IPL 2022: ಐಪಿಎಲ್ 15ನೇ ಆವೃತ್ತಿ ಆಯೋಜನೆಗೆ ಸ್ಥಳ ನಿಗದಿ ಮಾಡಿದ ಬಿಸಿಸಿಐ: ಮೆಗಾ ಆಕ್ಷನ್ ಬಳಿಕ ಅನೌನ್ಸ್

IPL 2022: ಐಪಿಎಲ್ 15ನೇ ಆವೃತ್ತಿ ಆಯೋಜನೆಗೆ ಸ್ಥಳ ನಿಗದಿ ಮಾಡಿದ ಬಿಸಿಸಿಐ: ಮೆಗಾ ಆಕ್ಷನ್ ಬಳಿಕ ಅನೌನ್ಸ್
IPL 2022

ಮುಂಬೈ ಕ್ರೀಡಾಂಗಣದ ಆಸುಪಾಸಿನಲ್ಲೇ ಆಟಗಾರರಿಗೆ ಕ್ವಾರಂಟೈನ್ ಆಗಲು ಫೈವ್ ಸ್ಟಾರ್ ಹೊಟೇಲ್​ಗಳು ಕೂಡ ಇವೆ. ಹೀಗಾಗಿ ಐಪಿಎಲ್ 2022ರ ಎಲ್ಲ ಪಂದ್ಯ ಮುಂಬೈನಲ್ಲೇ ನಡೆಯಲಿದೆಯಂತೆ. ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿನ ಬಳಿಕ ಬಿಸಿಸಿಐ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.

TV9kannada Web Team

| Edited By: Vinay Bhat

Jan 28, 2022 | 10:44 AM

ಕಳೆದೆರಡು ಆವೃತ್ತಿಗಳಂತೆಯೇ ಈ ಬಾರಿ ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (Indian Premier League) ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಆದರೆ, 15ನೇ ಆವೃತ್ತಿಯ ಐಪಿಎಲ್‌ ಅನ್ನು ಭಾರತದಲ್ಲೇ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐ ಹಲವು ಸವಾಲುಗಳು ಎದುರಿಸಲು ತಯಾರಾಗಿದೆ. ದೇಶದಲ್ಲಿ ಕೋವಿಡ್‌-19 ಪ್ರಕರಣಗಳು ಇಳಿಮುಖವಾದರೆ, 2022ರ ಐಪಿಎಲ್‌ (IPL 2022) ಟೂರ್ನಿಯನ್ನು ಭಾರತದಲ್ಲಿಯೇ ಮುಚ್ಚಿದ ಅಂಗಣಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಬಿಸಿಸಿಐನಲ್ಲಿ (BCCI) ನಡೆದಿರುವ ಬೆಳವಣಿಗೆಗಳನ್ನು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ ಎಲ್ಲ ಪಂದ್ಯಗಳು ಮುಂಬೈನಲ್ಲಿ ಮಾತ್ರ ನಡೆಯಲಿದೆ ಎಂದು ಹೇಳಲಾಗಿದೆ. ಮುಂಬೈನಲ್ಲಿರುವ ಮೂರು ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವ ಬಗ್ಗೆ ಬಿಸಿಸಿಐ ತೀರ್ಮಾನಿಸಿದೆಯಂತೆ.

ಮುಂಬೈ ಕ್ರೀಡಾಂಗಣದ ಆಸುಪಾಸಿನಲ್ಲೇ ಆಟಗಾರರಿಗೆ ಕ್ವಾರಂಟೈನ್ ಆಗಲು ಫೈವ್ ಸ್ಟಾರ್ ಹೊಟೇಲ್​ಗಳು ಕೂಡ ಇವೆ. ಹೀಗಾಗಿ ಐಪಿಎಲ್ 2022ರ ಎಲ್ಲ ಪಂದ್ಯ ಮುಂಬೈನಲ್ಲೇ ನಡೆಯಲಿದೆಯಂತೆ. ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿನ ಬಳಿಕ ಬಿಸಿಸಿಐ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.

2021ರ ಟೂರ್ನಿಯನ್ನು ಭಾರತದಲ್ಲೇ ಆರಂಭಿಸಿದ್ದರೂ ಬಯೋಬಬಲ್‌ನಲ್ಲಿ ಕೋವಿಡ್‌ ಪತ್ತೆಯಾದ ಕಾರಣ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬಳಿಕ ಶಾರ್ಜಾ, ದುಬೈ, ಅಬುಧಾಬಿಯಲ್ಲಿ ಪಂದ್ಯಾವಳಿ ಪೂರ್ತಿಗೊಳಿಸಲಾಗಿತ್ತು. ಆದರೆ 10 ತಂಡಗಳು ಪಾಲ್ಗೊಳ್ಳುವ 15ನೇ ಆವೃತ್ತಿಯ ಐಪಿಎಲ್‌ ವಿದೇಶಗಳಲ್ಲಿ ನಡೆಸುವ ಬದಲು ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡಾ ಭಾರತದಲ್ಲೇ ಟೂರ್ನಿ ನಡೆಸುತ್ತೇವೆಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.

ಮುಂಬೈನಲ್ಲಿ 3 ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಗಳಿವೆ. ವಾಂಖೇಡೆ, ಬ್ರಾಬೋನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಬಹುದು. ಅಗತ್ಯವಿದ್ದರೆ ಪುಣೆ ಸ್ಟೇಡಿಯಂನಲ್ಲೂ ಕೆಲ ಪಂದ್ಯಗಳನ್ನು ನಡೆಸಬಹುದು. ಮುಂಬೈನಿಂದ ಪುಣೆಗೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬಹುದು. ಅಲ್ಲದೇ 10 ತಂಡಗಳಿಗೆ ಉಳಿದುಕೊಳ್ಳಲು ಹೋಟೆಲ್‌ಗಳ ಕೊರತೆಯೂ ಇಲ್ಲ. ಹೀಗಾಗಿ ಬಿಸಿಸಿಐ ಮುಂಬೈನಲ್ಲಿ ಆಯೋಜಿಸಬಹುದು ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ಮತ್ತೊಂದು ಆಯ್ಕೆಯಾಗಿದೆ. ಆದರೆ, ಪ್ರಸ್ತುತ ಅದನ್ನು ಆಯ್ಕೆಯಾಗಿ ನಾವು ಆಲೋಚಿಸುತ್ತಿಲ್ಲ. ಅದು ಕೊನೆಯ ಆಯ್ಕೆಯಷ್ಟೇ.. ಆದರೆ, ಪ್ರೇಕ್ಷಕರ ಪ್ರವೇಶ ಕುರಿತಂತೆ ಈಗಲೇ ಸುಲಭವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಟೂರ್ನಮೆಂಟ್ ಹತ್ತಿರವಾಗುತ್ತಿದ್ದಂತೆ ನಾವು ಅದರ ಕಡೆಗೆ ಗಮನ ಹರಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು 2022ರ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಏಪ್ರಿಲ್ 02ರಿಂದ ಆರಂಭವಾಗಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ಈ ಮೊದಲು ತೀರ್ಮಾನಿಸಿದ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್‌ 27ರಿಂದ ಐಪಿಎಲ್‌ ಆಯೋಜಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಟೂರ್ನಿಯು ಮಾರ್ಚ್‌ ಕೊನೆಯಲ್ಲಿ ಆರಂಭವಾದರೆ, ಮೇ ಕೊನೆಯ ವಾರದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿದೆ. ಆದರೆ, ಇದು ಅಧಿಕೃತ ಮಾಹಿತಿಯಲ್ಲ.

India vs West Indies: ಅಶ್ವಿನ್​ರನ್ನು ಏಕದಿನ-ಟಿ20 ಸರಣಿಯಿಂದ ಹೊರಗಿಟ್ಟಿದ್ದು ಯಾಕೆ ಗೊತ್ತೇ?: ಕಾರಣ ಬಹಿರಂಗ

Follow us on

Related Stories

Most Read Stories

Click on your DTH Provider to Add TV9 Kannada