5 ಶತಕ, 5 ಅರ್ಧ ಶತಕ, 1280 ರನ್! ವಿಶ್ವಕಪ್​ನಲ್ಲಿ ಒಂದೇ ದಿನ ಸೃಷ್ಟಿಯಾದ ದಾಖಲೆಗಳೆಷ್ಟು ಗೊತ್ತಾ?

ICC World Cup 2023: ಏಕದಿನ ವಿಶ್ವಕಪ್​ನಲ್ಲಿ ಮಂಗಳವಾರದಂದು ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

|

Updated on: Oct 11, 2023 | 11:46 AM

ಏಕದಿನ ವಿಶ್ವಕಪ್​ನಲ್ಲಿ ಮಂಗಳವಾರದಂದು ನಡೆದ ಡಬಲ್ ಹೆಡರ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

1 / 12
ಒಂದೇ ದಿನ ನಡೆದ ಎರಡು ಪಂದ್ಯಗಳಲ್ಲಿ ದಾಖಲೆಗಳ ಮಹಾಪೂರವೇ ಹರಿದಿದೆ. ಈ ದಿನದಾಟದಲ್ಲಿ 5 ಶತಕ, 5 ಅರ್ಧ ಶತಕ, 120 ಬೌಂಡರಿ, ಮತ್ತು 26 ಸಿಕ್ಸರ್ ಸೇರಿದಂತೆ ಒಟ್ಟು 1280 ರನ್ ದಾಖಲಾಗಿದೆ.

2 / 12
ಶತಕಗಳ ವಿಚಾರಕ್ಕೆ ಬರುವುದಾದರೆ, ಇಂಗ್ಲೆಂಡ್‌ ಪರ ಡೇವಿಡ್ ಮಲಾನ್ ಶತಕ ಸಿಡಿಸಿದರೆ, ಶ್ರೀಲಂಕಾ ಪರ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಹಾಗೂ ಪಾಕ್ ಪರ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಶತಕ ಸಿಡಿಸಿದರು.

3 / 12
ಅರ್ಧಶತಕಗಳ ವಿಚಾರಕ್ಕೆ ಬಂದರೆ, ಇಂಗ್ಲೆಂಡ್‌ ಪರ ಜಾನಿ ಬೈರ್​ಸ್ಟೋ, ಜೋ ರೂಟ್ ಅರ್ಧಶತಕ ಸಿಡಿಸಿದರೆ, ಬಾಂಗ್ಲಾ ಪರ ಲಿಟನ್ ದಾಸ್ ಹಾಗೂ ಮುಶ್ಫಿಕರ್ ರಹೀಮ್ ತಲಾ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಲಂಕಾ ಪರ ಪಾತುಮ್ ನಿಸ್ಸಾಂಕ ಅವರ ಬ್ಯಾಟ್​ನಿಂದಲೂ ಅರ್ಧಶತಕ ಸಿಡಿಯಿತು.

4 / 12
ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಎದುರಿಸಿದ್ದ ಇಂಗ್ಲೆಂಡ್ ಡೇವಿಡ್ ಮಲಾನ್ ಅವರ 140 ರನ್ ಗಳ ಇನ್ನಿಂಗ್ಸ್​ನ ಸಹಾಯದಿಂದಾಗಿ 364 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 227 ರನ್‌ಗಳಿಗೆ ಆಲೌಟ್ ಆಯಿತು.

5 / 12
ಇನ್ನು ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ತಲಾ ಒಂದೊಂದು ಶತಕ ಸಿಡಿಸಿ, ತಂಡವನ್ನು 344 ರನ್‌ಗಳಿಗೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ  ಪಾಕಿಸ್ತಾನದ ಪರ ಅಬ್ದುಲ್ಲಾ ಶಫೀಕ್ ಅವರು 113 ರನ್‌ ಮತ್ತು ಮೊಹಮ್ಮದ್ ರಿಜ್ವಾನ್ 131 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

6 / 12
ಪಾಕಿಸ್ತಾನದ ಪರ 131ರನ್​ಗಳ ಇನ್ನಿಂಗ್ಸ್ ಆಡಿದ ಮೊಹಮ್ಮದ್ ರಿಜ್ವಾನ್, ತಂಡದ ಪರ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ವಿಕೆಟ್‌ಕೀಪರ್‌ ಬ್ಯಾಟರ್ ಎನಿಸಿಕೊಂಡರು. ಇವರಿಗೂ ಮುನ್ನ 124 ರನ್ ಸಿಡಿಸಿದ್ದ  ಕಮ್ರಾನ್ ಅಕ್ಮಲ್ ಹೆಸರಲ್ಲಿ ಈ ದಾಖಲೆ ಇತ್ತು.

7 / 12
ಹಾಗೆಯೇ ಶ್ರೀಲಂಕಾ ನೀಡಿದ 345 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡವಾಯಿತು. ಈ ಹಿಂದೆ 2011ರ ವಿಶ್ವಕಪ್​ನಲ್ಲಿ 328 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಐರ್ಲೆಂಡ್ ಹೆಸರಿನಲ್ಲಿ ಈ ದಾಖಲೆ ಇತ್ತು.

8 / 12
ಇಷ್ಟೆ ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಎರಡನೇ ತಂಡ ಹೆಗ್ಗಳಿಕೆಗೂ ಪಾಕಿಸ್ತಾನ ಪಾತ್ರವಾಗಿದೆ. ಹಾಗೆಯೇ ಈ ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ಯಾವುದೇ ತಂಡ ದಾಖಲಿಸಿದ ಅತ್ಯಧಿಕ ಮೊತ್ತ ಇದಾಗಿದೆ.

9 / 12
ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಶತಕಗಳು ದಾಖಲಾದವು. ಇದರಲ್ಲಿ ಶ್ರೀಲಂಕಾದಿಂದ 2 ಶತಕಗಳಾದರೆ, ಪಾಕಿಸ್ತಾನದ ಪರ 2 ಶತಕಗಳು ಸಿಡಿದವು. ಈ ಮೂಲಕ ಒಂದೇ ಪಂದ್ಯದಲ್ಲಿ 3ನೇ ಬಾರಿಗೆ 4 ಶತಕಗಳು ಸಿಡಿದ ದಾಖಲೆ ಸೃಷ್ಟಿಯಾಯಿತು.

10 / 12
ಹಾಗೆಯೇ ಏಕದಿನ ವಿಶ್ವಕಪ್​ನಲ್ಲಿ ಸೋಲನ್ನೇ ಕಾಣದೆ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವನ್ನು ಸಾಧಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಇದವರೆಗೆ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ವಿಶ್ವಕಪ್​ನಲ್ಲಿ 8 ಗೆಲುವು ದಾಖಲಿಸಿದೆ.

11 / 12
ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ಬ್ಯಾಟರ್​ಗಳು ಶತಕ ಸಿಡಿಸಿದರು. ಲಂಕಾ ಪರವಾಗಿ ಸಮರವಿಕ್ರಮ 108 ರನ್​ಗಳ ಇನ್ನಿಂಗ್ಸ್ ಆಡಿದರೆ, ಪಾಕ್ ಪರ ಮೊಹಮ್ಮದ್ ರಿಜ್ವಾನ್ 131 ರನ್​ಗಳ ಇನ್ನಿಂಗ್ಸ್ ಆಡುದರು.

12 / 12
Follow us
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ

ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ

ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...

ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ

Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ