ್ ಪಂದ್ಯಶ್ರೇಷ್ಠ ಬಾಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:29 am, Sat, 1 April 23