ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಸಮಸ್ಯೆಗಳು ಸದ್ಯಕ್ಕೆ ಪರಿಹಾರವಾಗುವಂತಿಲ್ಲ. ಅಧ್ಯಕ್ಷ ಗೊಟಬಾಯ ರಾಜಪಕ್ಸೆ ವಿರುದ್ಧ ಜನರ ಅಸಹನೆ ಮತ್ತು ಪ್ರತಿಭಟನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅನಿರ್ದಿಷ್ಟಾವಾಧಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಹೇರಿದ್ದಾರೆ. ಶ್ರೀಲಂಕಾದ ಇಂದಿನ ದುಸ್ಥಿತಿಗೆ ರಾಜಪಕ್ಸೆ ಕುಟುಂಬದ ದುರಾಡಳಿತವೇ ಕಾರಣ. ಅವರು ಮೊದಲು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ನಡುವೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕೋರಿಕೆಯ ಮೇರೆಗೆ ಪಾಕಿಸ್ತಾನದ ಮುಂಬರುವ ಶ್ರೀಲಂಕಾ ಪ್ರವಾಸದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ. ಆದರೆ ಜುಲೈ-ಆಗಸ್ಟ್‌ನಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳಿಗಾಗಿ ಪಾಕಿಸ್ತಾನ ಕ್ರಿಕೆಟ್, ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ. ಈ ODI ಸರಣಿಯನ್ನು ICC ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಸೇರಿಸಲಾಗಿಲ್ಲ. ಆದರೆ ಟೆಸ್ಟ್ ಸರಣಿಯು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship) 2021-23 ರ ಭಾಗವಾಗಿರಲಿದೆ ಎಂದು ವರದಿಯಾಗಿದೆ.
ಶ್ರೀಲಂಕಾದ ಇತ್ತೀಚಿನ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಶ್ರೀಲಂಕಾ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ನಡುವಿನ ODI ಸರಣಿಯನ್ನು ರದ್ದುಗೊಳಿಸುವಲ್ಲಿ ಪಾತ್ರವಹಿಸಿವೆ. ಶ್ರೀಲಂಕಾದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ, ಹಗಲು-ರಾತ್ರಿ ಪಂದ್ಯಗಳನ್ನು ಆಯೋಜಿಸುವುದು ಕಷ್ಟಕರವಾಗಿದೆ.
ಪಾಕಿಸ್ತಾನ ಕೇವಲ 2 ಟೆಸ್ಟ್ ಪಂದ್ಯಗಳಿಗಾಗಿ ಶ್ರೀಲಂಕಾಕ್ಕೆ ಪ್ರಯಾಣ
ಏತನ್ಮಧ್ಯೆ, ಕ್ರಿಕೆಟ್ ಆಸ್ಟ್ರೇಲಿಯಾ ಶ್ರೀಲಂಕಾದ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಆಸ್ಟ್ರೇಲಿಯನ್ ಕ್ರಿಕೆಟ್ ತಂಡವು ಈ ವರ್ಷದ ಕೊನೆಯಲ್ಲಿ ಎರಡು ಟೆಸ್ಟ್‌ಗಳು, ಐದು ODIಗಳು ಮತ್ತು ಮೂರು T20 ಅಂತರಾಷ್ಟ್ರೀಯ ಪಂದ್ಯಗಳಿಗಾಗಿ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಧ್ಯಮ ನಿರ್ದೇಶಕ ಸಮಿ-ಉಲ್-ಹಸನ್ ಬರ್ನಿ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಏಕದಿನ ಪಂದ್ಯಗಳನ್ನು ರದ್ದುಗೊಳಿಸುವಂತೆ ವಿನಂತಿಸಿದೆ ಎಂಬುದನ್ನು ಮಾಧ್ಯಮ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.
Breaking News ?:-
ODIS Scrapped From Sri Lanka Tour. Pakistan Will only Play 2 Tests on the Request Of Sri Lankan Board. The ODI Series Scrapped due to Lankan Premier League. As Sri Lanka is Struggling Financially.
(Source -Cricket Pakistan)#PakvSL #cricket #BabarAzam? pic.twitter.com/Ly7cK9A1WO
— Green Cap 360 (@Greencap360) May 9, 2022
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಧ್ಯಮ ನಿರ್ದೇಶಕ ಸಾಮಿ-ಉಲ್-ಹಸನ್ ಬರ್ನಿ, ಕ್ರಿಕೆಟ್ ಪಾಕಿಸ್ತಾನವನ್ನು ಉಲ್ಲೇಖಿಸಿ, “ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಶ್ರೀಲಂಕಾ ಮಂಡಳಿಯು ಒಂದು ವಾರ ಮುಂಚಿತವಾಗಿ ತಮ್ಮ ಲೀಗ್ ಅನ್ನು ಪ್ರಾರಂಭಿಸಲು ಬಯಸಿದೆ. ಆದ್ದರಿಂದ ODI ಸರಣಿಯನ್ನು ರದ್ದುಪಡಿಸುವಂತೆ ಶ್ರೀಲಂಕಾ ಕ್ರಿಕೆಟ್ ನಮ್ಮನ್ನು ಕೇಳಿಕೊಂಡಿತ್ತು. ಹೀಗಾಗಿ ನಾವು ಅವರ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಕೋರಿಕೆಯನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಾಮಿ-ಉಲ್-ಹಸನ್ ಬರ್ನಿ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮುಂಬರುವ ಏಕದಿನ ಸರಣಿಯು ಮುಂಬರುವ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿಲ್ಲ. ಹಾಗಾಗಿ ಸರಣಿ ರದ್ದುಪಡಿಸಲು ನಮಗೆ ಮನಸ್ಸಿಲ್ಲ. ಸರಣಿಯ ಅಂತಿಮ ವೇಳಾಪಟ್ಟಿಯನ್ನು ಇನ್ನೂ ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
Published On - 6:15 pm, Mon, 9 May 22