NED vs BAN ICC World Cup 2023: ಬಾಂಗ್ಲಾ ವಿರುದ್ಧ ನೆದರ್​ಲೆಂಡ್ಸ್​ಗೆ​ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Oct 28, 2023 | 10:21 PM

Netherlands vs Bangladesh, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 3 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬಾಂಗ್ಲಾದೇಶ್ ತಂಡ ಒಂದು ಪಂದ್ಯ ಗೆದ್ದರೆ, ಮತ್ತೆರಡು ಪಂದ್ಯಗಳನ್ನು ನೆದರ್​ಲೆಂಡ್ಸ್​ ಗೆದ್ದುಕೊಂಡಿದೆ. 

NED vs BAN ICC World Cup 2023: ಬಾಂಗ್ಲಾ ವಿರುದ್ಧ ನೆದರ್​ಲೆಂಡ್ಸ್​ಗೆ​ ಭರ್ಜರಿ ಜಯ
Netherlands vs Bangladesh

ಏಕದಿನ ವಿಶ್ವಕಪ್​ನ 28ನೇ ಪಂದ್ಯದಲ್ಲಿ  ಬಾಂಗ್ಲಾದೇಶ್ ವಿರುದ್ಧ ನೆದರ್​ಲೆಂಡ್ಸ್​ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್​ಲೆಂಡ್ಸ್ ಮೊದಲು ಬ್ಯಾಟ್ ಮಾಡಿ 229 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 142 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೆದರ್​ಲೆಂಡ್ಸ್ 87 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 3 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಬಾಂಗ್ಲಾದೇಶ್ ತಂಡ ಒಂದು ಪಂದ್ಯ ಗೆದ್ದರೆ, ಮತ್ತೆರಡು ಪಂದ್ಯಗಳನ್ನು ನೆದರ್​ಲೆಂಡ್ಸ್​ ಗೆದ್ದುಕೊಂಡಿದೆ.

ಬಾಂಗ್ಲಾದೇಶ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

ನೆದರ್​ಲೆಂಡ್ಸ್​ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

ನೆದರ್​ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕ್ವಿಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.

ಬಾಂಗ್ಲಾದೇಶ್ ತಂಡ: ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ತಂಝಿದ್ ಹಸನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ ರಿಯಾದ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಂಝಿಮ್ ಸಾಕಿಬ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹದೂದ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

LIVE Cricket Score & Updates

The liveblog has ended.
  • 28 Oct 2023 09:24 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ಗೆ ಭರ್ಜರಿ ಜಯ

    ವ್ಯಾನ್ ಮೀಕೆರನ್ ಎಸೆದ 43ನೇ ಓವರ್​ನ 2ನೇ ಎಸೆತದಲ್ಲಿ ಕ್ಯಾಚ್ ನೀಡಿದ ತಸ್ಕಿನ್ ಆಹ್ಮದ್.

    42.2 ಓವರ್​ಗಳಲ್ಲಿ 142 ರನ್​ಗಳಿಸಿ ಆಲೌಟ್ ಆದ ಬಾಂಗ್ಲಾದೇಶ್ ತಂಡ.

    ನೆದರ್​ಲೆಂಡ್ಸ್​- 229 (50)

    ಬಾಂಗ್ಲಾದೇಶ್– 142 (42.2)

    ನೆದರ್​ಲೆಂಡ್ಸ್ ತಂಡಕ್ಕೆ 87 ರನ್​ಗಳ ಭರ್ಜರಿ ಜಯ.

     

  • 28 Oct 2023 09:22 PM (IST)

    NED vs BAN ICC World Cup 2023 Live Score: ಗೆಲುವಿನತ್ತ ನೆದರ್​ಲೆಂಡ್ಸ್​

    ಕಾಲಿನ್ ಅಕರ್ಮನ್ ಎಸೆದ 42ನೇ ಓವರ್​ನ ಕೊನೆಯ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಮುಸ್ತಫಿಜುರ್ ರೆಹಮಾನ್.

    35 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮುಸ್ತಫಿಜುರ್ ರೆಹಮಾನ್.

    ಕ್ರೀಸ್​ನಲ್ಲಿ ತಸ್ಕಿನ್ ಅಹ್ಮದ್ ಹಾಗೂ ಶೊರಿಫುಲ್ ಇಸ್ಲಾಂ ಬ್ಯಾಟಿಂಗ್.

    BAN 142/9 (42)

      

  • 28 Oct 2023 09:15 PM (IST)

    NED vs BAN ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಫಿಜ್

    ಕಾಲಿನ್ ಅಕರ್ಮನ್ ಎಸೆದ 40ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​ ಬಾರಿಸಿದ ಮುಸ್ತಫಿಜುರ್ ರೆಹಮಾನ್.

    40 ಓವರ್​ಗಳ ಮುಕ್ತಾಯದ ವೇಳೆಗೆ 140 ರನ್ ಕಲೆಹಾಕಿದ ಬಾಂಗ್ಲಾದೇಶ್.

    ಕೊನೆಯ 10 ಓವರ್​ಗಳಲ್ಲಿ 90 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ಬ್ಯಾಟಿಂಗ್.

    BAN 140/8 (40)

      

  • 28 Oct 2023 08:56 PM (IST)

    NED vs BAN ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆಗೆ 121 ರನ್ ಕಲೆಹಾಕಿದ ಬಾಂಗ್ಲಾದೇಶ್.

    8 ವಿಕೆಟ್ ಕಬಳಿಸಿ ಗೆಲುವಿನತ್ತ ಮುನ್ನಡೆಯುತ್ತಿರುವ ನೆದರ್​ಲೆಂಡ್ಸ್​.

    ಕ್ರೀಸ್​ನಲ್ಲಿ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ಬ್ಯಾಟಿಂಗ್.

    BAN 121/8 (35)

      

  • 28 Oct 2023 08:35 PM (IST)

    NED vs BAN ICC World Cup 2023 Live Score: 7ನೇ ವಿಕೆಟ್ ಪತನ

    29ನೇ ಓವರ್​ನ 4ನೇ ಎಸೆತದಲ್ಲಿ ರನೌಟ್ ಆಗಿ ನಿರ್ಗಮಿಸಿದ ಮೆಹದಿ ಹಸನ್.

    38 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೆಹದಿ.

    30 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡದ ಸ್ಕೋರ್ 110 ರನ್​ಗಳು.

    ಕ್ರೀಸ್​ನಲ್ಲಿ ತಸ್ಕಿನ್ ಅಹ್ಮದ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 110/7 (30)

      

      

  • 28 Oct 2023 08:23 PM (IST)

    NED vs BAN ICC World Cup 2023 Live Score: ಶತಕ ಪೂರೈಸಿದ ಬಾಂಗ್ಲಾದೇಶ್

    ಶಾರಿಝ್ ಅಹ್ಮದ್ ಎಸೆದ 28ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಮೆಹದಿ ಹಸನ್.

    ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 102/6 (28)

    ಬಾಂಗ್ಲಾದೇಶ್ ತಂಡಕ್ಕೆ ಇನ್ನು 128 ರನ್​ಗಳ ಅವಶ್ಯಕತೆ.

      

  • 28 Oct 2023 08:10 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್ ಉತ್ತಮ ಬೌಲಿಂಗ್

    25 ಓವರ್​ಗಳಲ್ಲಿ ಕೇವಲ 87 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    6 ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್.

    ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 87/6 (25)

      

  • 28 Oct 2023 07:51 PM (IST)

    NED vs BAN ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 72 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    6 ವಿಕೆಟ್​ಗಳನ್ನು ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನೆದರ್​ಲೆಂಡ್ಸ್​ ಬೌಲರ್​ಗಳು.

    ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 72/6 (20)

    ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಪಿಕುರ್ ರಹೀಮ್, ಶಕೀಬ್ ಅಲ್ ಹಸನ್ ಹಾಗೂ ಮೆಹದಿ ಹಸನ್ ಮಿರಾಝ್ ಔಟ್.

      

  • 28 Oct 2023 07:41 PM (IST)

    NED vs BAN ICC World Cup 2023 Live Score: ಬಾಂಗ್ಲಾ ತಂಡದ 6 ವಿಕೆಟ್ ಪತನ

    ವ್ಯಾನ್ ಮೀಕೆರನ್ ಎಸೆದ 18ನೇ ಓವರ್​ನ 4ನೇ ಎಸೆತದಲ್ಲಿ ಮುಶ್ಫಿಕುರ್ ರಹೀಮ್ ಕ್ಲೀನ್ ಬೌಲ್ಡ್​.

    5 ಎಸೆತಗಳಲ್ಲಿ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್.

    ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 70/6 (18)

      

      

  • 28 Oct 2023 07:32 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ ಭರ್ಜರಿ ಬೌಲಿಂಗ್

    ಬಾಸ್ ಡಿ ಲೀಡೆ ಎಸೆದ 17ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್​ ನೀಡಿದ ಮೆಹದಿ ಹಸನ್.

    40 ಎಸೆತಗಳಲ್ಲಿ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೆಹದಿ ಹಸನ್ ಮಿರಾಝ್.

    ಕ್ರೀಸ್​ನಲ್ಲಿ ಮುಶ್ಫಿಕುರ್ ರಹೀಮ್ ಹಾಗೂ ಮಹಮದುಲ್ಲಾ ಬ್ಯಾಟಿಂಗ್.

    BAN 69/5 (17)

      

  • 28 Oct 2023 07:26 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ 4ನೇ ವಿಕೆಟ್ ಪತನ

    ಪೌಲ್ ವ್ಯಾನ್ ಮೀಕೆರನ್ ಎಸೆದ 16ನೇ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಶಕೀಬ್ ಅಲ್ ಹಸನ್.

    14 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್.

    BAN 63/4 (16)

      

  • 28 Oct 2023 07:21 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ ಉತ್ತಮ ಬೌಲಿಂಗ್

    • 15 ಓವರ್​ಗಳ ಮುಕ್ತಾಯದ ವೇಳೆಗೆ 55 ರನ್​ ಕಲೆಹಾಕಿದ ಬಾಂಗ್ಲಾದೇಶ್.
    • 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ನೆದರ್​ಲೆಂಡ್ಸ್ ಬೌಲರ್​ಗಳು.
    • ಕ್ರೀಸ್​ನಲ್ಲಿ ಶಕೀಬ್ ಅಲ್ ಹಸನ್ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.

    ಬಾಂಗ್ಲಾದೇಶ್– 55/3 (15)

      

  • 28 Oct 2023 07:12 PM (IST)

    NED vs BAN ICC World Cup 2023 Live Score: 12 ಓವರ್​ಗಳು ಮುಕ್ತಾಯ

    ವ್ಯಾನ್ ಮೀಕರೆನ್ ಎಸೆದ 12ನೇ ಓವರ್​ನ 5ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ನಜ್ಮುಲ್ ಹೊಸೈನ್ ಶಾಂಟೊ.

    18 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾ ತಂಡದ ಎಡಗೈ ದಾಂಡಿಗ ನಜ್ಮುಲ್.

    12 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ಸ್ಕೋರ್ 45 ರನ್​ಗಳು.

    BAN 45/3 (12)

      

  • 28 Oct 2023 06:45 PM (IST)

    NED vs BAN ICC World Cup 2023 Live Score: 2ನೇ ವಿಕೆಟ್ ಪತನ

    ಲೋಗನ್ ವ್ಯಾನ್ ಬೀಕ್ ಎಸೆದ 6ನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ ಸ್ಕಾಟ್ ಎಡ್ವರ್ಡ್ಸ್​ಗೆ ಕ್ಯಾಚ್ ನೀಡಿದ ತಂಝಿದ್ ಹಸನ್.

    ಬಾಂಗ್ಲಾ ತಂಡಕ್ಕೆ ಆರಂಭಿಕ ಆಘಾತ ನೀಡಿದ ನೆದರ್​ಲೆಂಡ್ಸ್​.

    ಕ್ರೀಸ್​ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.

    BAN 19/2 (6)

     

  • 28 Oct 2023 06:39 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ಮೊದಲ ವಿಕೆಟ್ ಪತನ

    ಅರ್ಯನ್ ದತ್ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಲಿಟ್ಟನ್ ದಾಸ್.

    12 ಎಸೆತಗಳಲ್ಲಿ ಕೇವಲ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾದೇಶ್ ತಂಡದ ಆರಂಭಿಕ ಆಟಗಾರ.

    5 ಓವರ್​ಗಳ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡದ ಸ್ಕೋರ್ 19 ರನ್​ಗಳು.

    BAN 19/1 (5)

     

  • 28 Oct 2023 06:33 PM (IST)

    NED vs BAN ICC World Cup 2023 Live Score:

    ಲೋಗನ್ ವ್ಯಾನ್ ಬೀಕ್ ಎಸೆದ 4ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ತಂಝಿದ್ ಹಸನ್.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 19/0 (4)

     ಬಾಂಗ್ಲಾದೇಶ್ ತಂಡಕ್ಕೆ 230 ರನ್​ಗಳ ಗುರಿ

  • 28 Oct 2023 06:18 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ಇನಿಂಗ್ಸ್ ಆರಂಭ

    ಮೊದಲ ಓವರ್​ನಲ್ಲಿ ಕೇವಲ 2 ರನ್ ನೀಡಿದ ನೆದರ್​ಲೆಂಡ್ಸ್ ಸ್ಪಿನ್ನರ್ ಆರ್ಯನ್ ದತ್.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 2/0 (1)

      

  • 28 Oct 2023 05:45 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್ ಇನಿಂಗ್ಸ್ ಅಂತ್ಯ

    ಮೆಹದಿ ಹಸನ್ ಎಸೆದ ಕೊನೆಯ ಓವರ್​ನಲ್ಲಿ 2 ಫೋರ್ ಹಾಗೂ 1 ಭರ್ಜರಿ ಸಿಕ್ಸ್​ನೊಂದಿಗೆ 17 ರನ್ ಕಲೆಹಾಕಿದ ಲೋಗನ್ ವ್ಯಾನ್ ಬೀಕ್.

    50 ಓವರ್​ಗಳಲ್ಲಿ 229 ರನ್ ಕಲೆಹಾಕಿ ಆಲೌಟ್ ಆದ ನೆದರ್​ಲೆಂಡ್ಸ್​.

    NED 229 (50)

    ಬಾಂಗ್ಲಾದೇಶ್ ತಂಡಕ್ಕೆ 230 ರನ್​ಗಳ ಸುಲಭ ಗುರಿ

  • 28 Oct 2023 05:21 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್ ತಂಡದ 7ನೇ ವಿಕೆಟ್ ಪತನ

    ಮೆಹದಿ ಹಸನ್ ಎಸೆದ 46ನೇ ಓವರ್​ನ ಮೊದಲ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ಸೈಬ್ರಾಂಡ್ ಎಂಗಲ್ಬ್ರೆಕ್ಟ್.

    61 ಎಸೆತಗಳಲ್ಲಿ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೈಬ್ರಾಂಡ್ ಎಂಗಲ್ಬ್ರೆಕ್ಟ್.

    NED 189/7 (46)

     

      

  • 28 Oct 2023 05:12 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್ ತಂಡದ 6ನೇ ವಿಕೆಟ್ ಪತನ

    ಮುಸ್ತಫಿಜುರ್ ರೆಹಮಾನ್ ಎಸೆದ 45ನೇ ಓವರ್​ನ 3ನೇ ಎಸೆತದಲ್ಲಿ ಪಾಯಿಂಟ್​ನಲ್ಲಿದ್ದ ಫೀಲ್ಡರ್​ಗೆ ಕ್ಯಾಚ್ ನೀಡಿದ ಸ್ಕಾಟ್​ ಎಡ್ವರ್ಡ್ಸ್​.

    89 ಎಸೆತಗಳಲ್ಲಿ 68 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ನೆದರ್​ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್​.

    NED 185/6 (45)

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಲೋಗನ್ ವ್ಯಾನ್ ಬೀಕ್ ಬ್ಯಾಟಿಂಗ್.

      

  • 28 Oct 2023 05:03 PM (IST)

    NED vs BAN ICC World Cup 2023 Live Score: ಸ್ಕಾಟ್-ಸೈಬ್ರಾಂಡ್ ಬ್ಯಾಟಿಂಗ್

    6ನೇ ವಿಕೆಟ್​ಗೆ 65 ರನ್​ಗಳ ಜೊತೆಯಾಟವಾಡಿದ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್.

    43 ಓವರ್​ಗಳಲ್ಲಿ 172 ರನ್ ಕಲೆಹಾಕಿದ ನೆದರ್​ಲೆಂಡ್ಸ್​.

    ಕೊನೆಯ 7 ಓವರ್​ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ನೆದರ್​ಲೆಂಡ್ಸ್​ ಬ್ಯಾಟರ್​ಗಳು.

    NED 172/5 (43)

      

  • 28 Oct 2023 04:51 PM (IST)

    NED vs BAN ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ಸ್ ತಂಡದ ಸ್ಕೋರ್ 155 ರನ್​ಗಳು.

    ಮ್ಯಾಕ್ಸ್​ ಒಡೌಡ್, ವಿಕ್ರಮಜಿತ್ ಸಿಂಗ್, ಕಾಲಿನ್ ಅಕರ್ಮನ್ ಹಾಗೂ ವೆಸ್ಲಿ ಬ್ಯಾರೆಸಿಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್ ಬೌಲರ್​ಗಳು.

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 155/5 (40)

     

  • 28 Oct 2023 04:47 PM (IST)

    NED vs BAN ICC World Cup 2023 Live Score: 150 ರನ್ ಪೂರೈಸಿದ ನೆದರ್​ಲೆಂಡ್ಸ್

    39 ಓವರ್​ಗಳಲ್ಲಿ 150 ರನ್ ಪೂರೈಸಿದ ನೆದರ್​ಲೆಂಡ್ಸ್ ತಂಡ.

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 154/5 (39)

    ಸ್ಪರ್ಧಾತ್ಮಕ ಮೊತ್ತ ಪೇರಿಸುವ ವಿಶ್ವಾಸದಲ್ಲಿ ನೆದರ್​ಲೆಂಡ್ಸ್​.

     

     

  • 28 Oct 2023 04:34 PM (IST)

    NED vs BAN ICC World Cup 2023 Live Score: ವೆಲ್ಕಂ ಬೌಂಡರಿ

    ಮುಸ್ತಫಿಜುರ್ ರೆಹಮಾನ್ ಎಸೆದ 35ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಸೈಬ್ರಾಂಡ್.

    35 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ಸ್ ತಂಡದ ಸ್ಕೋರ್ 139 ರನ್​ಗಳು.

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 139/5 (35)

      

  • 28 Oct 2023 04:24 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​- 130/5

    ನೆದರ್​ಲೆಂಡ್ಸ್ ಪರ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಎಚ್ಚರಿಕೆಯ ಬ್ಯಾಟಿಂಗ್.

    33 ಓವರ್​ಗಳ ಮುಕ್ತಾಯದ ವೇಳೆಗೆ 130 ರನ್ ಕಲೆಹಾಕಿದ ನೆದರ್​ಲೆಂಡ್ಸ್​.

    ಬಾಂಗ್ಲಾದೇಶ್ ಬೌಲರ್​ಗಳಿಂದ ಉತ್ತಮ ಪ್ರದರ್ಶನ, ಈಗಾಗಲೇ 5 ವಿಕೆಟ್ ಕಬಳಿಸಿರುವ ಬಾಂಗ್ಲಾ ಬೌಲರ್​ಗಳು.

    NED 130/5 (33)

      

  • 28 Oct 2023 04:12 PM (IST)

    NED vs BAN ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 117 ರನ್ ಕಲೆಹಾಕಿದ ನೆದರ್​ಲೆಂಡ್ಸ್ ತಂಡ.

    5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಬಾಂಗ್ಲಾದೇಶ್ ತಂಡ.

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 117/5 (30)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ನೆದರ್​ಲೆಂಡ್ಸ್.

      

  • 28 Oct 2023 03:59 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ತಂಡಕ್ಕೆ 5ನೇ ಯಶಸ್ಸು

    ತಸ್ಕಿನ್ ಅಹ್ಮದ್ ಎಸೆದ 27ನೇ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಬಾಸ್ ಡಿ ಲೀಡೆ.

    32 ಎಸೆತಗಳಲ್ಲಿ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಸ್ ಡಿ ಲೀಡೆ.

    ಕ್ರೀಸ್​ನಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 107/5 (27)

      

  • 28 Oct 2023 03:50 PM (IST)

    NED vs BAN ICC World Cup 2023 Live Score: 25 ಓವರ್​ಗಳು ಮುಕ್ತಾಯ

    • 25 ಓವರ್​ಗಳ ಮುಕ್ತಾಯದ ವೇಳೆಗೆ 99 ರನ್ ಕಲೆಹಾಕಿದ ನೆದರ್​ಲೆಂಡ್ಸ್.
    • ಮ್ಯಾಕ್ಸ್​ ಒಡೌಡ್, ವಿಕ್ರಮಜಿತ್ ಸಿಂಗ್, ಕಾಲಿನ್ ಅಕರ್ಮನ್ ಹಾಗೂ ವೆಸ್ಲಿ ಬ್ಯಾರೆಸಿಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್ ಬೌಲರ್​ಗಳು.
    • ಕ್ರೀಸ್​ನಲ್ಲಿ ಬಾಸ್ ಡಿ ಲೀಡೆ​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    ನೆದರ್​ಲೆಂಡ್ಸ್​- 99/4 (25)

  • 28 Oct 2023 03:41 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ಉತ್ತಮ ಬೌಲಿಂಗ್

    23 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 90 ರನ್​ಗಳನ್ನು ಮಾತ್ರ ನೀಡಿದ ಬಾಂಗ್ಲಾ ಬೌಲರ್​ಗಳು.

    ಕ್ರೀಸ್​ನಲ್ಲಿ ಬಾಸ್ ಡಿ ಲೀಡೆ​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 90/4 (23)

    ಮ್ಯಾಕ್ಸ್​ ಒಡೌಡ್, ವಿಕ್ರಮಜಿತ್ ಸಿಂಗ್, ಕಾಲಿನ್ ಅಕರ್ಮನ್ ಹಾಗೂ ವೆಸ್ಲಿ ಬ್ಯಾರೆಸಿ ಔಟ್.

      

  • 28 Oct 2023 03:28 PM (IST)

    NED vs BAN ICC World Cup 2023 Live Score: 20 ಓವರ್​ಗಳು ಮುಕ್ತಾಯ

    ಮುಸ್ತಫಿಜುರ್ ರೆಹಮಾನ್ ಎಸೆದ 20ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಫೀರ್ ಬಾರಿಸಿದ ಡಿ ಲೀಡೆ.

    20 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ಸ್ ತಂಡದ ಸ್ಕೋರ್ 84 ರನ್​ಗಳು.

    ಕ್ರೀಸ್​ನಲ್ಲಿ ಬಾಸ್ ಡಿ ಲೀಡೆ​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

    NED 84/4 (20)

      

  • 28 Oct 2023 03:06 PM (IST)

    NED vs BAN ICC World Cup 2023 Live Score: ಬಾಂಗ್ಲಾ ತಂಡಕ್ಕೆ 4ನೇ ಯಶಸ್ಸು

    ಶಕೀಬ್ ಅಲ್ ಹಸನ್ ಎಸೆದ 15ನೇ ಓವರ್​ನ 4ನೇ ಎಸೆತದಲ್ಲಿ ಸ್ವೀಪ್ ಶಾಟ್ ಬಾರಿಸಲು ಹೋಗಿ ಕ್ಯಾಚ್ ನೀಡಿದ ಕಾಲಿನ್ ಅಕರ್ಮನ್ (15).

    15 ಓವರ್​ಗಳ ಮುಕ್ತಾಯದ ವೇಳೆಗೆ ನೆದರ್​ಲೆಂಡ್ ತಂಡದ ಮೊತ್ತ 64 ರನ್​ಗಳು.

    NED 63/4 (15)

    ಕ್ರೀಸ್​ನಲ್ಲಿ ಬಾಸ್ ಡಿ ಲೀಡ್​ ಹಾಗೂ ಸ್ಕಾಟ್ ಎಡ್ವರ್ಡ್ಸ್​ ಬ್ಯಾಟಿಂಗ್.

      

      

  • 28 Oct 2023 03:00 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ 3ನೇ ವಿಕೆಟ್ ಪತನ

    ಮುಸ್ತಫಿಜುರ್ ರೆಹಮಾನ್ ಎಸೆದ 14ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ವೆಸ್ಲಿ ಬ್ಯಾರೆಸಿ.

    41 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವೆಸ್ಲಿ ಬ್ಯಾರೆಸಿ.

    ಬಾಂಗ್ಲಾದೇಶ್ ತಂಡಕ್ಕೆ 3ನೇ ಯಶಸ್ಸು ತಂದುಕೊಟ್ಟ ಎಡಗೈ ವೇಗಿ ಮುಸ್ತಫಿಜುರ್.

    NED 63/3 (14)

      

      

  • 28 Oct 2023 02:56 PM (IST)

    NED vs BAN ICC World Cup 2023 Live Score: ವೆಸ್ಲಿ ಉತ್ತಮ ಬ್ಯಾಟಿಂಗ್

    ಶಕೀಬ್ ಅಲ್ ಹಸನ್ ಎಸೆದ 13ನೇ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ವೆಸ್ಲಿ ಬ್ಯಾರೆಸಿ.

    38 ಎಸೆತಗಳಲ್ಲಿ 41 ರನ್ ಬಾರಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿರುವ ವೆಸ್ಲಿ.

    ಕ್ರೀಸ್​ನಲ್ಲಿ ಕಾಲಿನ್ ಅಕರ್ಮನ್​ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 61/2 (13)

      

  • 28 Oct 2023 02:46 PM (IST)

    NED vs BAN ICC World Cup 2023 Live Score: 10 ಓವರ್​ಗಳು ಮುಕ್ತಾಯ

    10 ಓವರ್​ಗಳಲ್ಲಿ 47 ರನ್ ಕಲೆಹಾಕಿದ ನೆದರ್​ಲೆಂಡ್ಸ್ ತಂಡ.

    2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್ ಬೌಲರ್​ಗಳು.

    ಕ್ರೀಸ್​ನಲ್ಲಿ ಕಾಲಿನ್ ಅಕರ್ಮನ್​ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 47/2 (10)

    ನೆದರ್​ಲೆಂಡ್ಸ್ ತಂಡದ ಆರಂಭಿಕರಾದ ಮ್ಯಾಕ್ಸ್​ ಒಡೌಡ್ ಹಾಗೂ ವಿಕ್ರಮಜಿತ್ ಸಿಂಗ್ ಔಟ್.

      

  • 28 Oct 2023 02:38 PM (IST)

    NED vs BAN ICC World Cup 2023 Live Score: ಆಕರ್ಷಕ ಫೋರ್

    ತಸ್ಕಿನ್ ಅಹ್ಮದ್ ಎಸೆದ 8ನೇ ಓವರ್​ನ 4ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ವೆಸ್ಲಿ ಬ್ಯಾರೆಸಿ

    ಕೊನೆಯ ಎಸೆತದಲ್ಲೂ ಬ್ಯಾರೆಸಿ​ ಬ್ಯಾಟ್​ನಿಂದ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ಕಾಲಿನ್ ಅಕರ್ಮನ್​ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 38/2 (8)

      

  • 28 Oct 2023 02:30 PM (IST)

    NED vs BAN ICC World Cup 2023 Live Score: ಮೇಡನ್ ಓವರ್​

    6ನೇ ಓವರ್​ ಅನ್ನು ಮೇಡನ್ ಮಾಡಿದ ಬಲಗೈ ವೇಗಿ ತಸ್ಕಿನ್ ಅಹ್ಮದ್.

    ಕ್ರೀಸ್​ನಲ್ಲಿ ಕಾಲಿನ್ ಅಕರ್ಮನ್​ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 23/2 (6)

    ನೆದರ್​ಲೆಂಡ್ಸ್ ತಂಡದ ಆರಂಭಿಕರಾದ ಮ್ಯಾಕ್ಸ್​ ಒಡೌಡ್ ಹಾಗೂ ವಿಕ್ರಮಜಿತ್ ಸಿಂಗ್ ಔಟ್.

      

  • 28 Oct 2023 02:26 PM (IST)

    NED vs BAN ICC World Cup 2023 Live Score: ಕ್ಲಾಸಿ ಶಾಟ್- ಬೌಂಡರಿ

    ಶೊರಿಫುಲ್ ಇಸ್ಲಾಂ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ವೆಸ್ಲಿ ಬ್ಯಾರೆಸಿ.

    5 ಓವರ್​ಗಳ ಮುಕ್ತಾಯದ ವೇಳೆಗೆ 23 ರನ್ ಕಲೆಹಾಕಿದ ನೆದರ್​ಲೆಂಡ್ಸ್​

    ಕ್ರೀಸ್​ನಲ್ಲಿ ಕಾಲಿನ್ ಅಕರ್ಮನ್​ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 23/2 (5)

      

  • 28 Oct 2023 02:14 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ತಂಡಕ್ಕೆ 2ನೇ ಯಶಸ್ಸು

    ಎಡಗೈ ವೇಗಿ ಶೊರಿಫುಲ್ ಇಸ್ಲಾಂ ಎಸೆದ 3ನೇ ಓವರ್​ನ 2ನೇ ಎಸೆತದಲ್ಲಿ ತಂಝಿದ್​ಗೆ ಕ್ಯಾಚ್ ನೀಡಿದ ಮ್ಯಾಕ್ಸ್​​.

    3 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದ ನೆದರ್​ಲೆಂಡ್ಸ್ ತಂಡದ ಆರಂಭಿಕ ಆಟಗಾರ ಮ್ಯಾಕ್ಸ್​ ಒಡೌಡ್.

    ನೆದರ್​ಲೆಂಡ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಬಾಂಗ್ಲಾ ಬೌಲರ್​ಗಳು.

    NED 9/2 (3)

      

      

  • 28 Oct 2023 02:11 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ ಮೊದಲ ವಿಕೆಟ್ ಪತನ

    ಬಲಗೈ ವೇಗಿ ತಸ್ಕಿನ್ ಅಹ್ಮದ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಶಕೀಬ್ ಅಲ್ ಹಸನ್​ಗೆ ಕ್ಯಾಚ್ ನೀಡಿ ಹೊರ ನಡೆದ ವಿಕ್ರಮಜಿತ್ ಸಿಂಗ್ (3).

    ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು.

    ಕ್ರೀಸ್​ನಲ್ಲಿ ಮ್ಯಾಕ್ಸ್​ ಒಡೌಡ್ ಹಾಗೂ ವೆಸ್ಲಿ ಬ್ಯಾರೆಸಿ ಬ್ಯಾಟಿಂಗ್.

    NED 4/1 (2)

      

  • 28 Oct 2023 02:05 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ ಇನಿಂಗ್ಸ್ ಆರಂಭ

    ಮೊದಲ ಓವರ್​ನಲ್ಲಿ ಕೇವಲ 3 ರನ್ ನೀಡಿದ ಎಡಗೈ ವೇಗಿ ಶೊರಿಫುಲ್ ಇಸ್ಲಾಂ.

    ಕ್ರೀಸ್​ನಲ್ಲಿ ಮ್ಯಾಕ್ಸ್​ ಒಡೌಡ್ ಹಾಗೂ ವಿಕ್ರಮಜಿತ್ ಸಿಂಗ್ ಬ್ಯಾಟಿಂಗ್.

    NED 3/0 (1)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ನೆದರ್​ಲೆಂಡ್ಸ್​

  • 28 Oct 2023 01:39 PM (IST)

    NED vs BAN ICC World Cup 2023 Live Score: ನೆದರ್​ಲೆಂಡ್ಸ್​ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ನೆದರ್​ಲೆಂಡ್ಸ್​ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಬಾಸ್ ಡಿ ಲೀಡ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

  • 28 Oct 2023 01:38 PM (IST)

    NED vs BAN ICC World Cup 2023 Live Score: ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಬಾಂಗ್ಲಾದೇಶ (ಪ್ಲೇಯಿಂಗ್ XI): ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

  • 28 Oct 2023 01:34 PM (IST)

    NED vs BAN ICC World Cup 2023 Live Score: ಟಾಸ್ ಗೆದ್ದ ನೆದರ್​ಲೆಂಡ್ಸ್​

    ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನೆದರ್​ಲೆಂಡ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.

Published On - 1:33 pm, Sat, 28 October 23

Follow us on