T20 World Cup 2022: ಟಿ20 ವಿಶ್ವಕಪ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ
New Zealand Squad for T20 World Cup 2022: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್.
T20 World Cup 2022: ಟಿ20 ವಿಶ್ವಕಪ್ಗಾಗಿ ನ್ಯೂಜಿಲೆಂಡ್ ತಂಡವನ್ನು (New Zealand Squad for T20 World Cup 2022) ಘೋಷಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸಲಿದ್ದಾರೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ನ ಒಪ್ಪಂದವನ್ನು ತಿರಸ್ಕರಿಸಿದ ಆಟಗಾರರಾದ ಟ್ರೆಂಟ್ ಬೌಲ್ಟ್ ಮತ್ತು ಜಿಮ್ಮಿ ನೀಶಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಈ ಬಾರಿ ಕೂಡ ಕಿವೀಸ್ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಗಪ್ಟಿಲ್ಗೆ ಇದು 7ನೇ ಟಿ20 ವಿಶ್ವಕಪ್. ಇನ್ನು ಯುವ ಆಟಗಾರರಾದ ಫಿನ್ ಅಲೆನ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಕೂಡ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಹಾಗೆಯೇ ವೇಗದ ಬೌಲರ್ ಆಡಮ್ ಮಿಲ್ನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇದಾಗ್ಯೂ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಯುವ ವೇಗಿ ಕೈಲ್ ಜೇಮಿಸನ್ ಈ ಬಾರಿ ತಂಡಕ್ಕೆ ಆಯ್ಕೆಯಾಗಿಲ್ಲ. ಹಾಗೆಯೇ ಕಳೆದ ಟಿ20 ವಿಶ್ವಕಪ್ನಲ್ಲಿ ತಂಡದಲ್ಲಿದ್ದ ಟಾಡ್ ಆಸ್ಟಲ್ ಮತ್ತು ಟಿಮ್ ಸೀಫರ್ಟ್ ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ.
ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಮತ್ತು ಟಿಮ್ ಸೌಥಿ.
ಇದನ್ನೂ ಓದಿ
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:
ಸೂಪರ್ 12: ಗ್ರೂಪ್ 1 ಪಂದ್ಯಗಳ ವೇಳಾಪಟ್ಟಿ
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – 23 ಅಕ್ಟೋಬರ್ – 3:30 PM
ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – 23 ಅಕ್ಟೋಬರ್ – 7:30 PM
A1 vs B2 – 24 ಅಕ್ಟೋಬರ್ – 3:30 PM
ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ – ಅಕ್ಟೋಬರ್ 26 – 3:30 PM
ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM
ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM
ವೆಸ್ಟ್ ಇಂಡೀಸ್ vs B2 – ಅಕ್ಟೋಬರ್ 29 – 3:30 PM
ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM
ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM
ಇಂಗ್ಲೆಂಡ್ vs A1 – ನವೆಂಬರ್ 01 – 7:30 PM
ದಕ್ಷಿಣ ಆಪ್ರಿಕಾ vs B2 – ನವೆಂಬರ್ 02 – 3:30 PM
ಆಸ್ಟ್ರೇಲಿಯಾ vs B2 – ನವೆಂಬರ್ 04 – 3:30 PM
ವೆಸ್ಟ್ ಇಂಡೀಸ್ vs A1 – ನವೆಂಬರ್ 04- 7:30 PM
ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ – ನವೆಂಬರ್ 06 – 3:30 PM
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 06 – 7:30 PM