ಪಾಕ್ ಸೋಲಿಗೆ ಕಾರಣವಾಯ್ತ ಅಂಪೈರ್ಸ್ ಕಾಲ್? ಭಜ್ಜಿ- ಸ್ಮಿತ್ ನಡುವೆ ಪರ- ವಿರೋಧದ ಫೈಟ್..!

ICC World Cup 2023: ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಆಫ್ರಿಕಾ ಕೊನೆ ಕೊನೆಗೆ ಸತತ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಒಂದು ಹಂತದಲ್ಲಿ ಪಾಕ್ ತಂಡದ ಪರ ವಿಜಯಲಕ್ಷ್ಮಿ ಕೂಡ ಒಲಿದಿದ್ದಳು. ಆದರೆ ಈ ಪಂದ್ಯದಲ್ಲಿ ಕಂಡು ಬಂದ ಕೆಟ್ಟ ಅಂಪೈರಿಂಗ್​ನಿಂದಾಗಿ ತಂಡದ ಫಲಿತಾಂಶವೇ ಅದಲು ಬದಲಾಯಿತು.

ಪಾಕ್ ಸೋಲಿಗೆ ಕಾರಣವಾಯ್ತ ಅಂಪೈರ್ಸ್ ಕಾಲ್? ಭಜ್ಜಿ- ಸ್ಮಿತ್ ನಡುವೆ ಪರ- ವಿರೋಧದ ಫೈಟ್..!
ಹರ್ಭಜನ್ ಸಿಂಗ್
Follow us
ಪೃಥ್ವಿಶಂಕರ
|

Updated on:Oct 28, 2023 | 10:47 AM

ಚೆನ್ನೈನಲ್ಲಿ ನಡೆದ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 1 ವಿಕೆಟ್​ನಿಂದ ಮಣಿಸಿದ ದಕ್ಷಿಣ ಆಫ್ರಿಕಾ (Pakistan vs South Africa) ತಂಡ ಟೂರ್ನಿಯಲ್ಲಿ ಐದನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿದೆ. ಇನ್ನೊಂದೆಡೆ ಲೀಗ್​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ವಿಶ್ವಕಪ್​ನಿಂದ ಖಾಲಿ ಕೈಯಲ್ಲಿ ಹೊರಬಿಳ್ಳುವ ತುದಿಯಲ್ಲಿದೆ. ಈ ಪಂದ್ಯದಲ್ಲಿ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಪಾಕಿಸ್ತಾನ ಪಂದ್ಯದ ಅಂತಿಮ ಹಂತದಲ್ಲಿ ಗೆಲುವಿನ ಹೊಸ್ತಿಲಿನಲ್ಲಿತ್ತು. ಆದರೆ ಐಸಿಸಿ (ICC) ರೂಪಿಸಿರುವ ಅದೊಂದು ನಿಯಮದಿಂದ ಪಾಕ್ ತಂಡ ಸೋಲುವುದರೊಂದಿಗೆ ಅದರ ವಿಶ್ವಕಪ್ ಪ್ರಯಾಣವೂ ಭಾಗಶಃ ಅಂತ್ಯವಾಯಿತು. ವಾಸ್ತವವಾಗಿ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಆಫ್ರಿಕಾ ಕೊನೆ ಕೊನೆಗೆ ಸತತ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಒಂದು ಹಂತದಲ್ಲಿ ಪಾಕ್ ತಂಡದ ಪರ ವಿಜಯಲಕ್ಷ್ಮಿ ಕೂಡ ಒಲಿದಿದ್ದಳು. ಆದರೆ ಈ ಪಂದ್ಯದಲ್ಲಿ ಕಂಡು ಬಂದ ಕೆಟ್ಟ ಅಂಪೈರಿಂಗ್​ನಿಂದಾಗಿ ತಂಡದ ಫಲಿತಾಂಶವೇ ಅದಲು ಬದಲಾಯಿತು.

ವಾಸ್ತವವಾಗಿ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಕಳಪೆ ಅಂಪೈರಿಂಗ್‌ 3 ರಿಂದ 4 ಬಾರಿ ಕಂಡು ಬಂತು. ಆದರೆ ಈ ಕೆಟ್ಟ ಅಂಪೈರಿಂಗ್​ನಿಂದಾಗಿ ಪಾಕ್ ತಂಡ ಸೋತಿದ್ದು, ಇದೀಗ ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತ ಸೇರಿದಂತೆ ಪಾಕಿಸ್ತಾನದ ಮಾಜಿ ಆಟಗಾರರು ಹಾಗೂ ವಿಶ್ವ ಕ್ರಿಕೆಟ್​ನ ಹಲವು ಕ್ರಿಕೆಟಿಗರು ಈ ಪಂದ್ಯದಲ್ಲಿ ಫೀಲ್ಡ್ ಅಂಪೈರ್​ಗಳು ನೀಡಿದ ದೋಷ ಪೂರಿತ ತೀರ್ಪಿನ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಪಾಕಿಸ್ತಾನ ನೀಡಿದ 270 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸ್ಕೋರ್ ಕೇವಲ 33 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 200 ರನ್ ದಾಟಿತ್ತು. ಹೀಗಾಗಿ 90 ರಷ್ಟು ಪಂದ್ಯ ದಕ್ಷಿಣ ಆಫ್ರಿಕಾದ ಹಿಡಿತದಲ್ಲಿತ್ತು. ಆದರೆ ನಂತರ ಪಾಕಿಸ್ತಾನಿ ಬೌಲರ್‌ಗಳು ಸತ್ತ ಪಂದ್ಯಕ್ಕೆ ಜೀವ ತುಂಬಿದರು. ಸತತವಾಗಿ ವಿಕೆಟ್ ಕಬಳಿಸಿ 250 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಉರುಳಿಸಿದರು. ಇಲ್ಲಿಂದ ಪಾಕಿಸ್ತಾನ ತಂಡ ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಅದೊಂದು ತೀರ್ಪು ಪಾಕ್ ತಂಡವನ್ನು ಸೋಲಿನ ದವಡೆಗೆ ಸಿಲುಕಿಸಿತು.

ಪಾಕ್ ಸೋಲಿಗೆ ಕಾರಣವಾಯ್ತು 46ನೇ ಓವರ್‌ನಲ್ಲಿ ನಡೆದ ಘಟನೆ

8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ 46ನೇ ಓವರ್‌ನಲ್ಲಿ ಆಲೌಟ್ ಆಗುವುದರಲ್ಲಿತ್ತು. ಈ ಓವರ್​ನಲ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ತಬ್ರೇಜ್ ಶಮ್ಸಿ ಎಲ್‌ಬಿಡಬ್ಲ್ಯೂ ಆಗಿದ್ದರು. ಆದರೆ ಆನ್-ಫೀಲ್ಡ್ ಅಂಪೈರ್ ಶಮ್ಸಿ ಅವರ ಎಲ್‌ಬಿಡಬ್ಲ್ಯೂ ಔಟ್ ನೀಡಲಿಲ್ಲ. ಇದಾದ ಬಳಿಕ ಪಾಕಿಸ್ತಾನ ಡಿಆರ್‌ಎಸ್ ತೆಗೆದುಕೊಂಡಿತು. ಚೆಂಡು ಲೆಗ್ ಸ್ಟಂಪ್‌ಗೆ ತಗುಲಿರುವುದು ಟಿವಿ ರಿಪ್ಲೇಗಳಲ್ಲಿ ಕಂಡುಬಂದಿತು. ಆದರೆ, ಚೆಂಡು ಸ್ಟಂಪ್‌ಗೆ ತಾಗಿದಾಗ ಅದು ನೇರವಾಗಿ ವಿಕೆಟ್‌ಗೆ ತಾಕದೆ, ಅದರ ಒಂದು ಭಾಗ ಮಾತ್ರ ಸ್ಟಂಪ್‌ಗೆ ತಾಗಿತು. ಹೀಗಾಗಿ ಅಂಪೈರ್ ಕಾಲ್ ಆದಾರದ ಮೇಲೆ ತಬ್ರೇಜ್ ಶಮ್ಸಿಗೆ ನಾಟೌಟ್ ನೀಡಲಾಯಿತು. ಒಂದು ವೇಳೆ ಮೈದಾನದಲ್ಲಿರುವ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೆ, ಮೂರನೇ ಅಂಪೈರ್ ಕೂಡ ಔಟ್ ತೀರ್ಪುನ್ನು ಎತ್ತಿ ಹಿಡಿಯುತ್ತಿದ್ದರು. ಹೀಗಾಗಿ ಪಾಕಿಸ್ತಾನ ತಂಡ ಪಂದ್ಯ ಗೆಲ್ಲುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆನ್-ಫೀಲ್ಡ್ ಅಂಪೈರ್ ಅವರ ಕೆಟ್ಟ ಅಂಪೈರಿಂಗ್ ಇದೀಗ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಪೈರ್ ಕರೆ ರದ್ದುಗೊಳಿಸಬೇಕು ಎಂದ ಮಿಸ್ಬಾ

ಪಾಕ್ ತಂಡದ ಅನುಭವಿ ಕ್ರಿಕೆಟಿಗರಾದ ವಾಸಿಂ ಅಕ್ರಮ್ ಮತ್ತು ಮಿಸ್ಬಾ-ಉಲ್-ಹಕ್ ಪಂದ್ಯದಲ್ಲಿ ಕಳಪೆ ಅಂಪೈರಿಂಗ್ ಅನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಅಂಪೈರ್ ಕರೆ ದೊಡ್ಡ ಸಮಸ್ಯೆಯಾಗುತ್ತಿದ್ದು, ಐಸಿಸಿ ಈ ಬಗ್ಗೆ ಗಮನ ಹರಿಸಬೇಕು ಎಂದು ಮಿಸ್ಬಾ ಹೇಳಿದ್ದಾರೆ. ಅವರ ಪ್ರಕಾರ ಅಂಪೈರ್ ಕರೆ ಮುಂತಾದವುಗಳನ್ನು ರದ್ದುಗೊಳಿಸಬೇಕು ಎಂದಿದ್ದಾರೆ.

ಕೆಟ್ಟ ಅಂಪೈರಿಂಗ್‌ನಿಂದ ಪಾಕಿಸ್ತಾನ ಸೋತಿತು- ಹರ್ಭಜನ್

ಕಳಪೆ ಅಂಪೈರಿಂಗ್ ವಿಚಾರದಲ್ಲಿ ಮೌನ ಮುರಿದ ಹರ್ಭಜನ್, ಕಳಪೆ ಅಂಪೈರಿಂಗ್‌ನ ಪರಿಣಾಮಗಳನ್ನು ಪಾಕಿಸ್ತಾನ ಅನುಭವಿಸಬೇಕಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಐಸಿಸಿ ಗಮನಹರಿಸಬೇಕು. ರೀಪ್ಲೇಗಳಲ್ಲಿ ರೌಫ್ ಅವರ ಚೆಂಡು ಶಮ್ಸಿ ಅವರ ವಿಕೆಟ್‌ಗೆ ಬಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ ಮೂರನೇ ಅಂಪೈರ್, ಆನ್-ಫೀಲ್ಡ್ ಅಂಪೈರ್ ಅವರ ತೀರ್ಮಾನವನ್ನು ಪರಿಗಣಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ.

ಭಜ್ಜಿ ಹೇಳಿಕೆಗೆ ಸ್ಮಿತ್ ಅಪಸ್ವರ

ಇನ್ನು ಇದೇ ಪಂದ್ಯದಲ್ಲಿ ಹಲವು ಬಾರಿ ಕೆಟ್ಟ ಅಂಪೈರಿಂಗ್‌ ಘಟನೆಗಳು ನಡೆದವು. ಶಮ್ಸಿ ವಿಕೆಟ್ ಘಟನೆಗೂ ಮುನ್ನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅಂಪೈರ್ ಕಾಲ್​ನಿಂದ ವಿಕೆಟ್ ಒಪ್ಪಿಸಬೇಕಾಯಿತು. ಇದನ್ನು ಉಲ್ಲೇಖಿಸಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್, ಹರ್ಭಜನ್ ಸಿಂಗ್ ವಿರುದ್ಧ ಹರಿಹಾಯ್ದಿದ್ದು, ಪಾಕಿಸ್ತಾನ ಪರ ಈ ರೀತಿ ಹೇಳಿಕೆ ನೀಡಿರುವ ಭಜ್ಜಿ, ನೀವು ಡಸ್ಸೆನ್​ಗೂ ಅದೇ ರೀತಿ ಹೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 am, Sat, 28 October 23

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು