IPL 2022: ಡೆಲ್ಲಿ ಕೆಟ್ಟ ಆಟವಾಡಿತು, ಆದ್ದರಿಂದ ಸೋತರು; ಪತ್ರಿಕಾಗೋಷ್ಠಿಯಲ್ಲಿ ಕೋಚ್ ಪಾಂಟಿಂಗ್ ಆಕ್ರೋಶ

IPL 2022: ಚೆನ್ನೈ ವಿರುದ್ಧದ ಹೀನಾಯ ಸೋಲಿನಲ್ಲಿ ತಮ್ಮ ತಂಡವು ಆಟದ ಎಲ್ಲಾ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದು ಒಪ್ಪಿಕೊಂಡರು. ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ, ನಮ್ಮ ಬ್ಯಾಟಿಂಗ್ ಕೂಡ ತೀರಾ ಕಳಪೆಯಾಗಿತ್ತು.

IPL 2022: ಡೆಲ್ಲಿ ಕೆಟ್ಟ ಆಟವಾಡಿತು, ಆದ್ದರಿಂದ ಸೋತರು; ಪತ್ರಿಕಾಗೋಷ್ಠಿಯಲ್ಲಿ ಕೋಚ್ ಪಾಂಟಿಂಗ್ ಆಕ್ರೋಶ
ರಿಷಬ್ ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on: May 09, 2022 | 3:35 PM

ಐಪಿಎಲ್ 2022 (IPL 2022) ರಂದು 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Chennai Super Kings vs Delhi Capitals) ಹೀನಾಯ ಸೋಲನ್ನು ಕಂಡಿತು. ಈ ಪಂದ್ಯದಲ್ಲಿ ಡೆಲ್ಲಿ 91 ರನ್‌ಗಳ ಬೃಹತ್ ಅಂತರದಿಂದ ಸೋತಿದ್ದು, ಡೆಲ್ಲಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗವೂ ಕಳಪೆ ಆಟ ಪ್ರದರ್ಶಿಸಿತು. ಫೀಲ್ಡಿಂಗ್‌ನಲ್ಲಿಯೂ ಯಾವುದೇ ಜೀವಕಳೆ ಕಂಡುಬರಲಿಲ್ಲ, ಇದರಿಂದಾಗಿ ಪಂತ್ ಬಳಗವು ಸೋಲಿನ ಭಾರವನ್ನು ಹೊರಬೇಕಾಯಿತು. ಈ ಪಂದ್ಯದ ಸೋಲಿನ ನಂತರ, ನಾಯಕ ರಿಷಬ್ ಪಂತ್ ಅವರ ನಿರ್ಧಾರಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಹುಟ್ಟಿಕೊಂಡಿವೆ. ಆದರೆ ತಂಡದ ಹೇಡ್ ಕೋಚ್ ರಿಕಿ ಪಾಂಟಿಂಗ್, ನಾಯಕ ಪಂತ್​ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಹೊರಗಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ ಎಂದಿದ್ದಾರೆ. ವಾಸ್ತವವಾಗಿ, ಪಂದ್ಯದಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಬೌಲಿಂಗ್ ಮತ್ತು ಬೌಲರ್‌ಗಳ ಆಯ್ಕೆಯ ಬದಲಾವಣೆಗಾಗಿ ಪಂತ್ ಅವರನ್ನು ವೀರೇಂದ್ರ ಸೆಹ್ವಾಗ್‌ನಂತಹ ಮಾಜಿ ಆಟಗಾರರು ಟೀಕಿಸಿದ್ದಾರೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಪಂತ್ ಅವರ ಪ್ರತಿಯೊಂದು ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ಟೀಕಕಾರರ ಬಾಯಿ ಮುಚ್ಚಿಸಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಟಿಂಗ್, ನಾವು ಟಿ 20 ನಾಯಕತ್ವವನ್ನು ಪಂತ್​ಗೆ ವಹಿಸಿದ್ದೇವೆ. ಹೀಗಾಗಿ ಪಂತ್ ಮೈದಾನದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ವಿಶೇಷವಾಗಿ ಯೋಚಿಸಲು ಸಾಕಷ್ಟು ಸಮಯ ಸಿಗುವುದಿಲ್ಲ ಎಂದು ನನಗೆ ತಿಳಿದಿದೆ. ಹೊರಗೆ ಕುಳಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭ, ಆದರೆ ಮೈದಾನದಲ್ಲಿದ್ದಾಗ ಅದು ಸುಲಭದ ಕೆಲಸವಲ್ಲ ​​ಎಂದರು.

ಡೆಲ್ಲಿ ಕೆಟ್ಟ ಆಟವಾಡಿತು, ಆದ್ದರಿಂದ ಸೋತರು- ಪಾಂಟಿಂಗ್ ಮುಂದುವರೆದು ಮಾತನಾಡಿದ ಪಾಂಟಿಂಗ್, ಒಬ್ಬ ನಾಯಕ ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಅದರಲ್ಲಿ ತಂಡದ ಗೆಲುವಿಗೆ ಬೇಕಾದ ಅಂಶಗಳೆ ಹೆಚ್ಚು ಸೇರಿರುತ್ತವೆ. ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬೌಂಡರಿ ಗೆರೆಯ ಅಂತರ ಮತ್ತು ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಂತಹ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ಚೆನ್ನೈ ವಿರುದ್ಧದ ಹೀನಾಯ ಸೋಲಿನಲ್ಲಿ ತಮ್ಮ ತಂಡವು ಆಟದ ಎಲ್ಲಾ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದು ಒಪ್ಪಿಕೊಂಡರು. ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ, ನಮ್ಮ ಬ್ಯಾಟಿಂಗ್ ಕೂಡ ತೀರಾ ಕಳಪೆಯಾಗಿತ್ತು. ಈ ಪಂದ್ಯದಲ್ಲಿ ನಮ್ಮ ಪಾಲಿಗೆ ಹೆಚ್ಚಿನ ಸಕಾರಾತ್ಮಕ ಅಂಶಗಳು ಕಂಡುಬಂದಿಲ್ಲ. ಖಲೀಲ್ ಅಹ್ಮದ್ ಅವರ ಪ್ರದರ್ಶನ ಮಾತ್ರ ಸಕಾರಾತ್ಮಕವಾಗಿತ್ತು. ಅವರು ಮತ್ತೊಮ್ಮೆ ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ
Image
CSK vs DC Highlights, IPL 2022: ಡೆಲ್ಲಿ ತಂಡದ ಪೆವಿಲಿಯನ್ ಪರೇಡ್; ಚೆನ್ನೈಗೆ 91 ರನ್ ಗೆಲುವು

ಫೈನಲ್ ತಲುಪುವುದು ಹೇಗೆ?- ಪಾಂಟಿಂಗ್ ನಾವು ಈ ಪಂದ್ಯವನ್ನು 91 ರನ್‌ಗಳಿಂದ ಸೋತಿದ್ದೇವೆ, ಇದು ನಮ್ಮ ನಿವ್ವಳ ರನ್ ರೇಟ್​ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಇದರರ್ಥ ಮುಂಬರುವ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆದರೆ, ಡೆಲ್ಲಿ ತಂಡ ಉಳಿದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಬಹುದು. ಆದರೆ ನಾವು ಉಳಿದಿರುವ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವನ್ನು ಸಾಧಿಸಬೇಕಾಗುತ್ತದೆ. ಇದರಿಂದ ನಮ್ಮ ನಿವ್ವಳ ರನ್ ರೇಟ್​ ಕೂಡ ಸುಧಾರಿಸುತ್ತದೆ ಎಂದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ