IND vs ENG: ಕೊಹ್ಲಿ ಹುಡುಗರ ಮೇಲೆ ಇಂಗ್ಲೆಂಡ್ ವೇಗಿ ಪದೇಪದೇ ಜಗಳಕ್ಕಿಳಿಯುವುದೇಕೆ? ಅಂಡರ್ಸನ್ ಅವಾಂತರ ಇದೇ ಮೊದಲೇನಲ್ಲ
IND vs ENG: ಜಸ್‌ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ ಆಂಡರ್ಸನ್ ದೇಹದ ಮೇಲೆ ಹಲವಾರು ಬೌನ್ಸರ್‌ಗಳ ದಾಳಿಯನ್ನು ಮಾಡಿದರು. ಇದು ಆಂಡರ್‌ಸನ್‌ನನ್ನು ಅಸಮಾಧಾನಗೊಳಿಸುವುದಲ್ಲದೆ, ಅವರನ್ನು ಕೋಪಕ್ಕೆ ತಳ್ಳಿತು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಮಾತ್ರ ನಡೆದಿವೆ, ಆದರೆ ರೋಚಕತೆ ಉತ್ತುಂಗದಲ್ಲಿದೆ. ಉಭಯ ತಂಡಗಳ ನಡುವಿನ ಕಠಿಣ ಸ್ಪರ್ಧೆ ಮತ್ತು ನಂತರ ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನವನ್ನು ಟೀಮ್ ಇಂಡಿಯಾ ಗೆದ್ದ ರೀತಿ, ಸರಣಿಯ ಮುಂಬರುವ ಪಂದ್ಯಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಆದಾಗ್ಯೂ, ಎರಡು ತಂಡಗಳ ನಡುವೆ ಕೇವಲ ಬಾಲ್ ಮತ್ತು ಬ್ಯಾಟ್ ಘರ್ಷಣೆ ಮಾತ್ರವಲ್ಲ, ಮೌಖಿಕ ಯುದ್ಧವೂ ನಡೆಯುತ್ತಿದೆ. ಇದು ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ಮತ್ತು ಐದನೇ ದಿನದಂದು ಜಗಜಾಹೀರಾಯಿತು. ಇದು ಇಡೀ ಸರಣಿಯ ವಾತಾವರಣವನ್ನು ಬಿಸಿ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಇಂಗ್ಲೆಂಡ್ ಆಟಗಾರರ ವಿರುದ್ಧ ತಿರುಗಿಬಿದ್ದಿದ್ದರೆ, ಇಂಗ್ಲೆಂಡ್‌ಲ್ಲಿ ಮಾತ್ರ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಮಾತ್ರ ಎಲ್ಲರ ಕಣ್ಣಿಗೆ ಕೇಂದ್ರಬಿಂದುವಾಗಿದ್ದಾರೆ. ಆದರೆ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಆಂಡರ್ಸನ್ ಜಗಳ ಮಾಡಿಕೊಂಡಿರುವುದು ಇದೇ ಮೊದಲ ಸಲವಲ್ಲ.
ಜೇಮ್ಸ್ ಆಂಡರ್ಸನ್ ಲಾರ್ಡ್ಸ್ ಟೆಸ್ಟ್‌ನ ಮೂರನೇ ದಿನದ ಅಂತ್ಯದಲ್ಲಿ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ಜೋ ರೂಟ್ ಜೊತೆ ಕ್ರೀಸ್ ಗೆ ಬಂದಾಗ, ಭಾರತ ತಂಡವು ಬೌನ್ಸರ್‌ಗಳ ಮಳೆಯಿಂದ ಅವರನ್ನು ಸ್ವಾಗತಿಸಿತು. ಜಸ್‌ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ ಆಂಡರ್ಸನ್ ದೇಹದ ಮೇಲೆ ಹಲವಾರು ಬೌನ್ಸರ್‌ಗಳ ದಾಳಿಯನ್ನು ಮಾಡಿದರು. ಇದು ಆಂಡರ್‌ಸನ್‌ನನ್ನು ಅಸಮಾಧಾನಗೊಳಿಸುವುದಲ್ಲದೆ, ಅವರನ್ನು ಕೋಪಕ್ಕೆ ತಳ್ಳಿತು. ಔಟಾದ ನಂತರ ವಾಪಸ್ ಹೋಗುವಾಗ ಅವರು ಬುಮ್ರಾಗೆ ಏನೋ ಹೇಳಿದರು. ಇದರ ನಂತರ, ಮುಂದಿನ ಎರಡು ದಿನಗಳಲ್ಲಿ ಆಂಡರ್ಸನ್-ಕೊಹ್ಲಿ ಕಾದಾಡಿದರು, ನಂತರ ಬುಮ್ರಾ-ಬಟ್ಲರ್ ಮತ್ತು ಆಂಡರ್ಸನ್ ಕೂಡ ಕೊನೆಯ ದಿನ ಕಾದಾಡಿದರು. ಇದು ಇಡೀ ವಾತಾವರಣವನ್ನು ಬಿಸಿ ಮಾಡಿತು. ಹಾಗಂತ ಆಂಡರ್ಸನ್ ಜಗಳವಾಡಿಕೊಂಡಿರುವುದು ಇದೇ ಮೊದಲಲ್ಲ.
ನಾಟಿಂಗ್ಹ್ಯಾಮ್ ಟೆಸ್ಟ್ 2014: ಜಡೇಜಾ-ಆಂಡರ್ಸನ್ ಮಾತಿನ ಯುದ್ಧ ಇದು 2014 ಸರಣಿಯಲ್ಲಿ ನಡೆದ ಘಟನೆ. ಅಂದು ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿತ್ತು. ಸರಣಿಯ ಮೊದಲ ಟೆಸ್ಟ್ ನಾಟಿಂಗ್ಹ್ಯಾಮ್ ನಲ್ಲಿ ನಡೆಯಿತು. ಪಂದ್ಯದ ಎರಡನೇ ದಿನದ ಮೊದಲ ಸೆಷನ್ನಲ್ಲಿ ಭಾರತದ ಬ್ಯಾಟಿಂಗ್ ಸಮಯದಲ್ಲಿ ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದರು. ಈ ವೇಳೆ ಜೇಮ್ಸ್ ಆಂಡರ್ಸನ್ ಮತ್ತು ಜಡೇಜಾ ನಡುವೆ ವಾಗ್ವಾದ ನಡೆದಿತ್ತು. ಇದಾದ ನಂತರ, ಊಟದ ಸಮಯದಲ್ಲಿ ಡ್ರೆಸ್ಸಿಂಗ್ ರೂಮಿಗೆ ಹಿಂತಿರುಗುತ್ತಿದ್ದಾಗ, ಇಬ್ಬರು ಆಟಗಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಇದರ ನಂತರ, ಆಂಡರ್ಸನ್, ಜಡೇಜಾ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಲ್ಲದೆ ಜಡೇಜಾ ಅವರನ್ನು ತಳ್ಳಿದ್ದಾರೆ ಎಂದು ಭಾರತ ತಂಡ ಆರೋಪಿಸಿತ್ತು ಮತ್ತು ಮ್ಯಾಚ್ ರೆಫರಿಗೆ ದೂರು ನೀಡಿತು. ಆದರೆ ಇಂಗ್ಲೆಂಡ್ ತಂಡ, ಆಂಡರ್ಸನ್ ವಿರುದ್ಧ ಜಡೇಜಾ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡರು ಎಂದು ದೂರು ದಾಖಲಿಸಿತು.
ಆದಾಗ್ಯೂ, ಘಟನೆಯ ಯಾವುದೇ ವಿಡಿಯೋ ಸಾಕ್ಷ್ಯಗಳಿಲ್ಲದ ಕಾರಣ, ಪಂದ್ಯದ ರೆಫರಿಗಳು ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಐಸಿಸಿ ನೀತಿ ಸಂಹಿತೆಯ 1 ನೇ ಹಂತದ ಪ್ರಕಾರ ಜಡೇಜಾ ತಪ್ಪಿತಸ್ಥರೆಂದು ಪರಿಗಣಿಸಿ ಜಡೇಜಾಗೆ ಪಂದ್ಯದ ಶುಲ್ಕದ ಶೇ .50 ರಷ್ಟು ದಂಡ ವಿಧಿಸಿದರು. ಇದರಿಂದ ಭಾರತ ತಂಡ ತುಂಬಾ ಅಸಮಾಧಾನಗೊಂಡಿತು. ನಾಯಕ ಎಂಎಸ್ ಧೋನಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ನಿರ್ಧಾರದ ವಿರುದ್ಧ ತಂಡದ ಆಡಳಿತ ಮೇಲ್ಮನವಿ ಸಲ್ಲಿಸಿತು. ನಂತರ ಜಡೇಜಾ ಅವರನ್ನು ಖುಲಾಸೆಗೊಳಿಸಲಾಯಿತು.
ಮುಂಬೈ ಟೆಸ್ಟ್ 2016: ಆಂಡರ್ಸನ್ಗೆ ಉತ್ತರಿಸಿದ್ದ ಅಶ್ವಿನ್ 2016 ರಲ್ಲಿ, ಇಂಗ್ಲೆಂಡ್ ತಂಡವು ಭಾರತದ ಪ್ರವಾಸಕ್ಕೆ ಬಂದಿತು ಮತ್ತು ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಆಂಡರ್ಸನ್ ವಿರುದ್ಧ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದ ನಂತರ, ಕೊಹ್ಲಿ ಭಾರತದಲ್ಲಿ ಸರಣಿಯಲ್ಲಿ ಸಾಕಷ್ಟು ಸ್ಕೋರ್ ಮಾಡಿದ್ದರು ಮತ್ತು ಆಂಡರ್ಸನ್ ಗೆ ಒಮ್ಮೆ ಕೂಡ ವಿಕೆಟ್ ನೀಡಲಿಲ್ಲ. ಮುಂಬೈ ಟೆಸ್ಟ್‌ನಲ್ಲಿ ಕೊಹ್ಲಿ ದ್ವಿಶತಕ ಗಳಿಸಿದರು. ನಾಲ್ಕನೇ ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಆಂಡರ್ಸನ್ ಅವರನ್ನು 2014 ಕ್ಕೆ ಹೋಲಿಸಿದರೆ ಕೊಹ್ಲಿ ಸುಧಾರಿಸಿದ್ದಾರೆ ಎಂದು ನಂಬಿದ್ದೀರಾ ಎಂದು ಕೇಳಿದಾಗ, ಆಂಡರ್ಸನ್ ಅದನ್ನು ನಿರಾಕರಿಸಿದರು. ಜೊತೆಗೆ ಕೊಹ್ಲಿಯಲ್ಲಿ ಯಾವುದೇ ಸುಧಾರಣೆ ಇದೆ ಎಂದು ಭಾವಿಸುವುದಿಲ್ಲ ಮತ್ತು 2014 ರಲ್ಲಿ ಇಂಗ್ಲೆಂಡಿನಲ್ಲಿ ಕಂಡುಬಂದ ಕೊಹ್ಲಿಯ ತಾಂತ್ರಿಕ ನ್ಯೂನತೆಗಳು ಭಾರತದ ಬೌಲರ್‌ಗಳಿಗೆ ಯಾವುದೇ ಸಹಾಯವಿಲ್ಲದ ಕಾರಣ ಭಾರತದ ತವರಿನಲ್ಲಿ ಸೋತಿದೆ ಎಂದು ಹೇಳಿದರು.
ಆಂಡರ್ಸನ್ ಅವರ ಈ ಹೇಳಿಕೆಯು ಭಾರತದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಅಸಮಾದವನ್ನುಂಟು ಮಾಡಿತ್ಯು. ಹೀಗಾಗಿ ಅಶ್ವಿನ್ ಪಂದ್ಯದ ಕೊನೆಯ ದಿನ, ಆಂಡರ್ಸನ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ಅವರ ಬಳಿ ಬಹಳ ಹೊತ್ತು ಹೋಗಿ ಮಾತನಾಡಿದರು. ನಂತರ ಈ ಇಬ್ಬರ ವಾಗ್ವಾದಕ್ಕೆ ಕೊಹ್ಲಿ ಇತಿಶ್ರೀ ಹಾಡಿದ್ದರು.
ಇದನ್ನೂ ಓದಿ:IND vs ENG: ಆಂಡರ್ಸನ್ ವಿರುದ್ಧ ಕೊಹ್ಲಿ ಅವಾಚ್ಯ ಪದ ಬಳಕೆ! ಐಸಿಸಿ ಶಿಕ್ಷೆಗೆ ಗುರಿಯಾಗ್ತಾರಾ ಟೀಂ ಇಂಡಿಯಾ ನಾಯಕ?