AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ಮತ್ತೊಂದು ತಂಡ; ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಮುಶೀರ್ ಖಾನ್

Mumbai Cricket Team in England: ಮುಂಬೈನ ಉದಯೋನ್ಮುಖ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಮುಂಬೈ ತಂಡ ಹಲವಾರು ಕೌಂಟಿ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಲಿದೆ. ತಂಡದ ಯುವ ಬ್ಯಾಟರ್ ಮುಶೀರ್ ಖಾನ್ ನಾಟಿಂಗ್‌ಹ್ಯಾಮ್‌ಶೈರ್ ಎರಡನೇ XI ವಿರುದ್ಧ ಶತಕ ಬಾರಿಸಿ ಮಿಂಚಿದ್ದಾರೆ.

ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ಮತ್ತೊಂದು ತಂಡ; ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಮುಶೀರ್ ಖಾನ್
Musheer Khan
ಪೃಥ್ವಿಶಂಕರ
|

Updated on:Jun 30, 2025 | 9:59 PM

Share

ಪ್ರಸ್ತುತ ಇಂಗ್ಲೆಂಡ್​ನಲ್ಲಿ ಭಾರತದ ನಾಲ್ಕು ತಂಡಗಳು ವಿವಿಧ ಕ್ರಿಕೆಟ್ ಸರಣಿಗಳಲ್ಲಿ ಭಾಗಿಯಾಗಿವೆ. ಇದೀಗ ಆ ತಂಡಗಳ ಸಂಖ್ಯೆ ಐದಕ್ಕೇರಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ತನ್ನ ಉದಯೋನ್ಮುಖ ತಂಡವನ್ನು (Mumbai’s Emerging Team) ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಿದೆ. ಮುಂಬೈನ ಉದಯೋನ್ಮುಖ ತಂಡವು ಒಂದು ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲ್ಲಿದ್ದು, ಈ ಪ್ರವಾಸದಲ್ಲಿ, ತಂಡವು ಇಂಗ್ಲೆಂಡ್‌ನ ವಿವಿಧ ಕೌಂಟಿ ತಂಡಗಳು ಮತ್ತು ಸ್ಥಳೀಯ ತಂಡಗಳ ವಿರುದ್ಧ ಎರಡು ದಿನಗಳ ಐದು ಪಂದ್ಯ ಮತ್ತು ನಾಲ್ಕು ಏಕದಿನ ಪಂದ್ಯಗಳನ್ನು ಆಡಲಿದೆ. ಪ್ರಸ್ತುತ, ಮುಂಬೈನ ಉದಯೋನ್ಮುಖ ತಂಡವು, ನಾಟಿಂಗ್‌ಹ್ಯಾಮ್‌ಶೈರ್‌ನ ಎರಡನೇ XI ವಿರುದ್ಧ ಪಂದ್ಯವನ್ನು ಆಡುತ್ತಿದ್ದು, ಈ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಕ್ರಿಕೆಟಿಗ ಮುಶೀರ್ ಖಾನ್ (Musheer Khan) ಭರ್ಜರಿ ಶತಕ ಬಾರಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಮುಶೀರ್ ಖಾನ್ ಶತಕ

ಮುಶೀರ್ ಖಾನ್, ನಾಟಿಂಗ್‌ಹ್ಯಾಮ್‌ಶೈರ್‌ನ ಎರಡನೇ ಇಲೆವೆನ್ ತಂಡದ ವಿರುದ್ಧ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಶೀರ್ ಕೇವಲ 127 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ಸಹಿತ 100 ರನ್‌ಗಳ ಗಡಿ ತಲುಪಿದರು. ಒಂದೆಡೆ ಮುಶೀರ್ ತಂಡದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್‌ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಅವರಿಗೆ ವಿದೇಶದಲ್ಲಿಯೂ ತಮ್ಮನ್ನು ತಾವು ಸಾಬೀತುಪಡಿಸಲು ದೊಡ್ಡ ಅವಕಾಶವಿದೆ.

16 ಸದಸ್ಯರ ಮುಂಬೈ ತಂಡ

ಈ ಪ್ರವಾಸದ ಉದ್ದೇಶ ಯುವ ಆಟಗಾರರಿಗೆ ಅಂತರರಾಷ್ಟ್ರೀಯ ಅನುಭವವನ್ನು ಒದಗಿಸುವುದು ಮತ್ತು ಅವರ ತಾಂತ್ರಿಕ, ಕಾರ್ಯತಂತ್ರ ಮತ್ತು ಮಾನಸಿಕ ಕೌಶಲ್ಯಗಳನ್ನು ಸುಧಾರಿಸುವುದಾಗಿದೆ. ಇದಕ್ಕಾಗಿ ಮುಂಬೈ 16 ಸದಸ್ಯರ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಿದೆ. ಮುಶೀರ್ ಖಾನ್ ಹೊರತುಪಡಿಸಿ, ಅಂಗ್‌ಕ್ರಿಶ್ ರಘುವಂಶಿ ಮತ್ತು ಯುವ ಸ್ಪಿನ್ನರ್ ಹಿಮಾಂಶು ಸಿಂಗ್ ಅವರಂತಹವರು ಸಹ ತಂಡದ ಭಾಗವಾಗಿದ್ದಾರೆ. ತಂಡದ ನಾಯಕತ್ವದ ಜವಾಬ್ದಾರಿಯನ್ನು ಸೂರ್ಯಾಂಶ್ ಶೆಡ್ಜ್ ಹೊತ್ತಿದ್ದು, ವೇದಾಂತ್ ಮುರ್ಕರ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ನಾಟಿಂಗ್‌ಹ್ಯಾಮ್‌ಶೈರ್ ಜೊತೆಗೆ ಮಾತ್ರವಲ್ಲದೆ ಈ ಮುಂಬೈ ತಂಡವು, ವೋರ್ಸೆಸ್ಟರ್‌ಶೈರ್, ಗ್ಲೌಸೆಸ್ಟರ್‌ಶೈರ್ ಮತ್ತು ಕೌಂಟಿ ಚಾಲೆಂಜರ್ಸ್ ತಂಡದಂತಹ ಬಲಿಷ್ಠ ತಂಡಗಳ ವಿರುದ್ಧವೂ ಆಡಲಿದೆ.

IND vs ENG: ಹೆಚ್ಚಾಗಿ ಅಭ್ಯಾಸದಲ್ಲಿ ಕಾಣಿಸಿಕೊಳ್ಳದ ಬುಮ್ರಾ; 2ನೇ ಟೆಸ್ಟ್​ನಿಂದ ಯಾರ್ಕರ್​ ಕಿಂಗ್ ಔಟ್..!

ಇಂಗ್ಲೆಂಡ್ ಪ್ರವಾಸಕ್ಕೆ ಮುಂಬೈ ಉದಯೋನ್ಮುಖ ತಂಡ

ಸೂರ್ಯಾಂಶ್ ಶೆಡ್ಗೆ (ನಾಯಕ), ವೇದಾಂತ್ ಮುರ್ಕರ್ (ಉಪನಾಯಕ), ಆಂಗ್‌ಕ್ರಿಶ್ ರಘುವಂಶಿ, ಆಯುಷ್ ವರ್ತಕ್, ಆಯುಷ್ ಜಿಮಾರೆ, ಹಿಮಾಂಶು ಸಿಂಗ್, ಮನನ್ ಭಟ್, ಮುಶೀರ್ ಖಾನ್, ನಿಖಿಲ್ ಗಿರಿ, ಪ್ರಜ್ಞೇಶ್ ಕಂಪಿಲ್ಲೆವಾರ್, ಪ್ರತೀಕ್‌ಕುಮಾರ್ ಯಾದವ್, ಪ್ರೇಮ್ ದಿಯೋಕರ್, ಪ್ರಿನ್ಸ್ ಬಡಿಯಾನಿ, ಝಾವಿದ್ ಪಟ್ಯಾನಿ, ಹರೀಶ ಪಟ್ಹಾಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Mon, 30 June 25

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ