Virat Kohli: ಕಿಂಗ್ ಕೊಹ್ಲಿ ವಿಶ್ವ ಗೆದ್ದು ಇಂದಿಗೆ 15 ವರ್ಷ..!

|

Updated on: Mar 03, 2023 | 10:30 AM

Virat Kohli: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಮಾತು ಕೊಹ್ಲಿ ನಾಯಕತ್ವವಹಿಸಿದಾಗಿನಿಂದಲೂ ಇದೆ. ಆದರೆ ವಾಸ್ತವವತೆ ಏನೆಂದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದೆ.

Virat Kohli: ಕಿಂಗ್ ಕೊಹ್ಲಿ ವಿಶ್ವ ಗೆದ್ದು ಇಂದಿಗೆ 15 ವರ್ಷ..!
ವಿರಾಟ್ ಕೊಹ್ಲಿ
Follow us on

ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ (ICC) ಟ್ರೋಫಿ ಗೆದ್ದಿಲ್ಲ ಎಂಬ ಮಾತು ಕೊಹ್ಲಿ ನಾಯಕತ್ವವಹಿಸಿದಾಗಿನಿಂದಲೂ ಇದೆ. ಆದರೆ ವಾಸ್ತವತೆ ಏನೆಂದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ವಿಶ್ವಕಪ್ ಗೆದ್ದಿದೆ. ಸುಮಾರು 15 ವರ್ಷಗಳ ಹಿಂದೆ ತಮ್ಮ ನಾಯಕತ್ವದಲ್ಲಿ ಕೊಹ್ಲಿ ಐಸಿಸಿ ಪ್ರಶಸ್ತಿಯನ್ನು ಭಾರತದ ಬ್ಯಾಗ್‌ಗೆ ಹಾಕಿದ್ದರು. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ (ICC U19 World Cup) ಟೀಂ ಇಂಡಿಯಾದ ನಾಯಕತ್ವವಹಿಸಿದ್ದ ಕೊಹ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 12 ರನ್‌ಗಳಿಂದ ಸೋಲಿಸುವ ಮೂಲಕ ಕೊಹ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಇದರೊಂದಿಗೆ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ತಾರೆ ಎನಿಸಿಕೊಂಡರು. ಅಂಡರ್-19 ವಿಶ್ವಕಪ್ ಗೆದ್ದ ಕೆಲವೇ ತಿಂಗಳುಗಳಲ್ಲಿ ಕೊಹ್ಲಿ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿ ಜಗತ್ತಿಗೆ ತಮ್ಮ ಸಾಮರ್ಥ್ಯ ತೋರಿಸಿದರು. ಕೊಹ್ಲಿ ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ತಂಡದ ನಾಯಕತ್ವವನ್ನು ವಹಿಸಿಕೊಂಡರು, ಅನೇಕ ಐಸಿಸಿ ಈವೆಂಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು. ಆದರೆ ಅವರ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಹೊಂದಿರುವ ಕೊಹ್ಲಿ, ಹಿರಿಯ ತಂಡದಲ್ಲಿ ನಾಯಕರಾಗಿ ಭಾರತಕ್ಕೆ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಕಳೆದ ವರ್ಷ ಕೊಹ್ಲಿ ಅತೃಪ್ತ ಕನಸುಗಳೊಂದಿಗೆ ನಾಯಕತ್ವ ತ್ಯಜಿಸಿದ್ದರು. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ನಾಯಕನಾಗಿ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು. ಸರಿಯಾಗಿ 15 ವರ್ಷಗಳ ಹಿಂದೆ ಕೊಹ್ಲಿ ಈ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದ್ದರು. ಇದು ಭಾರತದ ಎರಡನೇ ಅಂಡರ್ 19 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಕೊಹ್ಲಿಯಲ್ಲದೆ, ರವೀಂದ್ರ ಜಡೇಜಾ, ಮನೀಶ್ ಪಾಂಡೆ, ಸೌರವ್ ತಿವಾರಿ ಅವರಂತಹ ಸ್ಟಾರ್‌ಗಳು ಸಹ ಈ ವಿಶ್ವ ವಿಜೇತ ಭಾರತ ತಂಡದಲ್ಲಿದ್ದರು.

IND vs AUS: ಅನನುಭವಿ ಸ್ಪಿನ್ನರ್​ಗಳಿಗೆ ಕೊಹ್ಲಿ ವಿಕೆಟ್ ಉರುಳಿಸುವುದು ನೀರು ಕುಡಿದಷ್ಟೇ ಸುಲಭ..!

ಕೊಹ್ಲಿ ವಿಫಲ

ಇನ್ನು ಈ ವಿಶ್ವಕಪ್​ನ ಅಂತಿಮ ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು. ಆದರೆ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಭಾರತದ ಸ್ಕೋರ್ 3 ಇರುವಾಗ ತರುವರ್ ಕೊಹ್ಲಿ ರೂಪದಲ್ಲಿ ಮೊದಲ ಹೊಡೆತ ಬಿದ್ದಿತು. ಶ್ರೀವತ್ಸ ಗೋವಸ್ವಾಮಿ ಕೂಡ ಬೇಗನೇ ಪೆವಿಲಿಯನ್‌ಗೆ ಮರಳಿದರು. 27 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡ ನಂತರ ತನ್ಮಯ್ ಶ್ರೀವಾಸ್ತವ್ ಮತ್ತು ವಿರಾಟ್ ಕೊಹ್ಲಿ ಒಟ್ಟಾಗಿ ಇನ್ನಿಂಗ್ಸ್ ಅನ್ನು 74 ರನ್‌ಗಳಿಗೆ ಕೊಂಡೊಯ್ದರು. ಆದರೆ ಕೊಹ್ಲಿ ಕೇವಲ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ತನ್ಮಯ್ ಕೂಡ 46 ರನ್ ಗಳಿಸಿ ಔಟಾದರು.

ಭಾರತಕ್ಕೆ ನೆರವಾದ ವೇಗಿಗಳು

ಆ ಬಳಿಕ ಜೊತೆಯಾದ ಸೌರಭ್ ತಿವಾರಿ ಮತ್ತು ಮನೀಶ್ ಪಾಂಡೆ ತಲಾ 20 ರನ್ ಗಳಿಸಿದರೆ, ರವೀಂದ್ರ ಜಡೇಜಾ 11 ರನ್, ಇಕ್ಬಾಲ್ 9 ರನ್, ಪ್ರದೀಪ್ ಸಗ್ವಾನ್ 13 ರನ್, ಸಿದ್ಧಾರ್ಥ್ ಕೌಲ್ ಮತ್ತು ಅಜಿತೇಶ್ ತಲಾ 1 ರನ್ ಗಳಿಸುವುದರೊಂದಿಗೆ ಭಾರತದ ಮೊತ್ತವನ್ನು 159 ರನ್​ಗಳಿಗೆ ತಲುಪಿಸಿದರು. ಆದರೆ, ಇದಾದ ಬಳಿಕ ಮಳೆ ಅಡ್ಡಿಪಡಿಸಿದ್ದರಿಂದ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಗುರಿಯನ್ನು 116 ರನ್‌ಗಳಿಗೆ ಇಳಿಸಲಾಯಿತು. ಹೀಗಾಗಿ ಟೀಂ ಇಂಡಿಯಾ ಸೋಲುವ ಆತಂಕದಲ್ಲಿತ್ತು. ಆದರೆ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವವನ್ನು 103 ರನ್‌ಗಳಿಗೆ ಅಲೌಟ್ ಮಾಡುವುದರೊಂದಿಗೆ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ ಗರಿಷ್ಠ 35 ರನ್ ಗಳಿಸಿದರೆ, ಭಾರತದ ಪರ ಜಡೇಜಾ, ಅಜಿತೇಶ್ ಮತ್ತು ಕೌಲ್ ತಲಾ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:25 am, Fri, 3 March 23