AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ಮಿಲಿಯನ್​ ಡಾಲರ್​ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ.. ಈ ವರ್ಷದ ಮೇ ತಿಂಗಳಲ್ಲಿ ಹರಾಜು ಪ್ರಕ್ರಿಯೆ!

ಐಪಿಎಲ್ 2022 ರಲ್ಲಿ 10 ತಂಡಗಳು ಭಾಗವಹಿಸುವುದನ್ನು ನೀವು ಕಾಣಬಹುದು. ಎರಡು ಹೊಸ ಫ್ರಾಂಚೈಸಿಗಳ ಸಂಪೂರ್ಣ ಪ್ರಕ್ರಿಯೆಯು ಈ ವರ್ಷದ ಮೇ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

IPL: ಮಿಲಿಯನ್​ ಡಾಲರ್​ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ.. ಈ ವರ್ಷದ ಮೇ ತಿಂಗಳಲ್ಲಿ ಹರಾಜು ಪ್ರಕ್ರಿಯೆ!
ಇನ್ನು ಐಪಿಎಲ್​ ಮೆಗಾ ಹರಾಜನ್ನು ಬಿಸಿಸಿಐ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಆ ಬಳಿಕ ಬಿಸಿಸಿಐ ಹರಾಜಿಗೆ ಡೇಟ್ ಫಿಕ್ಸ್ ಮಾಡ್ತಾರೆ. ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ತಪ್ಪಿದರೆ ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ.
ಪೃಥ್ವಿಶಂಕರ
| Edited By: |

Updated on: Mar 14, 2021 | 3:33 PM

Share

ಐಪಿಎಲ್‌ನ 14 ನೇ ಆವೃತ್ತಿಯಲ್ಲಿ 8 ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಮೈದಾನದಲ್ಲಿ ಸೆಣಸಾಡಲಿವೆ. ಆದರೆ ಮುಂದಿನ ಆವೃತ್ತಿಯಲ್ಲಿ 2 ಹೊಸ ತಂಡಗಳು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲ್ಲಿವೆ. ಈ ಮೂಲಕ ಐಪಿಎಲ್‌ನಲ್ಲಿ ಇಷ್ಟು ದಿನ ಆಡುತ್ತಿದ್ದ 8 ತಂಡಗಳ ಜೊತೆಗೆ ಇನ್ನೂ 2 ತಂಡಗಳು ಸೇರಿ ಒಟ್ಟಾರೆ 10 ತಂಡಗಳು ಪ್ರೇಕ್ಷಕರಿಗೆ ಬರಪೂರ ಮನರಂಜನೆ ನೀಡಲಿವೆ. ಐಪಿಎಲ್ 2022 ರಲ್ಲಿ ಭಾಗವಹಿಸುವ 2 ಹೊಸ ತಂಡಗಳಿಗೆ ಈ ವರ್ಷ ಮೇ ತಿಂಗಳಲ್ಲಿ ಬಿಡ್ಡಿಂಗ್ ಮಾಡಲಾಗುತ್ತದೆ. ಅಂದರೆ, ಐಪಿಎಲ್ 2021 ಮುಗಿಯುವ ವೇಳೆಗೆ 2 ಹೊಸ ತಂಡಗಳನ್ನು ಬಿಡ್ ಮೂಲಕ ಕಟ್ಟಲಾಗುತ್ತದೆ.

ಐಪಿಎಲ್ 2022 ರಲ್ಲಿ 8 ಬದಲಿಗೆ 10 ತಂಡಗಳು ಆಡಲಿವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಐಪಿಎಲ್ 2022 ರಲ್ಲಿ 10 ತಂಡಗಳು ಭಾಗವಹಿಸುವುದನ್ನು ನೀವು ಕಾಣಬಹುದು. ಎರಡು ಹೊಸ ಫ್ರಾಂಚೈಸಿಗಳ ಸಂಪೂರ್ಣ ಪ್ರಕ್ರಿಯೆಯು ಈ ವರ್ಷದ ಮೇ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ತಂಡಗಳನ್ನು ಸಂಪೂರ್ಣವಾಗಿ ನಿರ್ಧರಿಸಿದ ನಂತರ, ಆ ತಂಡಗಳು ಮುಂದಿನ ಐಪಿಎಲ್​ಗೆ ತಯಾರಿ ನಡೆಸಬಹುದು ಎಂದು ಅವರು ತಿಳಿಸಿದರು.

ಗಂಗೂಲಿ ಆಗಲೇ ಸೂಚಿಸಿದ್ದರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ (2022 ಐಪಿಎಲ್​) 10 ತಂಡಗಳು ಆಡಲಿವೆ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹಲವಾರು ಬಾರಿ ಸೂಚನೆ ನೀಡಿದ್ದರು. ಇದನ್ನು ನಿರ್ಧರಿಸಲು ಮಾರ್ಚ್ 13 ರಂದು ಐಪಿಎಲ್ ಆಡಳಿತ ಮಂಡಳಿಯ ಸಭೆಯನ್ನು ಸಹ ನಡೆಸಿತ್ತು ಈ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜೈ ಷಾ ಕೂಡ ಭಾಗವಹಿಸಿದ್ದರು.

2 ವರ್ಷಗಳ ನಂತರ ಭಾರತದಲ್ಲಿ ಐಪಿಎಲ್ ಐಪಿಎಲ್ 14 ನೇ ಆವೃತ್ತಿ ಮತ್ತೊಮ್ಮೆ ಭಾರತದಲ್ಲಿ ನೆರವೇರಲಿದೆ. ಭಾರತದಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡಿದ್ದು 2019 ರಲ್ಲಿ. ಇದರ ನಂತರ, ಕೊನೆಯ ಆವೃತ್ತಿಯನ್ನ ದುಬೈನಲ್ಲಿ ಆಡಿಸಲಾಯಿತು. ಐಪಿಎಲ್ 2021 ಭಾರತದ 6 ನಗರಗಳಲ್ಲಿ ನಡೆಯಲಿದ್ದು, ಅದರ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಏಪ್ರಿಲ್ 9 ರಿಂದ ಪ್ರಾರಂಭವಾಗುವ ಐಪಿಎಲ್‌ನ 14 ನೇ ಆವೃತ್ತಿಯ ಪ್ಲೇಆಫ್ ಮತ್ತು ಅಂತಿಮ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:IPL ವಿಶೇಷ: 45, 800 ಕೋಟಿ ರೂ. ಮೌಲ್ಯಮಾಪನ ಹೊಂದಿರುವ ಐಪಿಎಲ್​ಗೆ ಆದಾಯ ಬರುವುದಾದರೂ ಹೇಗೆ? ಈ ಸ್ಟೋರಿ ಓದಿ

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು