ODI World Cup 2023: ಬಾಂಗ್ಲಾದೇಶ ತಂಡಕ್ಕೆ ಬಿಗ್ ಶಾಕ್; ನಾಯಕನಿಗೆ ಇಂಜುರಿ..!

|

Updated on: Sep 29, 2023 | 7:07 PM

ODI World Cup 2023: ಇಂದು ನಾಯಕ ಶಕೀಬ್ ಅಲ್ ಹಸನ್ ಇಲ್ಲದೆ ಬಾಂಗ್ಲಾದೇಶ ತಂಡ ಕಣಕ್ಕಿಳಿದಿದೆ. ಮೂಲಗಳ ಪ್ರಕಾರ, ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಅಭ್ಯಾಸ ಪಂದ್ಯದ ಹಿಂದಿನ ರಾತ್ರಿ ಫುಟ್‌ಬಾಲ್ ಆಡುವಾಗ ಶಕೀಬ್ ಅವರ ಎಡಗಾಲಿಗೆ ಗಾಯವಾಗಿದೆ. ಹಾಗಾಗಿ ಲಂಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಶಕೀಬ್ ಆಡಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ODI World Cup 2023: ಬಾಂಗ್ಲಾದೇಶ ತಂಡಕ್ಕೆ ಬಿಗ್ ಶಾಕ್; ನಾಯಕನಿಗೆ ಇಂಜುರಿ..!
ಶಕೀಬ್ ಅಲ್ ಹಸನ್
Follow us on

ಏಕದಿನ ವಿಶ್ವಕಪ್ (ODI World Cup 2023) ಇನ್ನು ಕೇವಲ 5 ದಿನಗಳ ನಂತರ ಭಾರತದಲ್ಲಿ ಪ್ರಾರಂಭವಾಗಲಿದೆ. ಈ ಮಹಾ ಸಂಗ್ರಾಮದಲ್ಲಿ ಭಾಗವಹಿಸುತ್ತಿರುವ 10 ತಂಡಗಳ ಪೈಕಿ 6 ತಂಡಗಳು ಇಂದು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಗುವಾಹಟಿಯ ಬರ್ಷಪರಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ (Bangladesh vs Sri Lanka) ನಡುವೆ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಆದರೆ ಇಂದು ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಇಲ್ಲದೆ ಬಾಂಗ್ಲಾದೇಶ ತಂಡ ಕಣಕ್ಕಿಳಿದಿದೆ. ಮೂಲಗಳ ಪ್ರಕಾರ, ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಅಭ್ಯಾಸ ಪಂದ್ಯದ ಹಿಂದಿನ ರಾತ್ರಿ ಫುಟ್‌ಬಾಲ್ ಆಡುವಾಗ ಶಕೀಬ್ ಅವರ ಎಡಗಾಲಿಗೆ ಗಾಯವಾಗಿದೆ. ಹಾಗಾಗಿ ಲಂಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಶಕೀಬ್ ಆಡಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಎಡ ಹಿಮ್ಮಡಿಗೆ ಗಾಯ

ವಿಶ್ವಕಪ್‌ಗೆ 5 ದಿನಗಳ ಮೊದಲು ಶಕೀಬ್ ಅಲ್ ಹಸನ್ ಹಠಾತ್ ಗಾಯಗೊಂಡಿರುವುದು ಬಾಂಗ್ಲಾದೇಶ ಪಾಳೆಯದ ಆತಂಕವನ್ನು ಹೆಚ್ಚಿಸಿದೆ. ಗುವಾಹಟಿಯಲ್ಲಿ ನಡೆಯುತ್ತಿರುವ ಮೊದಲ ಅಭ್ಯಾಸ ಪಂದ್ಯದಲ್ಲಿ ಶಾಕಿಬ್ ಬದಲಿಗೆ ಮೆಹದಿ ಹಸನ್ ಮಿರಾಜ್ ತಂಡದ ನಾಯಕತ್ವವಹಿಸಿದ್ದರು. ಆದರೆ, ಶಕೀಬ್ ಗಾಯಗೊಂಡಿರುವ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ. ಆದರೆ, ನಿನ್ನೆ ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದ ಹಿಂದಿನ ದಿನ ಫುಟ್ಬಾಲ್ ಆಡುವಾಗ ಎಡ ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಶಕೀಬ್ ಅವರ ಪಾದಗಳು ಊದಿಕೊಂಡಿವೆ ಎಂದು ವರದಿಯಾಗಿದ್ದು, ಬೇಗನೇ ಊತ ಕಡಿಮೆಯಾಗದಿದ್ದರೆ ಅಕ್ಟೋಬರ್ 1ರಂದು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶಕೀಬ್ ಆಡುವುದು ಅನುಮಾನ ಎನ್ನಲಾಗಿದೆ.

ಇನ್ನು ಅಕ್ಟೋಬರ್ 7 ರಂದು ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾ ತಂಡ ತನ್ನ ವಿಶ್ವಕಪ್ ಪಯಣ ಆರಂಭಿಸಲಿದೆ. ಶಕೀಬ್ ಅಲ್ ಹಸನ್ ಅವರ ಗಾಯ ಮಾಯದಿದ್ದರೆ, ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯಕ್ಕೂ ಗೈರಾಗುವ ಸಾಧ್ಯತೆ ಇದೆ.

ನಾಯಕ- ಮಾಜಿ ನಾಯಕನ ನಡುವೆ ಕಿತ್ತಾಟ; ವಿಶ್ವಕಪ್​ಗೂ ಮುನ್ನ ಬಾಂಗ್ಲಾ ತಂಡದಲ್ಲಿ ಭಿನ್ನಮತ ಸ್ಫೋಟ

ವಿವಾದದಲ್ಲಿ ಬಾಂಗ್ಲಾ ತಂಡ

ವಾಸ್ತವವಾಗಿ ಬಾಂಗ್ಲಾದೇಶ ತಂಡ ಹಲವು ವಿವಾದಗಳೊಂದಿಗೆ ವಿಶ್ವಕಪ್ ಆಡಲು ಭಾರತಕ್ಕೆ ಕಾಲಿಟ್ಟಿದೆ. ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್​ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ತಂಡ ಪ್ರಕಟವಾದ ಬಳಿಕ ನಾಯಕ ಹಾಗೂ ಮಾಜಿ ನಾಯಕರ ಬಹಿರಂಗ ಹೇಳಿಕೆಗಳೂ ತಂಡವನ್ನು ಇಕ್ಕಟಿಗೆ ಸಿಲುಕಿಸಿವೆ. ಈ ನಡುವೆ ತಂಡದ ಹಾಲಿ ನಾಯಕ ಶಕೀಬ್ ಗಾಯಗೊಂಡಿರುವುದು ಬಾಂಗ್ಲಾದೇಶದ ಚಿಂತೆಯನ್ನು ಹೆಚ್ಚಿಸಿದೆಯೇ ಹೊರತು ಕಡಿಮೆ ಮಾಡಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ