ಪಾಕ್ ತಂಡದಿಂದ ಮತ್ತೆ ಮೋಸದಾಟ? ವಿವಾದಕ್ಕೆ ಕಾರಣವಾದ ಫೋಟೋಗಳಲ್ಲಿರುವುದೇನು?

|

Updated on: Oct 11, 2023 | 8:52 AM

2023ರ ವಿಶ್ವಕಪ್‌ (ICC World Cup 2023) ಆರಂಭವಾಗುವುದಕ್ಕೂ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದ್ದ ಪಾಕಿಸ್ತಾನ ತಂಡ (Pakistan Cricket Team) ಇದೀಗ ವಿಶ್ವಕಪ್ ಆರಂಭವಾದ ಬಳಿಕವೂ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಾಗುತ್ತಿದೆ. ಈ ಮುನ್ನ ನಡೆದ ಎರಡೂ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ 300 ಕ್ಕೂ ಅಧಿಕ ರನ್ ಬಾರಿಸಿದರ ಹೊರತಾಗಿಯೂ ಸೋಲನ್ನು ಎದುರಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಪಾಕ್ ತಂಡ, ಆ ಬಳಿಕ ನಡೆದ ನೆದರ್ಲೆಂಡ್ಸ್ (Pakistan vs Nederland) ವಿರುದ್ಧದ ಮೊದಲ ಪಂದ್ಯದಲ್ಲೂ ಸೋಲಿನ ದವಡೆಯಿಂದ ಸ್ಪಲ್ಪದರಲ್ಲೇ […]

ಪಾಕ್ ತಂಡದಿಂದ ಮತ್ತೆ ಮೋಸದಾಟ? ವಿವಾದಕ್ಕೆ ಕಾರಣವಾದ ಫೋಟೋಗಳಲ್ಲಿರುವುದೇನು?
ಪಾಕಿಸ್ತಾನ ತಂಡ
Follow us on

2023ರ ವಿಶ್ವಕಪ್‌ (ICC World Cup 2023) ಆರಂಭವಾಗುವುದಕ್ಕೂ ಮುನ್ನವೇ ಸಾಕಷ್ಟು ಸುದ್ದಿಯಲ್ಲಿದ್ದ ಪಾಕಿಸ್ತಾನ ತಂಡ (Pakistan Cricket Team) ಇದೀಗ ವಿಶ್ವಕಪ್ ಆರಂಭವಾದ ಬಳಿಕವೂ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಾಗುತ್ತಿದೆ. ಈ ಮುನ್ನ ನಡೆದ ಎರಡೂ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ 300 ಕ್ಕೂ ಅಧಿಕ ರನ್ ಬಾರಿಸಿದರ ಹೊರತಾಗಿಯೂ ಸೋಲನ್ನು ಎದುರಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಪಾಕ್ ತಂಡ, ಆ ಬಳಿಕ ನಡೆದ ನೆದರ್ಲೆಂಡ್ಸ್ (Pakistan vs Nederland) ವಿರುದ್ಧದ ಮೊದಲ ಪಂದ್ಯದಲ್ಲೂ ಸೋಲಿನ ದವಡೆಯಿಂದ ಸ್ಪಲ್ಪದರಲ್ಲೇ ಪಾರಾಗಿತ್ತು. ಇದೆಲ್ಲದರ ನಡುವೆ ಇದೀಗ ಪಾಕಿಸ್ತಾನ ತಂಡ ಹೊಸ ವಿವಾದದ ಮೂಲಕ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಪಾಕ್ ತಂಡ ಎದುರಿಸುತ್ತಿರುವ ಹೊಸ ವಿವಾದ ಏನೆಂದರೆ, ತಂಡದ ಆಟಗಾರರು ಬೌಂಡರಿ ಗೆರೆಯ ವಿಚಾರದಲ್ಲಿ ಕಳ್ಳಾಟವಾಡುತ್ತಿದ್ದಾರೆ ಎಂಬುದು.

ವಾಸ್ತವವಾಗಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪಾಕಿಸ್ತಾನದ ಬೌಲರ್‌ಗಳನ್ನು ಬಗ್ಗುಬಡಿಯುವ ಮೂಲಕ 344 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಕುಸಾಲ್ ಮೆಂಡಿಸ್ ಕೇವಲ 77 ಎಸೆತಗಳಲ್ಲಿ 122 ರನ್‌ಗಳ ಸ್ಫೋಟಕ ಶತಕ ಸಿಡಿಸಿದರೆ, ಇವರಲ್ಲದೆ ಸದೀರ ಸಮರವಿಕ್ರಮ ಕೂಡ ಶತಕ ಬಾರಿಸಿದರು.

ವಿಶ್ವಕಪ್ ಮೊದಲ ಪಂದ್ಯದಲ್ಲೇ ಕಳ್ಳಾಟವಾಡಿತು ಪಾಕಿಸ್ತಾನ?

ಹೊಸ ವಿವಾದ

ಮೆಂಡಿಸ್ ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿ ಕ್ರೀಸ್​ನಲ್ಲಿದ್ದಷ್ಟು ಹೊತ್ತು ಪಾಕ್ ಬೌಲರ್​ಗಳನ್ನು ಚಿಂತೆಗೀಡು ಮಾಡಿದ್ದರು. ಆದರೆ ಲಂಕಾ ಇನ್ನಿಂಗ್ಸ್​ನ 29ನೇ ಓವರ್​ನಲ್ಲಿ ಹಸನ್ ಅಲಿ ಎಸೆತದಲ್ಲಿ ದೊಡ್ಡ ಶಾಟ್ ಆಡಿದ ಮೆಂಡಿಸ್ ಡೀಪ್ ಮಿಡ್ ವಿಕೆಟ್​ನ ಬೌಂಡರಿ ಲೈನ್ ಬಳಿ ಕ್ಯಾಚಿತ್ತು ಔಟಾದರು. ಇಮಾಮ್ ಉಲ್ ಹಕ್ ಈ ಕ್ಯಾಚ್ ಹಿಡಿದರು. ಆದರೆ ಇಮಾಮ್ ಕ್ಯಾಚ್ ಹಿಡಿದು ನೆಲಕ್ಕೆ ಉರುಳಿದ ವೇಳೆ ಕಂಡು ಬಂದ ದೃಶ್ಯ ಪಾಕ್ ಆಟಗಾರರು ಮೋಸದಾಟ ಆಡುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.

ವಾಸ್ತವವಾಗಿ, ಇಮಾಮ್ ಕ್ಯಾಚ್ ಹಿಡಿದು ನೆಲಕ್ಕುರುಳಿದಾಗ ಅವರು ಬೌಂಡರಿ ಹಗ್ಗದ ಗುರುತನ್ನು ಸ್ಪರ್ಶಿಸುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೀಗಾಗಿ ಯಾರೋ ಬೌಂಡರಿ ಲೈನ್ ಅನ್ನು ಹಿಂದಕ್ಕೆ ಸರಿಸಿದಂತೆ ತೋರುತ್ತಿತ್ತು. ಆ ಬಳಿಕ ಇಮಾಮ್ ಹಿಡಿದ ಕ್ಯಾಚ್​ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೀಲ್ಡಿಂಗ್‌ನಲ್ಲಿ ಪಾಕಿಸ್ತಾನ ತಂಡ ಕಳ್ಳಾಟ ಆಡುತ್ತಿದ್ದೆ ಎಂದು ಟ್ವಿಟರ್‌ನಲ್ಲಿ ಅನೇಕ ಬಳಕೆದಾರರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ರೀತಿಯ ಕಳ್ಳಾಟ ಸಾಧ್ಯವೇ?

ಈ ಪಂದ್ಯಕ್ಕೂ ಮುನ್ನ ಹೈದರಾಬಾದ್‌ನಲ್ಲಿಯೇ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವೆ ಹಣಾಹಣಿ ನಡೆದಿತ್ತು. ಆ ಪಂದ್ಯದಲ್ಲೂ ಇದೇ ರೀತಿಯ ಪ್ರಶ್ನೆಗಳು ಎದ್ದಿದ್ದವು. ಆ ಪಂದ್ಯದಲ್ಲೂ ಇದೇ ರೀತಿಯ ಫೋಟೋಗಳು ವೈರಲ್ ಆಗಿದ್ದವು. ಹೀಗಾಗಿ ಇದೀಗ ಪಾಕ್ ಆಟಗಾರರು ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಐಸಿಸಿ ನಿಯಮವನ್ನು ಪಾಲಿಸುವ ಸುಲವಾಗಿ ಮೈದಾನದ ಸಿಬ್ಬಂದಿಯೇ ಬೌಂಡರಿ ಗೆರೆಯನ್ನು ಹಿಂದಕ್ಕೆ ಸರಿಸಿದರೆ ಎಂಬುದು ಸ್ಪಷ್ಟವಾಗಿಲ್ಲ.

ಐಸಿಸಿ ನಿಯಮದಿಂದ ಹೀಗಾಯ್ತ?

ವಾಸ್ತವವಾಗಿ ಈ ಬಾರಿಯ ವಿಶ್ವಕಪ್​ನಲ್ಲಿ ಬೌಂಡರಿ ಸುತ್ತಳತೆ 70 ಮೀಟರ್​ಗಿಂತ ಕಡಿಮೆ ಇರುವಂತಿಲ್ಲ ಎಂಬ ನಿಯಮವನ್ನು ಐಸಿಸಿ ಹೊರಡಿಸಿದೆ. ಹೀಗಾಗಿ ಬೌಂಡರಿ ಸುತ್ತಳತೆಯನ್ನು ಹಿಗ್ಗಿಸುವ ವೇಳೆ ಈ ರೀತಿಯಾಗಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.​ ಅಲ್ಲದೆ ಪಾಕಿಸ್ತಾನಿ ಆಟಗಾರನು ಬೌಂಡರಿಯನ್ನು ಹಿಂದಕ್ಕೆ ತಳ್ಳಿದ್ದರೆ, ಅದರ ಕೆಲವು ವೀಡಿಯೊಗಳು ಖಂಡಿತವಾಗಿಯೂ ಸಿಗುತ್ತಿದ್ದವು. ಆದರೆ ಇದುವರೆಗೆ ಅಂತಹ ಯಾವುದೇ ವಿಡಿಯೋಗಳು ಸಿಕ್ಕಿಲ್ಲ. ಹೀಗಾಗಿ ಪಾಕ್ ಆಟಗಾರರು ಮೋಸದಾಟ ಆಡಿದ್ದಾರೆ ಎಂದು ಹೇಳುವುದು ಕಷ್ಟ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 am, Wed, 11 October 23