New Zealand tour of India: ಭಾರತ ಪ್ರವಾಸಕ್ಕೆ ಬಲಿಷ್ಠ 15 ಸದಸ್ಯರ ಟೆಸ್ಟ್ ತಂಡ ಪ್ರಕಟಿಸಿದ ನ್ಯೂಜಿಲೆಂಡ್!

| Updated By: ಪೃಥ್ವಿಶಂಕರ

Updated on: Nov 05, 2021 | 2:57 PM

New Zealand tour of India: ನ್ಯೂಜಿಲೆಂಡ್- ಭಾರತ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತನ್ನ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್‌ನ 15 ಸದಸ್ಯರ ತಂಡ ಭಾರತಕ್ಕೆ ಭೇಟಿ ನೀಡಲಿದೆ ಆದರೆ ಟ್ರೆಂಟ್ ಬೌಲ್ಟ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

New Zealand tour of India: ಭಾರತ ಪ್ರವಾಸಕ್ಕೆ ಬಲಿಷ್ಠ 15 ಸದಸ್ಯರ ಟೆಸ್ಟ್ ತಂಡ ಪ್ರಕಟಿಸಿದ ನ್ಯೂಜಿಲೆಂಡ್!
ನ್ಯೂಜಿಲೆಂಡ್ ತಂಡ
Follow us on

ನ್ಯೂಜಿಲೆಂಡ್- ಭಾರತ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತನ್ನ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್‌ನ 15 ಸದಸ್ಯರ ತಂಡ ಭಾರತಕ್ಕೆ ಭೇಟಿ ನೀಡಲಿದೆ ಆದರೆ ಟ್ರೆಂಟ್ ಬೌಲ್ಟ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಬೋಲ್ಟ್ ಹೊರತುಪಡಿಸಿ, ಕಾಲಿನ್ ಡಿ ಗ್ರಾಂಡ್‌ಹೋಮ್ ಕೂಡ ತಂಡದ ಭಾಗವಾಗಿಲ್ಲ. ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೇಡ್ ಪ್ರಕಾರ, ಈ ಪ್ರವಾಸದಿಂದ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. 2021 ರ T20 ವಿಶ್ವಕಪ್‌ನಲ್ಲಿ ಕಿವೀ ತಂಡದ ಅಭಿಯಾನ ಮುಗಿದ ನಂತರ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ನವೆಂಬರ್ 17 ರಿಂದ ನ್ಯೂಜಿಲೆಂಡ್ ಭಾರತ ಪ್ರವಾಸ ಆರಂಭವಾಗಲಿದೆ.

ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಮೊದಲ ಟೆಸ್ಟ್ ನವೆಂಬರ್ 25 ರಿಂದ ನವೆಂಬರ್ 29 ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 3 ರಿಂದ ಡಿಸೆಂಬರ್ 7 ರವರೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸದಲ್ಲಿ 3 ಟಿ20 ಪಂದ್ಯಗಳ ಸರಣಿಯನ್ನೂ ಆಡಬೇಕಿದೆ.

ಭಾರತ ಪ್ರವಾಸಕ್ಕೆ ಕಿವೀಸ್ ತಂಡದಲ್ಲಿ 5 ಸ್ಪಿನ್ನರ್‌ಗಳು
ಭಾರತ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತನ್ನ ಟೆಸ್ಟ್ ತಂಡದಲ್ಲಿ 5 ಸ್ಪಿನ್ ಬೌಲರ್‌ಗಳನ್ನು ಇರಿಸಿದೆ. ಭಾರತ ವಿರುದ್ಧದ ಪಂದ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಕಿವೀಸ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ಭಾರತದ ಪಿಚ್‌ಗಳಲ್ಲಿ ಸ್ಪಿನ್ ಆಟವನ್ನು ನೋಡುವುದು ಆಸಕ್ತಿದಾಯಕವಾಗಿದೆ. ತಂಡದ ಸರದಿ ನೀತಿ ಮತ್ತು ಬಯೋಬಬಲ್, ಬೌಲ್ಟ್ ಮತ್ತು ಗ್ರ್ಯಾಂಡ್‌ಹೋಮಿಗೆ ವಿಶ್ರಾಂತಿ ನೀಡಲು ಕಾರಣ ಎಂದು ಅವರು ಹೇಳಿದರು.

ಭಾರತ ವಿರುದ್ಧದ ಟೆಸ್ಟ್ ಸರಣಿ ದೊಡ್ಡ ಸವಾಲು – ವಿಲಿಯಮ್ಸನ್
ಭಾರತ ಪ್ರವಾಸದಲ್ಲಿ ನಡೆಯಲಿರುವ ಟೆಸ್ಟ್ ಸರಣಿ ದೊಡ್ಡ ಸವಾಲಾಗಿದೆ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಣ್ಣಿಸಿದ್ದು, ಈ ಪ್ರವಾಸದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಭಾರತ ಪ್ರವಾಸಕ್ಕೆ ನ್ಯೂಜಿಲೆಂಡ್‌ನ 15 ಮಂದಿಯ ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ಕೀಪರ್), ಡೆವೊನ್ ಕಾನ್ವೆ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಏಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವಿಲ್ಲೆ, ಟಿಮ್ ಸೌಥಿ, ರಾಸ್ ಟೇಲರ್, ವಾಂಗ್ನರ್, ವಾಂಗ್ನರ್, ವಾಂಗ್ನರ್