IPL 2022: ಈ ಸಲ RCB ಫೈನಲ್ ಆಡಲಿದೆ: ಹೀಗೊಂದು ಲೆಕ್ಕಚಾರ ಶುರು..!

IPL 2022: ಆರ್​ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್.

IPL 2022: ಈ ಸಲ RCB ಫೈನಲ್ ಆಡಲಿದೆ: ಹೀಗೊಂದು ಲೆಕ್ಕಚಾರ ಶುರು..!
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 11, 2022 | 9:31 PM

IPL 2022: ಐಪಿಎಲ್ 54ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಎಸ್​​ಆರ್​​ಹೆಚ್ (RCB vs SRH)​ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದ RCB ಮೊದಲು ಬ್ಯಾಟ್ ಮಾಡಿ  3 ವಿಕೆಟ್ ನಷ್ಟಕ್ಕೆ 192 ರನ್​ ಕಲೆಹಾಕುವ ಮೂಲಕ ಸನ್​ರೈಸರ್ಸ್​ಗೆ ಬೃಹತ್ ಟಾರ್ಗೆಟ್ ನೀಡಿತು. 193 ರನ್​ಗಳ ಬೃಹತ್ ಗುರಿ ಪಡೆದ ಸನ್​ರೈಸರ್ಸ್​ ಹೈದರಾಬಾದ್ ತಂಡವು 125 ರನ್​ಗೆ ಆಲೌಟ್ ಆಗುವ ಮೂಲಕ 67 ರನ್​ಗಳ ಅಂತರದಿಂದ ಹೀನಾಯ ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಮೂರನೇ ಬಾರಿ ಗೆದ್ದಂತಾಗಿದೆ.

ಏಕೆಂದರೆ 2011 ರಿಂದ ಆರ್​ಸಿಬಿ ಇದುವರೆಗೆ 11 ಪಂದ್ಯಗಳನ್ನು ಗ್ರೀನ್ ಜೆರ್ಸಿಯಲ್ಲಿ ಆಡಿದೆ. ಆದರೆ ಈ ವೇಳೆ ಆರ್​ಸಿಬಿ ತಂಡವು ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅಂದರೆ 2011 ರಲ್ಲಿ ಮತ್ತು 2016 ರಲ್ಲಿ ಮಾತ್ರ ಗೆದ್ದಿತ್ತು. ಇದೀಗ ಎಸ್​ಆರ್​ಹೆಚ್​ ವಿರುದ್ದ ಗೆಲ್ಲುವ ಮೂಲಕ ಮೂರನೇ ಬಾರಿ ಗ್ರೀನ್ ಜೆರ್ಸಿಯಲ್ಲಿ ಜಯ ಸಾಧಿಸಿದೆ.

ವಿಶೇಷ ಎಂದರೆ ಆರ್​ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಗೆದ್ದ ಸೀಸನ್​ನಲ್ಲಿ ಐಪಿಎಲ್ ಫೈನಲ್ ಆಡಿದೆ. ಅಂದರೆ 2011 ರಲ್ಲಿ ಆರ್​ಸಿಬಿ ತಂಡವು ಸಿಎಸ್​ಕೆ ವಿರುದ್ದ ಫೈನಲ್ ಪಂದ್ಯವನ್ನಾಡಿತ್ತು. ಹಾಗೆಯೇ 2016 ರಲ್ಲಿ ಎಸ್​ಆರ್​ಹೆಚ್​ ವಿರುದ್ದ ಫೈನಲ್​ ಆಡಿತ್ತು. ಈ ಎರಡೂ ಸೀಸನ್​ನಲ್ಲೂ ಆರ್​ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಆಡಿದ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು ಎಂಬುದು ವಿಶೇಷ.

ಇದೀಗ ಎಸ್​ಆರ್​ಹೆಚ್​ ವಿರುದ್ದ ಗ್ರೀನ್ ಜೆರ್ಸಿಯಲ್ಲಿ ಆಡಿದ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲುತ್ತಿದ್ದಂತೆ ಹೊಸ ಲೆಕ್ಕಾಚಾರಗಳು ಶುರುವಾಗಿದೆ. ಏಕೆಂದರೆ ಗ್ರೀನ್ ಜೆರ್ಸಿಯಲ್ಲಿ ಆಡಿದಾಗ ಆರ್​ಸಿಬಿ ತಂಡದ ಅದೃಷ್ಟ ಖುಲಾಯಿಸಿದೆ. ಹೀಗಾಗಿ ಈ ಬಾರಿ ಕೂಡ ಆರ್​ಸಿಬಿ ತಂಡವು ಫೈನಲ್ ಪಂದ್ಯವಾಡಲಿದೆ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಅಭಿಮಾನಿಗಳು.

ಸದ್ಯ 14 ಅಂಕ​ಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಆರ್​ಸಿಬಿ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಆರ್​ಸಿಬಿಗೆ ಇನ್ನೆರಡು ಪಂದ್ಯಗಳು ಉಳಿದಿದ್ದು, ಈ ಎರಡು ಮ್ಯಾಚ್​ನಲ್ಲಿ ಗೆದ್ದರೆ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಈ ಮೂಲಕ ಆರ್​ಸಿಬಿ ಈ ಬಾರಿ ಸಹ ಫೈನಲ್ ಆಡಲಿದೆಯಾ ಕಾದು ನೋಡಬೇಕಿದೆ.

ಆರ್​ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:27 pm, Mon, 9 May 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್