IND vs ENG: 20 ವರ್ಷಗಳಿಂದ ಗೆದ್ದೇ ಇಲ್ಲ! ಆಂಗ್ಲರ ಎದುರು ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?

IND vs ENG, ICC World Cup 2023: ಇನ್ನು ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 8 ಪಂದ್ಯಗಳು ನಡೆದಿವೆ. ಈ 8 ಪಂದ್ಯಗಳಲ್ಲಿ 3 ರಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, 4 ಪಂದ್ಯಗಳನ್ನು ಇಂಗ್ಲೆಂಡ್ ತಂಡ ಗೆದ್ದಿದೆ.

IND vs ENG: 20 ವರ್ಷಗಳಿಂದ ಗೆದ್ದೇ ಇಲ್ಲ! ಆಂಗ್ಲರ ಎದುರು ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?
ಭಾರತ- ಇಂಗ್ಲೆಂಡ್
Follow us
ಪೃಥ್ವಿಶಂಕರ
|

Updated on: Oct 28, 2023 | 9:48 AM

ಭಾರತ ತನ್ನ ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ. ವಿಶ್ವಕಪ್​ನಲ್ಲಿ (ICC World Cup 2023) ಈ ಪಂದ್ಯ ಭಾರತಕ್ಕೆ ಆರನೇ ಪಂದ್ಯವಾಗಿದ್ದು, ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ರೋಹಿತ್ ಸೇನೆ ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಮತ್ತೊಮ್ಮೆ ಅಲಂಕರಿಸುವುದರೊಂದಿಗೆ ಸೆಮಿಫೈನಲ್​ಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನೊಂದೆಡೆ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಸವಾಲು ಬಹುತೇಕ ಮುಗಿದಂತೆ ತೋರುತ್ತಿದೆ. ಏಕೆಂದರೆ ಆಂಗ್ಲರು ಈಗಾಗಲೇ ಆಡಿರುವ ಐದು ಪಂದ್ಯಗಳಲ್ಲಿ ಕೇವಲ 1 ರಲ್ಲಿ ಗೆದ್ದು, ಉಳಿದ 4 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ತಂಡ ತನ್ನ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತದ ಎದುರು ಭಾರಿ ಅಂತರದಿಂದ ಗೆಲ್ಲಬೇಕಿದೆ. ಆದರೆ ಸದ್ಯ ರೋಹಿತ್ ಪಡೆ ಇರುವ ಫಾರ್ಮ್​ ನೋಡಿದರೆ, ಆಂಗ್ಲರಿಗೆ ಇದು ಕಷ್ಟ ಸಾಧ್ಯ.

20 ವರ್ಷಗಳ ಇತಿಹಾಸ

ಒಂದೆಡೆ ಭಾರತ ತಂಡ ಡಬಲ್ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದರೆ, ಭಾರತಕ್ಕೆ ಕಠಿಣ ಪಂದ್ಯವನ್ನು ನೀಡಲು ಇಂಗ್ಲೆಂಡ್ ಶ್ರಮಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 20 ವರ್ಷಗಳ ಇತಿಹಾಸವನ್ನು ಬದಲಿಸುವ ಅವಕಾಶವನ್ನು ಸಹ ಹೊಂದಿದೆ. ವಾಸ್ತವವಾಗಿ 2003ರ ವಿಶ್ವಕಪ್​ನಲ್ಲಿ ಕೊನೆಯ ಬಾರಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆ ಬಳಿಕ ಭಾರತಕ್ಕೆ ಆಂಗ್ಲರ ವಿರುದ್ಧ ಗೆಲುವು ಸಿಕ್ಕಿಲ್ಲ. ಹೀಗಾಗಿ 20 ವರ್ಷಗಳ ನಂತರ ಭಾರತ ತಂಡಕ್ಕೆ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಅವಕಾಶ ಸಿಕ್ಕಿದೆ.

IND vs ENG, Live Streaming: ಭಾರತಕ್ಕೆ ಹಾಲಿ ಚಾಂಪಿಯನ್ನರ ಸವಾಲು; ಪಂದ್ಯ ಎಷ್ಟು ಗಂಟೆಗೆ ಆರಂಭ?

8 ಪಂದ್ಯಗಳು ನಡೆದಿವೆ

ಇನ್ನು ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 8 ಪಂದ್ಯಗಳು ನಡೆದಿವೆ. ಈ 8 ಪಂದ್ಯಗಳಲ್ಲಿ 3 ರಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, 4 ಪಂದ್ಯಗಳನ್ನು ಇಂಗ್ಲೆಂಡ್ ತಂಡ ಗೆದ್ದಿದೆ. ಹಾಗಾಗಿ 1 ಪಂದ್ಯ ಟೈ ಆಗಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿತ್ತು.

ಭಾರತ- ಇಂಗ್ಲೆಂಡ್ ಏಕದಿನ ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ 106 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 57 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, 2 ಪಂದ್ಯಗಳು ಟೈ ಆಗಿವೆ.

ಇನ್ನು ತವರಿನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 55 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 33 ಪಂದ್ಯಗಳನ್ನು ಗೆದ್ದಿದ್ದರೆ ಇಂಗ್ಲೆಂಡ್ 23 ಪಂದ್ಯಗಳನ್ನು ಗೆದ್ದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು 13 ಜುಲೈ 1974 ರಂದು ನಡೆಯಿತು, ಇದರಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳಿಂದ ಗೆದ್ದಿತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಏಕದಿನ ಪಂದ್ಯವು 17 ಜುಲೈ 2022 ರಂದು ನಡೆದಿದ್ದು, ಇದರಲ್ಲಿ ಭಾರತ 5 ವಿಕೆಟ್‌ಗಳಿಂದ ಗೆದ್ದಿತು.

ಭಾರತ- ಇಂಗ್ಲೆಂಡ್ ಏಕದಿನ ದಾಖಲೆ

  • ಒಟ್ಟು ಪಂದ್ಯಗಳು: 106
  • ಭಾರತ ಗೆಲುವು: 57
  • ಇಂಗ್ಲೆಂಡ್ ಗೆಲುವು: 44
  • ಶೂನ್ಯ ಫಲಿತಾಂಶ: 3
  • ಟೈ: 2

ಭಾರತ- ಇಂಗ್ಲೆಂಡ್ ವಿಶ್ವಕಪ್ ಮುಖಾಮುಖಿ

  • 1975 ವಿಶ್ವಕಪ್ : ಇಂಗ್ಲೆಂಡ್​ಗೆ 202 ರನ್​ಗಳ ಜಯ
  • 1983 ವಿಶ್ವಕಪ್ : ಭಾರತಕ್ಕೆ 6 ವಿಕೆಟ್ ಜಯ
  • 1987 ವಿಶ್ವಕಪ್ : ಇಂಗ್ಲೆಂಡ್​ಗೆ 35 ರನ್​ಗಳ ಜಯ
  • 1992 ವಿಶ್ವಕಪ್ : ಇಂಗ್ಲೆಂಡ್‌ಗೆ 9 ರನ್‌ಗಳ ಜಯ
  • 1999 ವಿಶ್ವಕಪ್ : ಭಾರತಕ್ಕೆ 63 ರನ್ ಜಯ
  • 2003 ವಿಶ್ವಕಪ್ : ಭಾರತಕ್ಕೆ 82 ರನ್ ಜಯ
  • 2011 ವಿಶ್ವಕಪ್ : ಪಂದ್ಯ ಟೈ
  • 2019 ವಿಶ್ವಕಪ್ : ಇಂಗ್ಲೆಂಡ್‌ಗೆ 31 ರನ್‌ಗಳ ಜಯ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ