Virat Kohli: ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬೇಡಿ…ಗವಾಸ್ಕರ್ ಅಚ್ಚರಿಯ ಹೇಳಿಕೆ..!
Virat Kohli: ವಿರಾಟ್ ಕೊಹ್ಲಿ ಐಪಿಎಲ್‌ನ 12 ಪಂದ್ಯಗಳಲ್ಲಿ 111 ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಗಳಿಸಿದ್ದಾರೆ. ಈ ಸೀಸನ್ನಲ್ಲಿ ಅವರು ಕೇವಲ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದಾರೆ. ಇನ್ನು 6 ಇನಿಂಗ್ಸ್ನಲ್ಲಿ ಸಿಂಗಲ್ ಡಿಜಿಟ್ ಸ್ಕೋರ್‌ಗೆ ಔಟಾಗಿದ್ದಾರೆ.
IPL 2022: ಐಪಿಎಲ್ ಸೀಸನ್ 15 ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮೌನವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಕೊನೆಯ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ಮೊದಲ ಎಸೆತದಲ್ಲಿ ಔಟಾದರು. ಇದು ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿಯ ಮೂರನೇ ಗೋಲ್ಡನ್ ಡಕ್ ಔಟ್ ಎಂಬುದು ವಿಶೇಷ. ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್ ಗೆ ವಾಪಸಾದ ಬೆನ್ನಲ್ಲೇ ಅವರಿಗೆ ವಿಶ್ರಾಂತಿ ನೀಡಬೇಕೆಂಬ ಬೇಡಿಕೆ ಮತ್ತೆ ಕೇಳಿ ಬರುತ್ತಿದೆ. ಆದರೆ, ಇದನ್ನು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಒಪ್ಪಿಲ್ಲ. ಅಲ್ಲದೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕೊಹ್ಲಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನ 12 ಪಂದ್ಯಗಳಲ್ಲಿ 111 ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಗಳಿಸಿದ್ದಾರೆ. ಈ ಸೀಸನ್ನಲ್ಲಿ ಅವರು ಕೇವಲ ಒಂದು ಅರ್ಧ ಶತಕ ಮಾತ್ರ ಗಳಿಸಿದ್ದಾರೆ. ಇನ್ನು 6 ಇನಿಂಗ್ಸ್ನಲ್ಲಿ ಸಿಂಗಲ್ ಡಿಜಿಟ್ ಸ್ಕೋರ್‌ಗೆ ಔಟಾಗಿದ್ದಾರೆ. ಇದು ಯಾವುದೇ ಐಪಿಎಲ್ ಸೀಸನ್ನಲ್ಲಿ ಕೊಹ್ಲಿಯ ಕಳಪೆ ಪ್ರದರ್ಶನವಾಗಿದೆ. ಈ ಕಾರಣಕ್ಕೆ ಅವರಿಗೆ ವಿಶ್ರಾಂತಿ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಕೊಹ್ಲಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಬೇಕು ಎಂದಿದ್ದರು. ಆದರೆ ಗವಾಸ್ಕರ್ ಮಾತ್ರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬಾರದೆಂಬ ಅಭಿಪ್ರಾಯ ಮಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್, ಬ್ರೇಕ್ ನೀಡುವುದು ಎಂದರೆ ಅವರು ಭಾರತ ತಂಡದಿಂದ ಹೊರಗುಳಿಯಬೇಕೆಂಬುದು ಅರ್ಥವಲ್ಲ. ಭಾರತಕ್ಕಾಗಿ ಆಡುವುದು ಅವರ ಮೊದಲ ಮತ್ತು ಪ್ರಮುಖ ಆದ್ಯತೆಯಾಗಬೇಕು. ಕೊಹ್ಲಿ ಆಡದಿದ್ದರೆ, ಅವರು ಹೇಗೆ ಫಾರ್ಮ್ ಕಂಡುಕೊಳ್ಳುತ್ತಾರೆ? ಬದಲಾವಣೆಗಾಗಿ ಡ್ರೆಸಿಂಗ್ ರೂಮ್ನಲ್ಲಿ ಕುಳಿತುಕೊಳ್ಳುವುದರಿಂದ, ಅವರ ಫಾರ್ಮ್ ಹಿಂತಿರುಗುವುದಿಲ್ಲ. ಹೆಚ್ಚು ಆಡುವ ಮೂಲಕ ಫಾರ್ಮ್ಗೆ ಮರಳಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಬೇಕು ಎಂದು ಕ್ರಿಕೆಟ್ ಬಗ್ಗೆ ಗೊತ್ತಿರುವವರು ಎಲ್ಲರೂ ಹೇಳುತ್ತಾರೆ. ಹಾಗೆಯೇ ಅವರು ಭಾರತ ತಂಡದಲ್ಲಿರಬೇಕು. ಹಾಗಾಗಿ ಟೀಮ್ ಇಂಡಿಯಾ ಪರ ಆಡುವುದರಿಂದ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬದಲು ಒಂದಷ್ಟು ಅವಕಾಶ ನೀಡಿದರೆ ಫಾರ್ಮ್ಗೆ ಮರಳುತ್ತಾರೆ ಎಂದು ಸುನಿಲ್ ಗವಾಸ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.