ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಆಹಾರ ಪ್ರಿಯ ಎಂಬ ವಿಚಾರ ಗೊತ್ತೇ ಇದೆ. ಇದಕ್ಕೆ ಸಾಕ್ಷಿಯಾಗಿ ಅವರು ಅತ್ಯುತ್ತಮ ಆಹಾರ ಸಿಗುವ ರೆಸ್ಟೋರೆಂಟ್ಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಆದರೀಗ ಧೋನಿ ಪಾಕಿಸ್ತಾನದ ಪಾಕ ಪದ್ಧತಿಗೂ ಮಾರು ಹೋಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ತುಣುಕಿನಲ್ಲಿ ಸಿಎಸ್ಕೆ ತಂಡದ ನಾಯಕ ಆಹಾರ ಸವಿಯಲು ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಸಲಹೆ ನೀಡುತ್ತಿರುವುದು ಕಾಣಬಹುದು.
ಮೇಲ್ನೋಟಕ್ಕೆ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುತ್ತಿರುವಂತೆ ಕಂಡು ಬರುವ ಈ ವಿಡಿಯೋದಲ್ಲಿ, ಆಹಾರ ಸವಿಸಲು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ನೀವು ಒಳ್ಳೆಯ ಆಹಾರವನ್ನು ಸೂಚಿಸಿದರೂ ನಾನು ಅಲ್ಲಿಗೆ ಹೋಗುವುದಿಲ್ಲ. ನನಗೆ ಆಹಾರ ಎಂದರೆ ಇಷ್ಟ. ಆದರೆ ಅಲ್ಲಿಗೆ ಹೋಗುವುದಿಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ.
ಇದೀಗ ಧೋನಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿದೆ. ಅಂದಹಾಗೆ ಮಹೇಂದ್ರ ಸಿಂಗ್ ಧೋನಿ ಪಾಕಿಸ್ತಾನದಲ್ಲಿನ ಪಾಕ ಪದ್ಧತಿಯ ರುಚಿಯನ್ನು ಸವಿದೇ ಈ ಸಲಹೆ ನೀಡಿದ್ದಾರೆ ಎನ್ನಬಹುದು.
ಏಕೆಂದರೆ 2006 ರಲ್ಲಿ ಭಾರತ ತಂಡವು ಪಾಕಿಸ್ತಾನ್ ಪ್ರವಾಸ ಕೈಗೊಂಡಿದ್ದಾಗ ಮಹೇಂದ್ರ ಸಿಂಗ್ ಧೋನಿ ಕೂಡ ತಂಡದಲ್ಲಿದ್ದರು. ರಾಹುಲ್ ದ್ರಾವಿಡ್ ನಾಯಕತ್ವದ ಟೀಮ್ ಇಂಡಿಯಾದಲ್ಲಿ ಅಂದು ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿದ್ದರು. ಈ ಪ್ರವಾಸದ ವೇಳೆ ಧೋನಿ ಪಾಕಿಸ್ತಾನದಲ್ಲಿನ ವಿಶೇಷ ಆಹಾರಗಳ ರುಚಿಗಳನ್ನು ನೋಡಿರುತ್ತಾರೆ. ಹೀಗಾಗಿಯೇ ಪಾಕ್ನ ಆಹಾರ ಪದ್ಧತಿಯ ರುಚಿಯನ್ನು ಸವಿಯಲು ಧೋನಿ ಸಲಹೆ ನೀಡಿರಬಹುದು.
ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸಜ್ಜಾಗುತ್ತಿದ್ದಾರೆ. ಐಪಿಎಲ್ 2024 ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಇದಾಗ್ಯೂ ಇದು ಅವರ ಕೊನೆಯ ಐಪಿಎಲ್ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಟೂರ್ನಿ ಆರಂಭವಾದ ಬಳಿಕ ಅವರೇ ಸ್ಪಷ್ಟನೆ ನೀಡಲಿದ್ದಾರೆ.
Published On - 10:29 am, Sat, 30 December 23