Dinesh Karthik: 8 ಬಾಲ್, 30 ರನ್ ಚಚ್ಚಿ ಕಾರ್ತಿಕ್ ಪೆವಿಲಿಯನ್​​ಗೆ ಬಂದಾಗ ಕೊಹ್ಲಿ ಮಾಡಿದ್ದೇನು ನೋಡಿ

Virat Kohli: ಐಪಿಎಲ್ 2022ರ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಫೋರ್, 4 ಅಮೋಘ ಸಿಕ್ಸರ್ ಸಿಡಿಸಿ ಅಜೇಯ 30 ರನ್ ಚಚ್ಚಿದರು. ಕಾರ್ತಿಕ್ ಅವರ ಈ ಸ್ಫೋಟಕ ಆಟ ಕಂಡು ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.

Dinesh Karthik: 8 ಬಾಲ್, 30 ರನ್ ಚಚ್ಚಿ ಕಾರ್ತಿಕ್ ಪೆವಿಲಿಯನ್​​ಗೆ ಬಂದಾಗ ಕೊಹ್ಲಿ ಮಾಡಿದ್ದೇನು ನೋಡಿ
Virat Kohli and Dinesh Karthik
Follow us
TV9 Web
| Updated By: Vinay Bhat

Updated on:May 09, 2022 | 12:36 PM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರ ಸ್ಫೋಟಕ ಬ್ಯಾಟಿಂಗ್ ಎಗ್ಗಿಲ್ಲದೆ ನಡಯುತ್ತಿದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡಕ್ಕೆ ಬಹುತೇಕ ಎಲ್ಲ ಪಂದ್ಯಗಳಲ್ಲಿ ಇವರ ಕೊಡುಗೆ ಇದ್ದೇ ಇದೆ. ಭಾನುವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಕಾರ್ತಿಕ್ ತಮ್ಮ ಬಿರುಸಿನ ಆಟ ಪ್ರದರ್ಶಿಸಿದರು. ಇದರಿಂದಲೇ ಆರ್​ಸಿಬಿ 20 ಓವರ್​​ಗೆ 192 ರನ್ ಸಿಡಿಸಲು ಕಾರಣವಾಯಿತು. ಇವರಿಂದ ದೊಡ್ಡ ಮೊತ್ತ ಕಲೆಹಾಕಿದ ಫಾಫ್ ಪಡೆ ಅದಾಗಲೆ 40% ಗೆಲುವು ತನ್ನದಾಗಿಸಿತ್ತು. ಅಂದುಕೊಂಡಂತೆ ಕಠಿಣ ಪಿಚ್​ನಲ್ಲಿ ಎಸ್​ಆರ್​ಹೆಚ್ (SRH) 125 ರನ್​​ಗೆ ಸರ್ವಪತನ ಕಂಡಿತು. ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಫೋರ್, 4 ಅಮೋಘ ಸಿಕ್ಸರ್ ಸಿಡಿಸಿ ಅಜೇಯ 30 ರನ್ ಚಚ್ಚಿದರು. ಅದರಲ್ಲೂ ಕೊನೆಯ ಓವರ್​ನಲ್ಲಿ ರನ್ ಮಳೆಯ ಸುರಿಸಿದರು. ಕಾರ್ತಿಕ್ ಅವರ ಈ ಸ್ಫೋಟಕ ಆಟ ಕಂಡು ವಿರಾಟ್ ಕೊಹ್ಲಿ ಏನು ಮಾಡಿದರು ನೋಡಿ.

18ನೇ ಓವರ್​ನ ಎರಡನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಔಟಾದ ಬಳಿಕ ದಿನೇಶ್ ಕಾರ್ತಿಕ್ ಕ್ರೀಸ್​ಗೆ ಬಂದರು. ಈ ಸಂದರ್ಭ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಬಾಕಿ ಉಳಿದಿದ್ದು ಕೇವಲ 10 ಬಾಲ್ ಅಷ್ಟೆ. ಅದರಲ್ಲಿ 8 ಬಾಲ್​ಗಳನ್ನು ಇವರೇ ಆಡಿ 30 ರನ್ ಚಚ್ಚಿದರು. ಪರಿಣಾಮ ಒಟ್ಟಾರೆಯಾಗಿ ಕೊನೆಯ 10 ಬಾಲ್​ಗಳಲ್ಲಿ 33 ಮೂಡಿಬಂದವು. ಈ ಸ್ಫೋಟಕ ಆಟವಾಡಿ ಡ್ರೆಸ್ಸಿಂಗ್ ರೂಮ್​ಗೆ ಬರುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಕಾರ್ತಿಕ್ ಎದುರು ನಿಂತು ತಲೆಯನ್ನು ಬಾಗಿಸಿ ನಮಸ್ಕರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
IPL 2022 Points Table: ಆರೆಂಜ್, ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಆರ್​ಸಿಬಿ ಪ್ಲೇಯರ್ಸ್: ಪಾಯಿಂಟ್ ಟೇಬಲ್ ಹೇಗಿದೆ?
Image
MS Dhoni: ಶಾಕಿಂಗ್: ಡೆಲ್ಲಿ ವಿರುದ್ಧ ಬ್ಯಾಟಿಂಗ್​ ಬರುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಯಾಕೆ ಗೊತ್ತೇ?
Image
MS Dhoni: ಪ್ಲೇ ಆಫ್ ಪ್ರವೇಶಿಸುತ್ತೀರಾ? ಪ್ರಶ್ನೆಗೆ ಎಂಎಸ್ ಧೋನಿ ಖಡಕ್ ಉತ್ತರ: ಏನು ಹೇಳಿದ್ರು ಕೇಳಿ
Image
Faf Duplessis: ಆತನಿಗೋಸ್ಕರ ನಾನು ಔಟಾಗಲು ರೆಡಿಯಿದ್ದೆ: ಪಂದ್ಯದ ಬಳಿಕ ಡುಪ್ಲೆಸಿಸ್ ಅಚ್ಚರಿ ಹೇಳಿಕೆ

ಇನ್ನು ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಕಾರ್ತಿಕ್ ಬಗ್ಗೆ ಹಾಡಿಹೊಗಳಿದ್ದಾರೆ. ದಿನೇಶ್ ಕಾರ್ತಿಕ್ ಆರೀತಿಯಾಗಿ ಸಿಕ್ಸ್ ಸಿಡಿಸುವಾಗ ಅವರನ್ನು ಇನ್ನೂ ಬೇಗ ಕಳುಹಿಸಿ ಇನ್ನಷ್ಟು ಸಮಯ ಬ್ಯಾಟಿಂಗ್​ ಮಾಡಬೇಕಿತ್ತು ಅನಿಸುತ್ತಿತ್ತು. ಅವರ ಹೊಡೆತದಲ್ಲಿ ಕ್ಲೀಯರ್ ಇದೆ. ನಿಜ ಹೇಳಬೇಕೆಂದರೆ ನಾನು ದಣಿದಿದ್ದುದರಿಂದ ಔಟಾಗಲು ಪ್ರಯತ್ನಿಸುತ್ತಿದ್ದೆ, ಆಗ ಕಾರ್ತಿಕ್ ಕ್ರೀಸ್​ಗೆ ಬರುತ್ತಾರೆ. ಅಥವಾ ನಾನೇ ನಿವೃತ್ತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ದಿಢೀರ್ ಆಗಿ ವಿಕೆಟ್ ಕಳೆದುಕೊಂಡೆವು. ಕಾರ್ತಿಕ್ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಹೆಚ್ಚು ಬ್ಯಾಟರ್​ಗಳು ರನ್ ಗಳಿಸಲು ಕಷ್ಟ ಪಟ್ಟರು. ಕಾರ್ತಿಕ್ ಕ್ಯಾಚ್ ಬಿಟ್ಟಿದ್ದು ನಮಗೆ ವರವಾಯಿತು ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿಗೆ ಉತ್ತಮ ಆರಂಭ ಸಿಕ್ಕಿಲ್ಲವಾದರೂ ಎರಡನೇ ವಿಕೆಟ್​ಗೆ ಫಾಫ್ ಡುಪ್ಲೆಸಿಸ್ ಹಾಗೂ ರಜತ್ ಪಟಿದಾರ್ ಅತ್ಯುತ್ತಮ ಜೊತೆಯಾಟ ಆಡಿದರು. ಇಬ್ಬರೂ 105 ರನ್‌ಗಳನ್ನು ಸೇರಿಸಿದರು. ಮೋಹಕ ಅರ್ಧಶತಕ ಸಿಡಿಸಿದ ಡುಪ್ಲೆಸಿಸ್ ಔಟಾಗದೇ ಉಳಿದರು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ರಜತ್ 38 ಎಸೆತಗಳಲ್ಲಿ 48 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಿಡಿಸಿದರು. ಅಂತಿಮ ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆರ್​ಸಿಬಿ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಸನ್‌ರೈಸರ್ಸ್‌ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:35 pm, Mon, 9 May 22

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ