AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಅಭಿಮಾನಿಗಳು

MS Dhoni: ಧೋನಿ ಹುಟ್ದಬ್ಬ… ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಅಭಿಮಾನಿಗಳು

ಝಾಹಿರ್ ಯೂಸುಫ್
|

Updated on: Jul 07, 2024 | 2:31 PM

Share

MS Dhoni Birthday: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕನೆಂಬ ವಿಶ್ವ ದಾಖಲೆ ಹೊಂದಿರುವ ಮಹೇಂದ್ರ ಸಿಂಗ್ ಧೋನಿಗೆ ಇಂದು 43ನೇ ಜನ್ಮದಿನದ ಸಂಭ್ರಮ. ಈ ಜನ್ಮದಿನವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದ್ದಾರೆ. ಅದರಲ್ಲೂ ವಿಜಯವಾಡದ ಧೋನಿ ಫ್ಯಾನ್ಸ್​, 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ನೆಚ್ಚಿನ ಆಟಗಾರನ ಹುಟ್ದಬ್ಬವನ್ನು ಸಂಭ್ರಮಿಸಿದ್ದಾರೆ.

ಟೀಮ್ ಇಂಡಿಯಾ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಇಂದು 43ನೇ ವರ್ಷದ ಹುಟ್ಟುಹಬ್ಬ. ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಲವು ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಇದರ ನಡುವೆ ಆಂಧ್ರಪದೇಶದ ವಿಜಯವಾಡದ ಧೋನಿ ಫ್ಯಾನ್ಸ್ ಮುಗಿಲೆತ್ತರಕ್ಕೆ ಕಟೌಟ್ ನಿಲ್ಲಿಸಿದ್ದಾರೆ. ಅದು ಕೂಡ ಬರೋಬ್ಬರಿ 100 ಅಡಿ ಕಟೌಟ್.

ಭಾರತ ತಂಡದ ಮಾಜಿ ನಾಯಕನ 100 ಅಡಿಯ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ವಿಜಯವಾಡ ಧೋನಿ ಫ್ಯಾನ್ಸ್ ಎಂಎಸ್​ಡಿ ಹುಟ್ಟುಹಬ್ಬದ ಸಂಭ್ರಮವನ್ನು ಮುಗಿಲೆತ್ತರಕ್ಕೇರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೋನಿ ಫ್ಯಾನ್ಸ್ ಕಡೆಯಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

2004 ರಲ್ಲಿ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದರ ನಡುವೆ 90 ಟೆಸ್ಟ್ ಪಂದ್ಯಗಳನ್ನಾಡಿದ್ದ ಧೋನಿ 1 ದ್ವಿಶತಕ ಹಾಗೂ 6 ಶತಕ ಮತ್ತು 33 ಅರ್ಧಶತಕಗಳೊಂದಿಗೆ ಒಟ್ಟು 4876 ರನ್ ಕಲೆಹಾಕಿದ್ದರು. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 350 ಪಂದ್ಯಗಳನ್ನಾಡಿದ್ದ ಧೋನಿ, 10 ಶತಕ ಮತ್ತು 73 ಅರ್ಧಶತಕಗಳೊಂದಿಗೆ ಒಟ್ಟು 10773 ರನ್ ಬಾರಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ 98 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ 2 ಅರ್ಧಶತಕಗಳೊಂದಿಗೆ ಒಟ್ಟು 1617 ರನ್ ಕಲೆಹಾಕಿದ್ದಾರೆ.

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆದರೆ ಕಳೆದ ಸೀಸನ್​ನಲ್ಲಿ ಸಿಎಸ್​ಕೆ ತಂಡದ ನಾಯಕತ್ವ ತೊರೆದಿರುವ ಕಾರಣ ಅವರು ಮುಂದಿನ ಸೀಸನ್​ನಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಸಿಗಲು ಐಪಿಎಲ್ ಆರಂಭದವರೆಗೆ ಕಾಯಲೇಬೇಕು.