MI vs UPW Highlights: ಕೌರ್ ಪಡೆಗೆ ಸುಲಭ ತುತ್ತಾದ ಯುಪಿ; ಫೈನಲ್​ಗೆ ಮುಂಬೈ

|

Updated on: Mar 24, 2023 | 10:55 PM

MI vs UPW, WPL 2023:ಶುಕ್ರವಾರ ಸಂಜೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ, ಯುಪಿ ವಾರಿಯರ್ಸ್ ತಂಡವನ್ನು 72 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು.

MI vs UPW Highlights: ಕೌರ್ ಪಡೆಗೆ ಸುಲಭ ತುತ್ತಾದ ಯುಪಿ; ಫೈನಲ್​ಗೆ ಮುಂಬೈ
ಮಹಿಳಾ ಪ್ರೀಮಿಯರ್ ಲೀಗ್

ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಮೊದಲ ಸೀಸನ್‌ನಲ್ಲಿ ಸತತ ಐದು ಗೆಲುವಿನೊಂದಿಗೆ ಉತ್ತಮ ಆರಂಭ ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಅಂತಿಮವಾಗಿ ನಿರೀಕ್ಷಿಸಿದ್ದನ್ನು ಮಾಡಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ, ಡಬ್ಲ್ಯುಪಿಎಲ್‌ನ ಮೊದಲ ಸೀಸನ್​ನ ಫೈನಲ್‌ಗೆ ಪ್ರವೇಶಿಸಿದೆ. ಶುಕ್ರವಾರ ಸಂಜೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ, ಯುಪಿ ವಾರಿಯರ್ಸ್ ತಂಡವನ್ನು 72 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ನೇಟ್ ಸಿವರ್-ಬ್ರಂಟ್ ಅವರ ಆಲ್ ರೌಂಡ್ ಪ್ರದರ್ಶನ ಮತ್ತು ಈಸಿ ವಾಂಗ್ ಅವರ ಹ್ಯಾಟ್ರಿಕ್ ವಿಕೆಟ್ ಮುಂಬೈ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿತು.

LIVE NEWS & UPDATES

The liveblog has ended.
  • 24 Mar 2023 10:53 PM (IST)

    ಫೈನಲ್‌ಗೆ ಮುಂಬೈ

    ಇಶಾಕ್ ಕೊನೆಯ ವಿಕೆಟ್ ಪಡೆಯುವುದರೊಂದಿಗೆ ಯುಪಿ ವಾರಿಯರ್ಸ್ ತಂಡವನ್ನು 110 ರನ್‌ಗಳಿಗೆ ಆಲೌಟ್ ಮಾಡಿದರು. ಮುಂಬೈ ಇಂಡಿಯನ್ಸ್ ಯುಪಿಯನ್ನು 72 ರನ್‌ಗಳ ದೊಡ್ಡ ಅಂತರದಿಂದ ಸೋಲಿಸುವ ಮೂಲಕ WPL ಫೈನಲ್ ಪ್ರವೇಶಿಸಿತು.

  • 24 Mar 2023 10:36 PM (IST)

    ಯುಪಿ ಸ್ಕೋರ್ 104/8

    16 ಓವರ್‌ಗಳಲ್ಲಿ ಯುಪಿ ಸ್ಕೋರ್ 104/8. ಯುಪಿ ವಾರಿಯರ್ಸ್ ಗೆಲುವಿಗೆ 24 ಎಸೆತಗಳಲ್ಲಿ 79 ರನ್ ಅಗತ್ಯವಿದೆ.

  • 24 Mar 2023 10:29 PM (IST)

    ಸೋಲಿನ ಸುಳಿಯಲ್ಲಿ ಯುಪಿ

    15 ಓವರ್‌ಗಳಲ್ಲಿ ಯುಪಿ ಸ್ಕೋರ್ 96/8. ಯುಪಿ ವಾರಿಯರ್ಸ್ ಗೆಲುವಿಗೆ 30 ಎಸೆತಗಳಲ್ಲಿ 87 ರನ್ ಅಗತ್ಯವಿದೆ. ಇಲ್ಲಿಂದ ಯುಪಿ ತಂಡ ಗೆಲ್ಲುವುದು ಕಷ್ಟ.

  • 24 Mar 2023 10:22 PM (IST)

    ಮೊದಲ ಹ್ಯಾಟ್ರಿಕ್

    ವಾಂಗ್ ಅವರ ಓವರ್‌ನಲ್ಲಿ ಸತತ ಮೂರು ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನಗೊಂಡವು. ಇದರೊಂದಿಗೆ ಲೀಗ್​ನ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್ ಎಂಬ ದಾಖಲೆಯನ್ನು ವಾಂಗ್ ಬರೆದಿದ್ದಾರೆ.

  • 24 Mar 2023 10:17 PM (IST)

    ಆರನೇ ವಿಕೆಟ್ ಪತನ

    ಯುಪಿಯ ಆರನೇ ವಿಕೆಟ್ ಪತನವಾಯಿತು, ಈ ಓವರ್‌ನಲ್ಲಿ ವಾಂಗ್ ಸತತ ಎರಡನೇ ವಿಕೆಟ್ ಪಡೆದರು.

  • 24 Mar 2023 10:16 PM (IST)

    ಐದನೇ ವಿಕೆಟ್

    ಯುಪಿ ತಂಡದ 5ನೇ ವಿಕೆಟ್ ಪತನವಾಗಿದ್ದು, ಕಿರಣ್ ನವಗೀರ್ 43 ರನ್ ಗಳಿಸಿ ಔಟಾಗಿದ್ದಾರೆ.

  • 24 Mar 2023 10:16 PM (IST)

    12 ಓವರ್‌ಗಳ ನಂತರ 84/4

    12 ಓವರ್‌ಗಳ ನಂತರ ಯುಪಿ ಸ್ಕೋರ್ 84/4. ದೀಪ್ತಿ ಶರ್ಮಾ 8 ಹಾಗೂ ನವಗಿರೆ 43 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 48 ಎಸೆತಗಳಲ್ಲಿ 99 ರನ್ ಅಗತ್ಯವಿದೆ. ಈ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಂತು.

  • 24 Mar 2023 10:05 PM (IST)

    60 ಎಸೆತಗಳಲ್ಲಿ 120 ರನ್ ಅಗತ್ಯ

    10 ಓವರ್‌ಗಳ ನಂತರ ಯುಪಿ ಸ್ಕೋರ್ 63/4. ದೀಪ್ತಿ ಶರ್ಮಾ 3 ಹಾಗೂ ನವಗಿರೆ 27 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 60 ಎಸೆತಗಳಲ್ಲಿ 120 ರನ್ ಅಗತ್ಯವಿದೆ. ಈ ಓವರ್‌ನಲ್ಲಿ ಫೋರ್‌ ಕೂಡ ಬಂತು.

  • 24 Mar 2023 10:00 PM (IST)

    ಕೇವಲ 1 ರನ್

    9 ಓವರ್‌ಗಳ ನಂತರ ಯುಪಿ ಸ್ಕೋರ್ 58/4. ದೀಪ್ತಿ ಶರ್ಮಾ 2 ರನ್ ಮತ್ತು ನವಗಿರೆ 23 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 66 ಎಸೆತಗಳಲ್ಲಿ 125 ರನ್ ಅಗತ್ಯವಿದೆ. ಎಮಿಲಿಯಾ ಕೆರ್ ಅವರ ಈ ಓವರ್‌ನಲ್ಲಿ ಕೇವಲ 1 ರನ್ ಬಂತು.

  • 24 Mar 2023 09:55 PM (IST)

    8 ಓವರ್‌ಗಳ ನಂತರ 57/4

    8 ಓವರ್‌ಗಳ ನಂತರ ಯುಪಿ ಸ್ಕೋರ್ 57/4. ದೀಪ್ತಿ ಶರ್ಮಾ 1 ರನ್ ಮತ್ತು ನವಗಿರೆ 23 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಈ ಓವರ್‌ನಲ್ಲಿ ಫೋರ್‌ ಕೂಡ ಬಂತು.

  • 24 Mar 2023 09:54 PM (IST)

    ನಾಲ್ಕನೇ ವಿಕೆಟ್ ಪತನ

    ಯುಪಿ ವಾರಿಯರ್ಸ್‌ನ ನಾಲ್ಕನೇ ವಿಕೆಟ್ ಪತನ, ಹ್ಯಾರಿಸ್ 14 ರನ್‌ಗಳಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.

  • 24 Mar 2023 09:50 PM (IST)

    7 ಓವರ್‌ಗಳ ನಂತರ

    7 ಓವರ್‌ಗಳ ನಂತರ ಯುಪಿ ವಾರಿಯರ್ಸ್ 3 ವಿಕೆಟ್​ಗೆ 51 ರನ್ ಬಾರಿಸಿದೆ . ಹ್ಯಾರಿಸ್ 10 ರನ್ ಮತ್ತು ನವಗಿರೆ 22 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಎಮಿಲಿಯಾ ಕೆರ್ ಅವರ ಓವರ್‌ನಲ್ಲಿ ಒಂದು ಬೌಂಡರಿ ಬಂತು.

  • 24 Mar 2023 09:49 PM (IST)

    ಸಿಕ್ಸರ್

    6 ಓವರ್‌ಗಳ ನಂತರ ಯುಪಿ ಸ್ಕೋರ್ 46/3. ಈ ಓವರ್‌ನಲ್ಲಿ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಯಾಯಿತು. ಈ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳು ಸಿಡಿದವು.

  • 24 Mar 2023 09:42 PM (IST)

    5 ಓವರ್‌ ಅಂತ್ಯ

    5 ಓವರ್‌ಗಳ ನಂತರ ಯುಪಿ ಸ್ಕೋರ್ 26/3. ಈ ಓವರ್‌ನ ಕೊನೆಯ ಎಸೆತದಲ್ಲಿ ನವ್ಗಿರೆ ಫೋರ್ ಹೊಡೆದರು.

  • 24 Mar 2023 09:41 PM (IST)

    ಮೂರನೇ ವಿಕೆಟ್

    ತಹ್ಲಿಯಾ ಮೆಕ್‌ಗ್ರಾತ್ ರನ್ ಔಟ್. 6 ಎಸೆತಗಳಲ್ಲಿ 7 ರನ್ ಗಳಿಸಿದ್ದ ಮೆಕ್​ಗ್ರಾತ್ ರನ್​ಔಟ್​ಗೆ ಬಲಿಯಾಗಿದ್ದಾರೆ. ಯುಪಿ ಗೆಲುವಿಗೆ 96 ಎಸೆತಗಳಲ್ಲಿ 162 ರನ್ ಅಗತ್ಯವಿದೆ.

  • 24 Mar 2023 09:38 PM (IST)

    4 ಓವರ್‌ಗಳ ನಂತರ 21/2

    4 ಓವರ್‌ಗಳ ನಂತರ ಯುಪಿ ಸ್ಕೋರ್ 21/2.ಈ ಓವರ್‌ನ ಕೊನೆಯ ಎಸೆತದಲ್ಲಿ ಫೋರ್ ಬಂತು.

  • 24 Mar 2023 09:31 PM (IST)

    ಎರಡನೇ ವಿಕೆಟ್ ಪತನ

    ವಾಂಗ್ ಅವರ ಓವರ್‌ನಲ್ಲಿ ಯುಪಿ ಎರಡನೇ ವಿಕೆಟ್ ಪತನವಾಗಿದೆ. ನಾಯಕಿ ಹೀಲಿ 12 ರನ್‌ಗಳಿಗೆ ಔಟಾಗಿದ್ದಾರೆ.

  • 24 Mar 2023 09:25 PM (IST)

    ಮೊದಲ ವಿಕೆಟ್ ಪತನ

    ಎರಡನೇ ಓವರ್‌ನಲ್ಲಿ ಯುಪಿಯ ಮೊದಲ ವಿಕೆಟ್ ಪತನಗೊಂಡಿತು, ಶೆರಾವತ್ 1 ರನ್‌ಗೆ ಔಟಾದರು

  • 24 Mar 2023 09:25 PM (IST)

    1 ಓವರ್‌ನ ನಂತರ

    183 ರನ್ ಗುರಿ ಪಡೆದಿರುವ ಯುಪಿ ವಾರಿಯರ್ಸ್ ತಂಡ 1 ಓವರ್‌ನ ನಂತರ 8 ರನ್ ಗಳಿಸಿದೆ.

  • 24 Mar 2023 09:11 PM (IST)

    20 ಓವರ್‌ಗಳ ನಂತರ ಮುಂಬೈ ಸ್ಕೋರ್ 182/4

    ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 18 ರನ್ ಗಳಿಸಿತು. ಯುಪಿ ವಾರಿಯರ್ಸ್ ಗೆಲುವಿಗೆ 183 ರನ್ ಗಳ ಗುರಿ ಪಡೆದಿದೆ.ಕೊನೆಯ ಓವರ್​ನಲ್ಲಿ ಸಿವರ್ ಬ್ರಂಟ್ ಅಬ್ಬರದ ಬ್ಯಾಟಿಂಗ್ ನಡೆಸಿದರು.

  • 24 Mar 2023 09:02 PM (IST)

    ನಾಲ್ಕನೇ ವಿಕೆಟ್ ಪತನ

    ಸೋಫಿಯಾ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನಾಲ್ಕನೇ ವಿಕೆಟ್ ಪತನವಾಯಿತು. ಕೆರ್ 29 ರನ್‌ಗಳಿಸಿ ಔಟಾದರು.

  • 24 Mar 2023 08:55 PM (IST)

    18 ಓವರ್‌ ಅಂತ್ಯ

    ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 9 ರನ್ ಗಳಿಸಿತು. ಸಿವರ್ ಬ್ರಂಟ್ 64 ರನ್ ಹಾಗೂ ಅನಿಲಿಯಾ ಕೆರ್ 16 ರನ್ ಗಳಿಸಿ ಆಡುತ್ತಿದ್ದಾರೆ.

  • 24 Mar 2023 08:50 PM (IST)

    ಸಿವರ್ ಬ್ರಂಟ್ ಅರ್ಧಶತಕ

    ಯುಪಿ ವಾರಿಯರ್ಸ್ ಬೌಲರ್ ಸೋಫಿಯಾ ಅವರ ಓವರ್‌ನಲ್ಲಿ ಮುಂಬೈ 11 ರನ್ ಗಳಿಸಿತು. ಸಿವರ್ ಬ್ರಂಟ್ 51 ರನ್ ಹಾಗೂ ಅನಿಲಿಯಾ ಕೆರ್ 9 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲೂ 2 ಬೌಂಡರಿಗಳು ಕಂಡುಬಂದವು.ಸಿವರ್ ಬ್ರಂಟ್ ಅರ್ಧಶತಕ ಬಾರಿಸಿದರು.

  • 24 Mar 2023 08:42 PM (IST)

    15 ಓವರ್‌ಗಳ ನಂತರ ಮುಂಬೈ ಸ್ಕೋರ್ 116/3

    ಯುಪಿ ವಾರಿಯರ್ಸ್ ಬೌಲರ್ ಹ್ಯಾರಿಸ್ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 45 ರನ್ ಹಾಗೂ ಅನೆಲಿಯಾ ಕೆರ್ 3 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಕೂಡ ಬಂತು.

  • 24 Mar 2023 08:38 PM (IST)

    13 ಓವರ್‌ಗಳ ನಂತರ

    ಯುಪಿ ವಾರಿಯರ್ಸ್ ಬೌಲರ್ ಸೋಫಿಯಾ ಅವರ ಓವರ್‌ನಲ್ಲಿ ಮುಂಬೈ 6 ರನ್ ಗಳಿಸಿತು. ಸಿವರ್ ಬ್ರಂಟ್ 36 ರನ್ ಹಾಗೂ ಕೆರ್ 0 ರನ್ ಗಳಿಸಿ ಆಡುತ್ತಿದ್ದಾರೆ.

  • 24 Mar 2023 08:35 PM (IST)

    ಕೌರ್ ಔಟ್

    ಮುಂಬೈ ಇಂಡಿಯನ್ಸ್‌ನ ಮೂರನೇ ವಿಕೆಟ್ ಪತನ, ನಾಯಕಿ ಹರ್ಮತ್‌ಪ್ರೀತ್ ಕೌರ್ 14 ರನ್‌ಗಳಿಸಿ ಔಟಾದರು. ಸೋಫಿಯಾ ಅವರ ಓವರ್‌ನಲ್ಲಿ ಈ ವಿಕೆಟ್ ಪತನವಾಯಿತು.

  • 24 Mar 2023 08:28 PM (IST)

    12 ಓವರ್‌ಗಳ ನಂತರ ಮುಂಬೈ ಸ್ಕೋರ್ 98/2

    ಯುಪಿ ವಾರಿಯರ್ಸ್ ಬೌಲರ್ ಪಾರ್ಶ್ವಿ ಅವರ ಓವರ್‌ನಲ್ಲಿ ಮುಂಬೈ 16 ರನ್ ಗಳಿಸಿತು. ಸಿವರ್ ಬ್ರಂಟ್ 35 ರನ್ ಮತ್ತು ಹರ್ಮನ್‌ಪ್ರೀತ್ ಕೌರ್ 9 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳು ಬಂದವು.

  • 24 Mar 2023 08:22 PM (IST)

    10 ಓವರ್‌ ಆಟ ಅಂತ್ಯ

    ಯುಪಿ ವಾರಿಯರ್ಸ್ ಬೌಲರ್ ಪಾರ್ಶ್ವಿ ಅವರ ಓವರ್‌ನಲ್ಲಿ ಮುಂಬೈ 9 ರನ್ ಗಳಿಸಿತು. ಸಿವರ್ ಬ್ರಂಟ್ 19 ಮತ್ತು ಹರ್ಮನ್‌ಪ್ರೀತ್ 5 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಫೋರ್ ಕೂಡ ಬಂತು.

  • 24 Mar 2023 08:18 PM (IST)

    ಎರಡನೇ ವಿಕೆಟ್ ಪತನ

    ಮುಂಬೈ ಇಂಡಿಯನ್ಸ್ ಎರಡನೇ ವಿಕೆಟ್ ಪತನಗೊಂಡಿತು, ಮ್ಯಾಥ್ಯೂಸ್ 26 ರನ್ ಗಳಿಸಿ ಕ್ಯಾಚಿತ್ತು ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮೈದಾನಕ್ಕೆ ಬಂದಿದ್ದಾರೆ.

  • 24 Mar 2023 08:12 PM (IST)

    9 ಓವರ್‌ಗಳ ನಂತರ ಮುಂಬೈ ಸ್ಕೋರ್ 69/1

    ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 8 ರನ್ ಗಳಿಸಿತು. ಸಿವರ್ ಬ್ರಂಟ್ 15 ರನ್ ಹಾಗೂ ಮ್ಯಾಥ್ಯೂಸ್ 26 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಫೋರ್ ಜೊತೆಗೆ, ಮ್ಯಾಥ್ಯೂಸ್ ಜೀವದಾನವನ್ನೂ ಪಡೆದರು.

  • 24 Mar 2023 08:00 PM (IST)

    7 ಓವರ್‌, ಮುಂಬೈ ಸ್ಕೋರ್ 53/1

    ಯುಪಿ ವಾರಿಯರ್ಸ್ ಬೌಲರ್ ಸೋಫಿ ಅವರ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 13 ರನ್ ಹಾಗೂ ಮ್ಯಾಥ್ಯೂಸ್ 17 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಅಮೋಘ ಫೋರ್‌ ಕೂಡ ಬಂತು.

  • 24 Mar 2023 07:51 PM (IST)

    ಮುಂಬೈ ಸ್ಕೋರ್ 37/1

    ಯುಪಿ ವಾರಿಯರ್ಸ್ ಬೌಲರ್ ಅಂಜಲಿ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 5 ರನ್ ಹಾಗೂ ಮ್ಯಾಥ್ಯೂಸ್ 10 ರನ್ ಗಳಿಸಿ ಆಡುತ್ತಿದ್ದಾರೆ. ಸಿವರ್ ಬ್ರಂಟ್ ಕೊನೆಯ ಎಸೆತದಲ್ಲಿ ಅದ್ಭುತ ಬೌಂಡರಿ ಬಾರಿಸಿದರು.

  • 24 Mar 2023 07:51 PM (IST)

    ಮೊದಲ ವಿಕೆಟ್ ಪತನ

    ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಪತನಗೊಂಡಿತು, ಯಾಸ್ತಿಕಾ ಭಾಟಿಯಾ 21 ರನ್ ಗಳಿಸಿ ಕ್ಯಾಚಿತ್ತು ಔಟಾದರು. ಅಂಜಲಿ ಅವರ ಎರಡನೇ ಓವರ್‌ನ ಎರಡನೇ ಪಂದ್ಯದಲ್ಲಿ ಈ ವಿಕೆಟ್ ಪತನವಾಯಿತು.

  • 24 Mar 2023 07:50 PM (IST)

    ಪಂದ್ಯದ ಮೊದಲ ಸಿಕ್ಸರ್

    ಯುಪಿ ವಾರಿಯರ್ಸ್ ಬೌಲರ್ ಹ್ಯಾರಿಸ್ ಓವರ್‌ನಲ್ಲಿ ಮುಂಬೈ 13 ರನ್ ಗಳಿಸಿತು. ಯಾಸ್ತಿಕಾ ಭಾಟಿಯಾ 21 ರನ್ ಹಾಗೂ ಮ್ಯಾಥ್ಯೂಸ್ 9 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಅಮೋಘ ಸಿಕ್ಸರ್ ಬಂತು. ಇದು ಪಂದ್ಯದ ಮೊದಲ ಸಿಕ್ಸರ್ ಆಗಿತ್ತು.

  • 24 Mar 2023 07:38 PM (IST)

    2 ಓವರ್‌ಗಳ ನಂತರ ಮುಂಬೈ ಸ್ಕೋರ್ 12/0

    ಯುಪಿ ವಾರಿಯರ್ಸ್ ಬೌಲರ್ ಅಂಜಲಿ ಅವರ ಓವರ್‌ನಲ್ಲಿ ಮುಂಬೈ 6 ರನ್ ಗಳಿಸಿತು. ಯಾಸ್ತಿಕಾ ಭಾಟಿಯಾ 10 ರನ್ ಹಾಗೂ ಮ್ಯಾಥ್ಯೂಸ್ 2 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಯಾಸ್ತಿಕಾ ಅದ್ಭುತ ಬೌಂಡರಿ ಬಾರಿಸಿದರು.

  • 24 Mar 2023 07:32 PM (IST)

    ಮುಂಬೈ ಬ್ಯಾಟಿಂಗ್ ಆರಂಭ

    ಟಾಸ್ ಸೋತ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೈದಾನಕ್ಕಿಳಿದಿದ್ದಾರೆ. ಬೌಂಡರಿಯೊಂದಿಗೆ ಪಂದ್ಯ ಆರಂಭವಾಗಿದೆ.

  • 24 Mar 2023 07:28 PM (IST)

    ಉಭಯ ತಂಡಗಳು

  • 24 Mar 2023 07:27 PM (IST)

    ಯುಪಿ ವಾರಿಯರ್ಸ್

    ಅಲಿಸ್ಸಾ ಹೀಲಿ, ಕಿರಣ್ ಪ್ರಭು ನವಗಿರೆ, ತಹಿಲಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಶ್ವೇತಾ ಶೆರಾವತ್, ಪಾರ್ಶ್ವಿ ಚೋಪ್ರಾ, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

  • 24 Mar 2023 07:25 PM (IST)

    ಮುಂಬೈ ಇಂಡಿಯನ್ಸ್

    ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಅಮೆಲಿಯಾ ಕೆರ್, ಪೂಜಾ ವಸ್ತಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ,ಜಿಂತಿಮಣಿ ಕಲಿತಾ, ಸೈಕಾ ಇಸಾಕ್

  • 24 Mar 2023 07:02 PM (IST)

    ಟಾಸ್ ಗೆದ್ದ ಯುಪಿ ವಾರಿಯರ್ಸ್

    ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಅಲಿಸಾ ಹೀಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 6:59 pm, Fri, 24 March 23

Follow us on