ಟೀಮ್ ಇಂಡಿಯಾ ಮುಂದಿನ ನಾಯಕ ಯಾರಾಗಬೇಕು? ಇಬ್ಬರ ಹೆಸರು ಸೂಚಿಸಿದ ದ್ರಾವಿಡ್

| Updated By: ಝಾಹಿರ್ ಯೂಸುಫ್

Updated on: Nov 04, 2021 | 9:50 PM

Team India: ರಾಹುಲ್ ದ್ರಾವಿಡ್​ ಅವರನ್ನು ಕೋಚ್ ಸ್ಥಾನಕ್ಕೆ ಆಯ್ಕೆ ವೇಳೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲೊಂದು ನೀವು ಟೀಮ್ ಇಂಡಿಯಾದ ಮುಂದಿನ ನಾಯಕ ಯಾರಾಗಬೇಕೆಂದು ಬಯಸುತ್ತೀರಿ ಎಂಬುದು.

ಟೀಮ್ ಇಂಡಿಯಾ ಮುಂದಿನ ನಾಯಕ ಯಾರಾಗಬೇಕು? ಇಬ್ಬರ ಹೆಸರು ಸೂಚಿಸಿದ ದ್ರಾವಿಡ್
Rahul Dravid
Follow us on

ಟೀಮ್ ಇಂಡಿಯಾ (Team India) ನೂತನ ಕೋಚ್ ಆಗಿ ದಿ ಲೆಜೆಂಡ್ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದಾರೆ. ಟಿ20 ವಿಶ್ವಕಪ್ (T20 World Cup 2021)​ ಬಳಿಕ ದ್ರಾವಿಡ್ ಅವರು ಟೀಮ್ ಇಂಡಿಯಾದ ಸಾರಥ್ಯವಹಿಸಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಭಾರತ ತಂಡವು ನ್ಯೂಜಿಲೆಂಡ್ ವಿರುದ್ದ ಸರಣಿ ಆಡಲಿದೆ. ಇತ್ತ ವಿಶ್ವಕಪ್​ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಹೊಸ ನಾಯಕನ ಆಯ್ಕೆಗೆ ಬಿಸಿಸಿಐ ಮುಂದಾಗಿದೆ.

ಇತ್ತ ರಾಹುಲ್ ದ್ರಾವಿಡ್​ ಅವರನ್ನು ಕೋಚ್ ಸ್ಥಾನಕ್ಕೆ ಆಯ್ಕೆ ವೇಳೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲೊಂದು ನೀವು ಟೀಮ್ ಇಂಡಿಯಾದ ಮುಂದಿನ ನಾಯಕ ಯಾರಾಗಬೇಕೆಂದು ಬಯಸುತ್ತೀರಿ ಎಂಬುದು. ಹೊಸ ಕೋಚ್ ಅಭಿಪ್ರಾಯವನ್ನು ಪರಿಗಣಿಸಿ ನಾಯಕನ ಆಯ್ಕೆಗೆ ಬಿಸಿಸಿಐ ಮುಂದಾಗಿದ್ದು, ಅದರಂತೆ ಟಿ20 ಕ್ರಿಕೆಟ್​ನಲ್ಲಿ ತಂಡದ ನಾಯಕತ್ವ ಯಾರಿಗೆ ನೀಡಬೇಕೆಂದು ದ್ರಾವಿಡ್ ಅವರಲ್ಲಿ ಕೇಳಲಾಗಿತ್ತು ಎಂದು ವರದಿಯಾಗಿದೆ.

ಈ ಕುತೂಹಲಕಾರಿ ಪ್ರಶ್ನೆಗೆ ದ್ರಾವಿಡ್​ ನೀಡಿದ ಮೊದಲ ಆಯ್ಕೆ ರೋಹಿತ್ ಶರ್ಮಾ. ಇದರ ಹೊರತಾಗಿ ಕೆಎಲ್ ರಾಹುಲ್ ಅವರು ನನ್ನ ಆಯ್ಕೆ ಎಂದು ತಿಳಿಸಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಮುಂದಿನ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನೊಂದೆಡೆ ಎರಡನೇ ಆಯ್ಕೆಯಾಗಿ ದ್ರಾವಿಡ್​ ಕೆಎಲ್ ರಾಹುಲ್ ಹೆಸರು ಪ್ರಸ್ತಾಪಿಸಿದ್ದು, ಹೀಗಾಗಿ ಉಪನಾಯಕನ ಸ್ಥಾನ ಕನ್ನಡಿಗನ ಪಾಲಾಗಬಹುದು.

ಸದ್ಯ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ನಾಯಕತ್ವಕ್ಕೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಹೆಸರುಗಳನ್ನು ಸೂಚಿಸಿದ್ದು, ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆಹಾಕಲಿದೆ ಕಾದು ನೋಡಬೇಕಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಮೂರು ಟಿ20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ನವೆಂಬರ್ 17 (ಜೈಪುರ), ನವೆಂಬರ್ 19 (ರಾಂಚಿ) ಮತ್ತು ನವೆಂಬರ್ 21 (ಕೋಲ್ಕತ್ತಾ) ರಂದು ಟಿ20 ಪಂದ್ಯಗಳು ನಡೆಯಲಿವೆ. ನವೆಂಬರ್ 25-29 (ಕಾನ್ಪುರ) ಮತ್ತು ಡಿಸೆಂಬರ್ 3-7 (ಮುಂಬೈ) ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(new coach Dravid backs Rohit as captain for shorter formats)

 

Published On - 9:50 pm, Thu, 4 November 21