MS Dhoni: ಮೆಗಾ ಹರಾಜಿಗೂ ಮುನ್ನ ಸಿಎಸ್​​ಕೆ ಮಾಸ್ಟರ್ ಪ್ಲಾನ್: ಚೆನ್ನೈಗೆ ಬಂದಿಳಿದ ಧೋನಿ

| Updated By: Vinay Bhat

Updated on: Jan 28, 2022 | 11:45 AM

IPL 2022 Mega Auction: ಐಪಿಎಲ್ 2022 ಮೆಗಾ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳಿರುವಾಗ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ.

MS Dhoni: ಮೆಗಾ ಹರಾಜಿಗೂ ಮುನ್ನ ಸಿಎಸ್​​ಕೆ ಮಾಸ್ಟರ್ ಪ್ಲಾನ್: ಚೆನ್ನೈಗೆ ಬಂದಿಳಿದ ಧೋನಿ
MS Dhoni CSK IPL 2022
Follow us on

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಯುವುದೇ ಅಥವಾ ವಿದೇಶಕ್ಕೆ ಸ್ಥಳಾಂತರಗೊಳ್ಳಲಿದೆಯೇ ಎಂಬ ಪ್ರಶ್ನೆಗಳಿಗೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ. ಬಿಸಿಸಿಐ ಅಂತೂ ಭಾರತದಲ್ಲೇ ಐಪಿಎಲ್ 2022 (IPL 2022) ಆಯೋಜನೆ ಮಾಡಲು ಹರಸಾಹಸ ನಡೆಸುತ್ತಿದೆ. ಇದರ ನಡುವೆ ಕೊರೊನಾ ಆರ್ಭಟ ಕೂಡ ಜೋರಾಗಿದೆ. ಒಂದು ಮೂಲದ ಪ್ರಕಾರ, 15ನೇ ಆವೃತ್ತಿಯ ಐಪಿಎಲ್​ನ ಸಂಪೂರ್ಣ ಪಂದ್ಯಗಳು ಮುಂಬೈನಲ್ಲಿ ನಡೆಸಲು ತೀರ್ಮಾನಿಸಿದೆ. ಸದ್ಯದಲ್ಲೇ ಬಿಸಿಸಿಐ ಈ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಲಿದೆಯಂತೆ. ಇದಕ್ಕೂ ಮುನ್ನ ಫೆಬ್ರವರಿ 12, 13 ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಮೆಗಾ ಆಕ್ಷನ್ (IPL Mega Auction) ಏರ್ಪಡಿಸಲಾಗಿದೆ. ಈಗಾಗಲೇ ಬಹುತೇಕ ಎಲ್ಲ ಫ್ರಾಂಚೈಸಿ ಹರಾಜು ಪ್ರಕ್ರಿಯೆಗೆ ಭರ್ಜರಿ ತಯಾರಿ ಆರಂಭಿಸಿದೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai SUper Kings) ವಿಶೇಷ ಪ್ಲಾನ್ ರೂಪಿಸಿದಂತಿದೆ.

ಹೌದು, ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳಿರುವಾಗ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ. ಮೆಗಾ ಹರಾಜಿಗೂ ಮೊದಲು ತಂಡಕ್ಕೆ ಯಾವ ಆಟಗಾರರನ್ನು ಖರೀದಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮ್ಯಾನೇಜ್ ಮೆಂಟ್ ಜೊತೆಗೆ ಚರ್ಚಿಸಲು ಧೋನಿ ಚೆನ್ನೈಗೆ ಬಂದಿದ್ದಾರೆ. ಎಂಎಸ್​​ಡಿ ಸಿಎಸ್​ಕೆ ತಂಡದ ಪ್ರಮುಖ ಅಂಗವಾಗಿದ್ದು, ಆಟಗಾರರ ಖರೀದಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಅವರು ವಾರಕ್ಕೂ ಮೊದಲೇ ಚೆನ್ನೈಗೆ ಬಂದಿಳಿದಿದ್ದಾರೆ ಎಂದು ತಿಳಿದುಬಂದಿದೆ.

 

ಚೆನ್ನೈಗೆ ಹರ್ಷಲ್ ಪಟೇಲ್?:

ಕಳೆದ ಬಾರಿಯ ಐಪಿಎಲ್​​ನಲ್ಲಿ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿದ ಆರ್​ಸಿಬಿ ಬೌಲರ್‌ ಹರ್ಷಲ್‌ ಪಟೇಲ್‌ ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುವ ಬಯಕೆ ಹೊರಹಾಕಿದ್ದಾರೆ. ಎಂಎಸ್‌ ಧೋನಿ ತಮ್ಮ ಆದರ್ಶ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಎಂಎಸ್‌ ಧೋನಿಯೇ ಸಾರ್ವಕಾಲಿಕ ಶ್ರೇಷ್ಠ ಕಪ್ತಾನ ಎಂದು ಕರೆದಿದ್ದಾರೆ.

ಐಪಿಎಲ್ 2022 ನಮ್ಮಲ್ಲಿ ಆಯೋಜಿಸಿ ಎಂದ ಆಫ್ರಿಕಾ:

ಐಪಿಎಲ್ 2022 ಆಯೋಜನೆ ಕುರಿತು ಗೊಂದಲದಲ್ಲಿರುವ ಬಿಸಿಸಿಐಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ತಮ್ಮ ದೇಶದಲ್ಲಿ ಐಪಿಎಲ್‌ ನಡೆಸುವುದಾದರೆ ಕಡಿಮೆ ಬೆಲೆಯಲ್ಲಿ ಹೊಟೇಲ್‌ಗ‌ಳು, ಕಡಿಮೆ ವೆಚ್ಚದ ವಿಮಾನ ಸಂಚಾರದ ಮೂಲಕ ಇಡೀ ಕೂಟವನ್ನು ಮುಗಿಸಿಕೊಡುವುದಾಗಿ ಹೇಳಿದೆ. ಖರ್ಚಿನ ದೃಷ್ಟಿಯಿಂದ ಮಾತ್ರವಲ್ಲ, ಸುರಕ್ಷತೆ, ತಂಪು ವಾತಾವರಣದ ದೃಷ್ಟಿಯಲ್ಲೂ ದಕ್ಷಿಣ ಆಫ್ರಿಕಾ ಸೂಕ್ತವಾಗಿದೆ ಎಂದು ಹೇಳಿದೆ. ಆದರೆ ಬಿಸಿಸಿಐ ಈ ಯೋಜನೆ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

IPL 2022: ಐಪಿಎಲ್ 15ನೇ ಆವೃತ್ತಿ ಆಯೋಜನೆಗೆ ಸ್ಥಳ ನಿಗದಿ ಮಾಡಿದ ಬಿಸಿಸಿಐ: ಮೆಗಾ ಆಕ್ಷನ್ ಬಳಿಕ ಅನೌನ್ಸ್

India vs West Indies: ಅಶ್ವಿನ್​ರನ್ನು ಏಕದಿನ-ಟಿ20 ಸರಣಿಯಿಂದ ಹೊರಗಿಟ್ಟಿದ್ದು ಯಾಕೆ ಗೊತ್ತೇ?: ಕಾರಣ ಬಹಿರಂಗ