IPL 2022: ಗೆದ್ದ RCB, ಪ್ಲೇಆಫ್ ರೇಸ್ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್
IPL 2022 Playoffs: ಡೆಲ್ಲಿ ಕ್ಯಾಪಿಟಲ್ಸ್ 10 ಮ್ಯಾಚ್ ಆಡಿ 10 ಪಾಯಿಂಟ್ಸ್ ಪಡೆದುಕೊಂಡಿದೆ. ಅಂದರೆ ನಾಲ್ಕು ಮ್ಯಾಚ್ನಲ್ಲಿ ಮೂರು ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಹಾಗೆಯೇ ಎಸ್ಆರ್ಹೆಚ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 3 ಮ್ಯಾಚ್ಗಳು ಉಳಿದಿದ್ದು, ಈ ಪಂದ್ಯಗಳಲ್ಲಿ ಈ ಎರಡು ತಂಡಗಳು ಗೆದ್ದರೆ ಆ ತಂಡಗಳ ಪಾಯಿಂಟ್ಸ್ ಕೂಡ 16 ಆಗಲಿದೆ.
IPL 2022: ಐಪಿಎಲ್ ಸೀಸನ್ 15 ಪ್ಲೇಆಫ್ ರೇಸ್ನಿಂದ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಹೊರಬಿದ್ದಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 2 ಜಯ ಸಾಧಿಸಿ 4 ಪಾಯಿಂಟ್ಸ್ ಪಡೆದಿದ್ದ ಮುಂಬೈಗೆ ಇನ್ನು 4 ಪಂದ್ಯಗಳು ಬಾಕಿಯಿವೆ. ಆದರೆ ಈ ನಾಲ್ಕು ಮ್ಯಾಚ್ನಲ್ಲೂ ಗೆದ್ದರೂ ಸಹ ಇನ್ನು ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈಗಾಗಲೇ ಪಾಯಿಂಟ್ಸ್ ಟೇಬಲ್ನಲ್ಲಿ ಎರಡು ತಂಡಗಳು 16 ಪಾಯಿಂಟ್ಸ್ ಪಡೆದಿದ್ದು, ಮತ್ತೆರಡು ತಂಡಗಳು 14 ಪಾಯಿಂಟ್ಸ್ ಪಡೆದಿವೆ. ಆರ್ಸಿಬಿ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಗೆಲ್ಲುವ ಮೂಲಕ ಒಟ್ಟು 14 ಪಾಯಿಂಟ್ಸ್ಗಳಿಸಿ ಅಗ್ರ ನಾಲ್ಕರಲ್ಲಿ 4ನೇ ಸ್ಥಾನ ಪಡೆದಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಕನಸು ಕೂಡ ಕಮರಿದೆ.
ಏಕೆಂದರೆ ಮುಂಬೈ ಇಂಡಿಯನ್ಸ್ ಇನ್ನುಳಿದ ನಾಲ್ಕು ಮ್ಯಾಚ್ಗಳನ್ನು ಗೆದ್ದರೂ ಒಟ್ಟು ಪಾಯಿಂಟ್ಸ್ ಕೇವಲ 12 ಮಾತ್ರ ಆಗಲಿದೆ. ಆದರೆ ಈಗಾಗಲೇ ಅಗ್ರ ನಾಲ್ಕು ತಂಡಗಳು 14 ಮತ್ತು ಅದಕ್ಕಿಂತ ಹೆಚ್ಚಿನ ಪಾಯಿಂಟ್ಸ್ ಪಡೆದಿರುವ ಕಾರಣ ಮುಂಬೈಗೆ ಪ್ಲೇಆಫ್ ಗೇರುವ ಚಾನ್ಸ್ ಇಲ್ಲ. ಪಾಯಿಂಟ್ಸ್ ಟೇಬಲ್ನ ಟಾಪ್ 4 ತಂಡಗಳಲ್ಲಿ ಒಂದು ತಂಡವು 12 ಪಾಯಿಂಟ್ಸ್ ಪಡೆದಿದ್ದರೆ ಮಾತ್ರ ಮುಂಬೈಗೆ ಅವಕಾಶವಿತ್ತು. ಇದೀಗ ಆರ್ಸಿಬಿ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿರುವ ಅಗ್ರ ನಾಲ್ಕು ತಂಡಗಳ ಪಾಯಿಂಟ್ಸ್ 16 ಮತ್ತು 14 ಆಗಿವೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.
ಇದಾಗ್ಯೂ ಯಾವುದೇ ತಂಡ ಇನ್ನೂ ಕೂಡ ಪ್ಲೇಆಫ್ ಅನ್ನು ಖಚಿತಪಡಿಸಿಕೊಂಡಿಲ್ಲ. ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದರೆ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಇನ್ನು ಆರ್ಸಿಬಿ ಪ್ಲೇಆಫ್ ಖಚಿತಪಡಿಸಿಕೊಳ್ಳಬೇಕಿದ್ರೆ ಮತ್ತೆರಡು ಪಂದ್ಯಗಳನ್ನು ಗೆಲ್ಲಬೇಕು.
ಏಕೆಂದರೆ ಆರ್ಸಿಬಿ ತಂಡವು ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಕನ್ಫರ್ಮ್ ಮಾಡಿಕೊಳ್ಳಬಹುದು. ಅಂದರೆ ಒಟ್ಟು 18 ಪಾಯಿಂಟ್ಗಳಿಸಿ ಪ್ಲೇಆಫ್ ಪ್ರವೇಶಿಸಬಹುದು. ಇನ್ನು ಒಂದರಲ್ಲಿ ಮಾತ್ರ ಗೆದ್ದರೆ ಒಟ್ಟು 16 ಪಾಯಿಂಟ್ ಆಗಲಿದೆ. ಆದರೆ ಈಗಾಗಲೇ ಗುಜರಾತ್ ಟೈಟನ್ಸ್ 16 ಪಾಯಿಂಟ್ಸ್ ಪಡೆದಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ 16 ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ 14 ಪಾಯಿಂಟ್ಸ್ ಹೊಂದಿದೆ. ಆದರೆ ರಾಜಸ್ಥಾನ್ ರಾಯಲ್ಸ್ ಇನ್ನೂ 3 ಮ್ಯಾಚ್ ಉಳಿದಿದೆ. ಹೀಗಾಗಿ ಆರ್ಆರ್ ಕೂಡ 16 ಪಾಯಿಂಟ್ಸ್ ಗಳಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ 10 ಮ್ಯಾಚ್ ಆಡಿ 10 ಪಾಯಿಂಟ್ಸ್ ಪಡೆದುಕೊಂಡಿದೆ. ಅಂದರೆ ನಾಲ್ಕು ಮ್ಯಾಚ್ನಲ್ಲಿ ಮೂರು ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಹಾಗೆಯೇ ಎಸ್ಆರ್ಹೆಚ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 3 ಮ್ಯಾಚ್ಗಳು ಉಳಿದಿದ್ದು, ಈ ಪಂದ್ಯಗಳಲ್ಲಿ ಈ ಎರಡು ತಂಡಗಳು ಗೆದ್ದರೆ ಆ ತಂಡಗಳ ಪಾಯಿಂಟ್ಸ್ ಕೂಡ 16 ಆಗಲಿದೆ. ಒಂದು ವೇಳೆ 3ನೇ ಮತ್ತು 4ನೇ ಸ್ಥಾನ ಪಡೆಯುವ ತಂಡಗಳ ಪಾಯಿಂಟ್ಸ್ 16 ಆದರೆ ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಮುಂದಿನ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.