ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಟಿ 20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ, ಐಸಿಸಿ ಕೂಡ ಎಲ್ಲಾ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಿ ಎಲ್ಲರ ಕುತೂಹಲ ಹೆಚ್ಚಿಸಿದೆ. ಇಡೀ ಕ್ರಿಕೆಟ್ ಜಗತ್ತು ಈಗ 2ನೇ ಗುಂಪಿನಲ್ಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕಾಯುತ್ತಿದೆ. ಉಭಯ ತಂಡಗಳ ಮೊದಲ ಪಂದ್ಯವು ಅಕ್ಟೋಬರ್ 24, 2021 ರಂದು ದುಬೈನಲ್ಲಿ ನಡೆಯಲಿದೆ. ಹೀಗಾಗಿ ಪಂದ್ಯಕ್ಕೂ ಮುಂಚೆ, ಪಾಕಿಸ್ತಾನ ತಂಡದ ನಾಯಕ ನಮ್ಮ ತಂಡವು ಪಂದ್ಯಾವಳಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆ ನನಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಸಂದರ್ಶನವೊಂದರಲ್ಲಿ, “ನನ್ನ ತಂಡ ಮತ್ತು ನಾನು ಮುಂಬರುವ ಟಿ 20 ವಿಶ್ವಕಪ್‌ಗಾಗಿ ಎದುರು ನೋಡುತ್ತಿದ್ದೇವೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅವಕಾಶ ನನಗೆ ದೊರೆತಿರುವುದು ದೊಡ್ಡ ವಿಷಯ. ಇದು ದೊಡ್ಡ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಯುಎಇಯಲ್ಲಿ ಆಡುವುದು ಮನೆಯಲ್ಲಿ ಆಡಿದಂತೆ
2009 ರಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಯುಎಇಯಲ್ಲಿ ತಮ್ಮ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಯಿತು. ಆದ್ದರಿಂದ, ಪಾಕಿಸ್ತಾನ ಅಲ್ಲಿನ ಮೈದಾನದಲ್ಲಿ ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಾಬರ್, ನಾವು ಯುಎಇಯಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಇಲ್ಲಿ ವಿಶ್ವಕಪ್ ಆಡುವುದು ಮನೆಯಲ್ಲಿ ಆಡಿದಂತೆ ಎಂದು ಹೇಳಿದರು.
ಟಿ 20 ವಿಶ್ವಕಪ್‌ನಲ್ಲಿ ಪಾಕ್ ಎದುರು ಭಾರತ
ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5-0 ಅಂತರದ ಗೆಲುವು ಸಾಧಿಸಿದೆ. ಭಾರತ ಪಾಕಿಸ್ತಾನವನ್ನು 5 ಬಾರಿ ಸೋಲಿಸಿದೆ. ಇತ್ತೀಚೆಗಷ್ಟೇ, 2016 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು 6 ವಿಕೆಟ್ಗಳಿಂದ ಸೋಲಿಸಿತ್ತು. ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು, ಭಾರತ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು.
ಭಾರತ ಮತ್ತು ಪಾಕಿಸ್ತಾನ 2 ವರ್ಷಗಳ ನಂತರ ಮುಖಾಮುಖಿಯಾಗುತ್ತವೆ
2 ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಮೊದಲು ಭಾರತ ಮತ್ತು ಪಾಕಿಸ್ತಾನ 2019 ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಅಲ್ಲಿ ಭಾರತ ಪಾಕಿಸ್ತಾನವನ್ನು 89 ರನ್ ಗಳಿಂದ ಸೋಲಿಸಿತ್ತು.
ಇದನ್ನೂ ಓದಿ:ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ