ನ್ಯೂಝಿಲೆಂಡ್ ಪರ ಶತಕ ಸಿಡಿಸಿ ಮಿಂಚಿದ ಭಾರತೀಯ

| Updated By: ಝಾಹಿರ್ ಯೂಸುಫ್

Updated on: Jan 22, 2024 | 7:33 AM

New Zealand U19 vs Nepal U19: 303 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡಕ್ಕೆ ಅರ್ಜುನ್ ಕುಮಲ್ ಉತ್ತಮ ಆರಂಭ ಒದಗಿಸಿದ್ದರು. 104 ಎಸೆತಗಳನ್ನು ಎದುರಿಸಿದ ಕುಮಲ್ 12 ಫೋರ್​ಗಳೊಂದಿಗೆ 90 ರನ್ ಬಾರಿಸಿದ್ದರು. ಆದರೆ ಇತರೆ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ನ್ಯೂಝಿಲೆಂಡ್ ಪರ ಶತಕ ಸಿಡಿಸಿ ಮಿಂಚಿದ ಭಾರತೀಯ
ಸ್ನೇಹಿತ್ ರೆಡ್ಡಿ
Follow us on

ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್​ನ (U19 World Cup 2024) 7ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈಸ್ಟ್ ಲಂಡನ್​ನ ಬಫಲೊ ಪಾರ್ಕ್​ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಇನಿಂಗ್ಸ್ ಆರಂಭಿಸಿದ ಟಾಮ್ ಜಾನ್ಸ್ (33) ಹಾಗೂ ಲೂಕ್ ವಾಟ್ಸನ್ (14) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ನೇಹಿತ್ ರೆಡ್ಡಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.

ಅತ್ಯುತ್ತಮ ಶಾಟ್​ಗಳ ಮೂಲಕ ಗಮನ ಸೆಳೆದ ಸ್ನೇಹಿತ್ 125 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 147 ರನ್ ಬಾರಿಸಿದರು. ಮತ್ತೊಂದೆಡೆ ನಾಯಕ ಆಸ್ಕರ್ ಜಾಕ್ಸನ್ 75 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ಅಂಡರ್ 19 ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿತು.

303 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡಕ್ಕೆ ಅರ್ಜುನ್ ಕುಮಲ್ ಉತ್ತಮ ಆರಂಭ ಒದಗಿಸಿದ್ದರು. 104 ಎಸೆತಗಳನ್ನು ಎದುರಿಸಿದ ಕುಮಲ್ 12 ಫೋರ್​ಗಳೊಂದಿಗೆ 90 ರನ್ ಬಾರಿಸಿದ್ದರು. ಆದರೆ ಇತರೆ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 238 ರನ್​ಗಳಿಸಿ ನೇಪಾಳ ಅಂಡರ್ 19 ತಂಡವು 64 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಭಾರತೀಯ ಮೂಲದ ಸ್ನೇಹಿತ್:

ನ್ಯೂಝಿಲೆಂಡ್ ಪರ ಆಡುತ್ತಿರುವ ಸ್ನೇಹಿತ್ ರೆಡ್ಡಿ ಆಂಧ್ರಪ್ರದೇಶದ ವಿಜಯವಾಡ ಮೂಲದವರು. ಇವರ ಕುಟುಂಬ ನ್ಯೂಝಿಲೆಂಡ್​ನಲ್ಲಿ ನೆಲೆಸಿದ್ದು, ಅದರಂತೆ ಇದೀಗ 17 ವರ್ಷದ ಸ್ನೇಹಿತ್ ಕಿವೀಸ್ ಪರ ಅಂಡರ್-19 ವಿಶ್ವಕಪ್ ಆಡುತ್ತಿದ್ದಾರೆ. ಅಲ್ಲದೆ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿರುವ ಸ್ನೇಹಿತ್ ಮುಂದೊಂದು ದಿನ ನ್ಯೂಝಿಲೆಂಡ್ ಸೀನಿಯರ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ನ್ಯೂಝಿಲೆಂಡ್ U19 ಪ್ಲೇಯಿಂಗ್ 11: ಲ್ಯೂಕ್ ವ್ಯಾಟ್ಸನ್ , ಟಾಮ್ ಜೋನ್ಸ್ , ಸ್ನೇಹಿತ್ ರೆಡ್ಡಿ , ಆಲಿವರ್ ತೆವಾಟಿಯಾ , ಆಸ್ಕರ್ ಜಾಕ್ಸನ್ (ನಾಯಕ) , ಲಾಚ್ಲಾನ್ ಸ್ಟಾಕ್ಪೋಲ್ , ಝಾಕ್ ಕಮ್ಮಿಂಗ್ , ಅಲೆಕ್ಸ್ ಥಾಂಪ್ಸನ್ (ವಿಕೆಟ್ ಕೀಪರ್) , ಮ್ಯಾಟ್ ರೋವ್ , ಮೇಸನ್ ಕ್ಲಾರ್ಕ್ , ಇವಾಲ್ಡ್ ಸ್ಕ್ರೂಡರ್.

ಇದನ್ನೂ ಓದಿ: Rishabh Pant: ಟೀಮ್ ಇಂಡಿಯಾ ಜೊತೆ ಕಾಣಿಸಿಕೊಂಡ ರಿಷಭ್ ಪಂತ್

ನೇಪಾಳ U19 ಪ್ಲೇಯಿಂಗ್ 11: ಅರ್ಜುನ್ ಕುಮಾಲ್ , ಆಕಾಶ್ ತ್ರಿಪಾಠಿ , ದೇವ್ ಖಾನಲ್ (ನಾಯಕ) , ಉತ್ತಮ್ ಥಾಪಾ ಮಗರ್ (ವಿಕೆಟ್ ಕೀಪರ್) , ದೀಪಕ್ ಬೋಹರಾ , ದೀಪೇಶ್ ಕಾಂಡೇಲ್ , ದೀಪಕ್ ಬೋಹರಾ , ಗುಲ್ಸನ್ ಝಾ , ಸುಭಾಷ್ ಭಂಡಾರಿ , ತಿಲಕ್ ಭಂಡಾರಿ , ಆಕಾಶ್ ಚಂದ್.