MS Dhoni: ಶಾಕಿಂಗ್: ಡೆಲ್ಲಿ ವಿರುದ್ಧ ಬ್ಯಾಟಿಂಗ್ ಬರುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಯಾಕೆ ಗೊತ್ತೇ?
Dhoni eating his bat: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬರುವ ಮುನ್ನ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತುಕೊಂಡು ಬ್ಯಾಟ್ ತಿನ್ನುತ್ತಿರುವುದನ್ನು ಕ್ಯಾಮೆರಾ ಮ್ಯಾನ್ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಭಾನುವಾರ ನಡೆದ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs DC) ತಂಡ 91 ರನ್‌ಗಳ ದೊಡ್ಡ ಅಂತರದ ಗೆಲುವು ಸಾಧಿಸಿತು. ಭರ್ಜರಿ ಫಾರ್ಮ್ನಲ್ಲಿರುವ ಸಿಎಸ್‌ಕೆ ಓಪನರ್ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಡ್ವೇನ್ ಕಾನ್ವೇ ಈ ಪಂದ್ಯದಲ್ಲೂ ಅಬ್ಬರಿಸಿ ಶತಕದ ಜೊತೆಯಾಟ ಆಡಿದರು. ಕೊನೆಯಲ್ಲಿ ನಾಯಕ ಎಂಎಸ್ ಧೋನಿ (MS Dhoni) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರಿಷಭ್ ಪಂತ್ (Rishabh Pant) ಪಡೆ ಈ ಸ್ಕೋರ್ ಹತ್ತಿರ ಕೂಡ ತಲುಪಲಿಲ್ಲ. ಸಿಎಸ್‌ಕೆ ಬೌಲರ್ಗಳ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಡೆಲ್ಲಿ ಬ್ಯಾಟರ್ಗಳು ಕೇವಲ 117 ರನ್ಗೆ ಆಲೌಟ್ ಆಯಿತು. ಈ ಮೂಲಕ ಡಿಸಿಯ ಪ್ಲೇ ಆಫ್ ಹಾದಿ ಕಠಿಣವಾದರೆ, ಚೆನ್ನೈ ಇನ್ನೂ ಟೂರ್ನಿಯಿಂದ ಹೊರಬಿಂದಿಲ್ಲ ಎಂಬುದನ್ನು ತೋರಿಸಿದೆ.
ಸಿಎಸ್‌ಕೆ 208 ರನ್ ಗಳಿಸಲು ಎಂಎಸ್ ಧೋನಿ ಆಟ ಮುಖ್ಯವಾಯಿತು. ಕೇವಲ 8 ಎಸೆಗಳಲ್ಲಿ 1 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 21 ರನ್ ಚಚ್ಚಿದರು. ಆದರೆ, ಧೋನಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬರುವ ಮುನ್ನ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತುಕೊಂಡು ಬ್ಯಾಟ್ ತಿನ್ನುತ್ತಿರುವುದನ್ನು ಕ್ಯಾಮೆರಾ ಮ್ಯಾನ್ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಎಂಎಸ್ಡಿ ಏತಕ್ಕಾಗಿ ಬ್ಯಾಟ್ ತಿನ್ನುತ್ತಿದ್ದಾರೆ ಎಂದು ಅನೇಕರು ತಲೆ ಕೆಡೆಸಿಕೊಂಡಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ. ಅವರು ಏನು ಹೇಳಿದರು ಕೇಳಿ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಮಿಶ್ರಾ, “ಎಂಎಸ್ ಧೋನಿ ಆಗಾಗ್ಗೆ ಅವರ ಬ್ಯಾಟ್ ಅನ್ನು ಏಕೆ ಕಚ್ಚುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಧೋನಿ ತನ್ನ ಬ್ಯಾಟ್ ಸ್ವಚ್ಛವಾಗಿರಲು ಇಷ್ಟಪಡುವ ಕಾರಣ ಬ್ಯಾಟ್ನ ಟೇಪ್ ಅನ್ನು ತೆಗೆದುಹಾಕಲು ಈರೀತಿ ಮಾಡುತ್ತಾರೆ. ಹೀಗಾಗಿ ಧೋನಿ ಬ್ಯಾಟ್‌ನಿಂದ ಒಂದೇ ಒಂದು ತುಂಡು ಟೇಪ್ ಅಥವಾ ನೂಲಾಗಲಿ ಹೊರಬರುವುದನ್ನು ನೀವು ನೋಡಿರಲು ಸಾಧ್ಯವಿಲ್ಲ,” ಎಂದು ಬರೆದುಕೊಂಡಿದ್ದಾರೆ.
In case you’re wondering why Dhoni often ‘eats’ his bat. He does that to remove tape of the bat as he likes his bat to be clean. You won’t see a single piece of tape or thread coming out of MS’s bat. #CSKvDC #TATAIPL2022
— Amit Mishra (@MishiAmit) May 8, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಚೆನ್ನೈಗೆ ಡ್ವೇನ್ ಕಾನ್ವೇ ಹಾಗೂ ರುತುರಾಜ್ ಗಾಯಕ್ವಾಡ್ ಮಗದೊಮ್ಮೆ ಅತ್ಯುತ್ತಮ ಆರಂಭವೊದಗಿಸಿದರು. ಡೆಲ್ಲಿ ಬೌಲರ್‌ಗಳನ್ನು ನಿರಂತಕವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು.ಕಾನ್ವೇ ಕೇವಲ 27 ಎಸೆತಗಳಲ್ಲಿ ಫಿಫ್ಟಿ ಬಾರಿಸಿ 49 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಗಾಯಕ್ವಾಡ್ 33 ಎಸೆಗಳಲ್ಲಿ 4 ಬೌಂಡರಿ, 1 ಸಿಕ್ಸರ್ನೊಂದಿಗೆ 41 ರನ್ ಗಳಿಸಿ ಔಟ್ ಆದರು.
ಶಿವಂ ದುಬೆ 19 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ನೊಂದಿಗೆ 32 ರನ್ ಸಿಡಿಸಿದರು. ಕೊನೆಯ ಹಂತದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ 8 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿ ಗಮನ ಸೆಳೆದರು. ಈ ಮೂಲಕ ಸಿಎಸ್‌ಕೆ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಡೆಲ್ಲಿ ಪರ ಎನ್ರಿಚ್ ನಾಕಿಯಾ ಮೂರು ಹಾಗೂ ಖಲೀಲ್ ಅಹ್ಮದ್ ಎರಡು ವಿಕೆಟ್ ಗಳಿಸಿದರು. ಬಳಿಕ ಬ್ಯಾಟಿಂಗ್ ಮಾಡಿದ ಡೆಲ್ಲಿ 117 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಆಲೌಟ್ ಆಯಿತು. ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ 25, ಶಾರ್ದೂಲ್ ಠಾಕೂರ್ 24 ಹಾಗೂ ರಿಷಭ್ ಪಂತ್ 21 ರನ್ ಗಳಿಸಿದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:50 am, Mon, 9 May 22