ವಿಶ್ವಕಪ್ ಫೈನಲ್​ಗೂ ಮುನ್ನ ಭಾರತಕ್ಕೆ ಬಂದ ಪಾಕ್ ಮಂಡಳಿ ಅಧ್ಯಕ್ಷ; ಕಾರಣವೇನು ಗೊತ್ತಾ?

|

Updated on: Nov 17, 2023 | 12:33 PM

ICC World Cup 2023: ಅಹಮದಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಕಾರ್ಯಕಾರಿ ಮಂಡಳಿ (ಇಬಿ) ಸಭೆಯಲ್ಲಿ ಭಾಗವಹಿಸಲು ಝಾಕಾ ಅಶ್ರಫ್ ಭಾರತಕ್ಕೆ ಆಗಮಿಸಿದ್ದಾರೆ.

ವಿಶ್ವಕಪ್ ಫೈನಲ್​ಗೂ ಮುನ್ನ ಭಾರತಕ್ಕೆ ಬಂದ ಪಾಕ್ ಮಂಡಳಿ ಅಧ್ಯಕ್ಷ; ಕಾರಣವೇನು ಗೊತ್ತಾ?
ಝಾಕಾ ಅಶ್ರಫ್
Follow us on

ವಿಶ್ವಕಪ್-2023 ರ (ICC World Cup 2023) ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ನವೆಂಬರ್ 19 ರಂದು ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium in Ahmedabad) ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸುತ್ತದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಕೂಡ ಈಗಾಗಲೇ ಅಹಮದಾಬಾದ್‌ ತಲುಪಿದೆ. ನಿನ್ನೆಯಷ್ಟೇ ಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಂಡಿರುವ ಆಸ್ಟ್ರೇಲಿಯಾ ಇಷ್ಟರಲ್ಲೇ ಅಹಮದಾಬಾದ್‌ ತಲುಪಲಿದೆ. ಇನ್ನು ಈ ಹೈ ಪ್ರೊಫೈಲ್ ಪಂದ್ಯವನ್ನು ವೀಕ್ಷಿಸಲು ಅನೇಕ ಸೆಲೆಬ್ರಿಟಿಗಳು ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನ ಕ್ರಿಕೆಟ್ ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ಕೂಡ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ಇದಕ್ಕಾಗಿ ಈಗಾಗಲೇ ಅವರು ಭಾರತಕ್ಕೆ ಬಂದಿಳಿದಿದ್ದಾರೆ.

ಐಸಿಸಿ ಸಭೆಯಲ್ಲಿ ಭಾಗಿ

ಅಹಮದಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಕಾರ್ಯಕಾರಿ ಮಂಡಳಿ (ಇಬಿ) ಸಭೆಯಲ್ಲಿ ಭಾಗವಹಿಸಲು ಝಾಕಾ ಅಶ್ರಫ್ ಭಾರತಕ್ಕೆ ಆಗಮಿಸಿದ್ದಾರೆ. ಝಾಕಾ ಅವರೊಂದಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಾಸಿರ್ ಸಹ ಅಹಮದಾಬಾದ್‌ಗೆ ಬಂದಿಳಿದಿದ್ದು, ಭಾನುವಾರ ನಡೆಯಲ್ಲಿರುವ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲಿದ್ದಾರೆ.

IND vs AUS, Air Show: ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಸೂರ್ಯ ಕಿರಣ್ ತಂಡದಿಂದ ವೈಮಾನಿಕ ಪ್ರದರ್ಶನ

ಚಾಂಪಿಯನ್ಸ್ ಟ್ರೋಫಿ ಬಗ್ಗೆ ಚರ್ಚೆ

ಐಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ವಿಶ್ವಕಪ್‌ನ ನಡವಳಿಕೆ, ಸ್ಪರ್ಧೆಯಿಂದ ಆದಾಯ ಸಂಗ್ರಹ ಮತ್ತು ಪ್ರೇಕ್ಷಕರ ಹಾಜರಾತಿಯ ಬಗ್ಗೆ ಪರಿಶೀಲನೆ ನಡೆಯಲ್ಲಿದೆ. ಅಲ್ಲದೆ ಪಿಸಿಬಿ ಮೂಲಗಳ ಪ್ರಕಾರ, 50 ಓವರ್‌ಗಳ ಕ್ರಿಕೆಟ್‌ನ ಭವಿಷ್ಯ ಮತ್ತು 2025 ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಸಹ ಚರ್ಚಿಸಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಹಿಂದೆ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಝಾಕಾ ಅಹಮದಾಬಾದ್‌ಗೆ ಬಂದಿದ್ದರು. ಈ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಆ ಬಳಿಕ ತಂಡದ ನಾಯಕ ಬಾಬರ್ ಆಝಂ ಕೂಡ ತಮ್ಮ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ