AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shoaib Akhtar: ಸಾವಿರ ಬಾರಿ ಕ್ಷಮೆಯಾಚಿಸುತ್ತೇನೆ! ಅಖ್ತರ್ ಬಳಿ ಕ್ಷಮೆಯಾಚಿಸಿದ ಟಿವಿ ನಿರೂಪಕ ನಿಯಾಜ್

Shoaib Akhtar: ಕಾರಣವೇನೇ ಇರಲಿ, ಇದನ್ನೆಲ್ಲ ಪ್ರಸಾರ ಮಾಡಲು ನನಗೆ ಯಾವುದೇ ಹಕ್ಕಿಲ್ಲ, ಅದು ನನ್ನ ತಪ್ಪು. ಶೋಯೆಬ್ ಅಖ್ತರ್ ಒಬ್ಬ ಸ್ಟಾರ್ ಮತ್ತು ನಾನು ಅವರ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ ಎಂದು ನಿಯಾಜ್ ಹೇಳಿದ್ದಾರೆ.

Shoaib Akhtar: ಸಾವಿರ ಬಾರಿ ಕ್ಷಮೆಯಾಚಿಸುತ್ತೇನೆ! ಅಖ್ತರ್ ಬಳಿ ಕ್ಷಮೆಯಾಚಿಸಿದ ಟಿವಿ ನಿರೂಪಕ ನಿಯಾಜ್
ನುಮಾನ್ ನಿಯಾಜ್, ಶೋಯೆಬ್ ಅಖ್ತರ್
TV9 Web
| Updated By: ಪೃಥ್ವಿಶಂಕರ|

Updated on: Nov 05, 2021 | 3:46 PM

Share

ಪಿಟಿವಿ ಸ್ಪೋರ್ಟ್ಸ್ ಆಂಕರ್ ಡಾ.ನೌಮನ್ ನಿಯಾಜ್ ಅವರು ಲೈವ್ ಟಿವಿ ಕಾರ್ಯಕ್ರಮದ ವೇಳೆ ಕ್ರಿಕೆಟ್ ತಾರೆ ಶೋಯೆಬ್ ಅಖ್ತರ್ ಅವರ ಮೇಲೆ ತೋರಿದ ವರ್ತನೆಯ ಬಗ್ಗೆ ಅಂತಿಮವಾಗಿ ಕ್ಷಮೆಯಾಚಿಸಿದ್ದಾರೆ. ಗುರುವಾರ ಪತ್ರಕರ್ತ ರೌಫ್ ಕ್ಲಾಸ್ರಾ ಅವರ ಯೂಟ್ಯೂಬ್ ಶೋನಲ್ಲಿ ಕ್ಷಮೆಯಾಚಿಸಲಾಗಿದೆ. ಅಲ್ಲಿ ಪಿಟಿವಿ ಪ್ರಸಾರಕರು ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡರು.

ಕಳೆದ ತಿಂಗಳು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ನಲ್ಲಿ ನಡೆದ ಘಟನೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ಕೋಪವನ್ನು ಹುಟ್ಟುಹಾಕಿತ್ತು ಮತ್ತು ಪ್ರಧಾನಿ ಇಮ್ರಾನ್ ಖಾನ್ ಅದನ್ನು ಗಮನಿಸಿದರು. ಕ್ರಿಕೆಟ್ ದಿಗ್ಗಜರಾದ ಸರ್ ವಿವ್ ರಿಚರ್ಡ್ಸ್ ಮತ್ತು ಡೇವಿಡ್ ಗೋವರ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ತೊರೆಯುವಂತೆ ಪಿಟಿವಿ ನಿರೂಪಕ ಅಖ್ತರ್​ಗೆ ಹೇಳಿದ್ದರು. ಈ ವಿಷಯದ ಕುರಿತು ಮಾತನಾಡಿದ ಡಾ ನೌಮನ್ ನಿಯಾಜ್ ಅವರು ಪ್ರಸಾರದಲ್ಲಿ ನೀಡಿದ್ದ ಪ್ರತಿಕ್ರಿಯೆ ಸಮರ್ಥನೀಯವಾಗಿದೆ ಮತ್ತು ನನ್ನ ನಡವಳಿಕೆಯ ಬಗ್ಗೆ ನಾನು ಸಾವಿರಾರು ಬಾರಿ ಕ್ಷಮೆಯಾಚಿಸಿದ್ದೇನೆ ಎಂದು ಹೇಳಿದರು.

ನಿನ್ನಿಂದ ಇಂತ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ ಕಾರಣವೇನೇ ಇರಲಿ, ಇದನ್ನೆಲ್ಲ ಪ್ರಸಾರ ಮಾಡಲು ನನಗೆ ಯಾವುದೇ ಹಕ್ಕಿಲ್ಲ, ಅದು ನನ್ನ ತಪ್ಪು. ಶೋಯೆಬ್ ಅಖ್ತರ್ ಒಬ್ಬ ಸ್ಟಾರ್ ಮತ್ತು ನಾನು ಅವರ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ ಎಂದು ನಿಯಾಜ್ ಹೇಳಿದ್ದಾರೆ. ಕಾರ್ಯಕ್ರಮದ ನಂತರ, ನಿಯಾಜ್ ತಂದೆ ನಿನ್ನಿಂದ ಇಂತ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದರು ಎಂಬುದನ್ನು ನಿಯಾಜ್ ಹಂಚಿಕೊಂಡಿದ್ದಾರೆ.

ತನ್ನ ತಪ್ಪನ್ನು ಒಪ್ಪಿಕೊಂಡ ನಿಯಾಜ್, ಅಖ್ತರ್ ಕಾರ್ಯಕ್ರಮದ ಪ್ರಮುಖ ವ್ಯಕ್ತಿಯಾಗಿದ್ದರಿಂದ್ದ ನಾನು ಕೇವಲ ನಿರೂಪಕರಾಗಿದ್ದರಿಂದ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬೇಕಿತ್ತು ಎಂದು ಒಪ್ಪಿಕೊಂಡರು. ಇದು ಸಂಭವಿಸಬಾರದಿತ್ತು. ನಾನು ಇದಕ್ಕೆ ತಕ್ಕ ಬೆಲೆಯನ್ನು ಪಾವತಿಸಲು ಸಿದ್ಧನಿದ್ದೇನೆ ಮತ್ತು ಪಾವತಿಸುತ್ತಿದ್ದೇನೆ ಎಂದರು.

ಇದಕ್ಕೂ ಮೊದಲು, ಜಿಯೋ ನ್ಯೂಸ್ ಕಾರ್ಯಕ್ರಮ ಜಶ್ನ್-ಎ-ಕ್ರಿಕೆಟ್‌ನಲ್ಲಿ ಮಾತನಾಡಿದ ಅಖ್ತರ್, ದೇಶ ಮತ್ತು ರಾಜ್ಯ ಸಂಸ್ಥೆಗಳ ಸಲುವಾಗಿ ಡಾ ನಿಯಾಜ್ ಅವರನ್ನು ಕ್ಷಮಿಸಿದ್ದೇನೆ ಎಂದು ಹೇಳಿದರು. ನಿಯಾಜ್ ಕ್ಷಮೆ ಕೇಳಲು ಕಾಯುತ್ತಿದ್ದೆ ಎಂದು ಅಖ್ತರ್ ಹೇಳಿದ್ದರು, ಆದರೆ ಅವರು ಕಾರ್ಯಕ್ರಮದಿಂದ ಹೊರಹೋಗುವಂತೆ ಒತ್ತಾಯಿಸಿದರು ಎಂದಿದ್ದಾರೆ.