ಮಿಂಚುತ್ತಿದೆ ‘ಬ್ರ್ಯಾಂಡ್’ ಶಮಿ; ಜಾಹೀರಾತಿಗಾಗಿ ಎಡೆತಾಕುತ್ತಿರುವ ಕಂಪನಿಗಳು; ಮೊಹಮ್ಮದ್ ಶಮಿಗೆ ಹರಿದುಬರುತ್ತಿದೆ ಹಣದ ಹೊಳೆ

Mohammed Shami Brand Value: ಮೊಹಮ್ಮದ್ ಶಮಿ ಎಂಬ ಬ್ರ್ಯಾಂಡ್​ನ ಮೌಲ್ಯ ಒಮ್ಮೆಗೇ ಮೇಲೇರಿದೆ. ಭಾರತೀಯ ಕ್ರಿಕೆಟ್​ನ ಹೊಸ ಪೋಸ್ಟರ್ ಬಾಯ್ ಆಗಿದ್ದಾರೆ. ಸಾಲುಸಾಲಾಗಿ ಕಂಪನಿಗಳು ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ಮಾಡಿಕೊಳ್ಳಲು ಸರದಿಯಲ್ಲಿ ನಿಲ್ಲುವಂತಾಗಿದೆ.

ಮಿಂಚುತ್ತಿದೆ ‘ಬ್ರ್ಯಾಂಡ್’ ಶಮಿ; ಜಾಹೀರಾತಿಗಾಗಿ ಎಡೆತಾಕುತ್ತಿರುವ ಕಂಪನಿಗಳು; ಮೊಹಮ್ಮದ್ ಶಮಿಗೆ ಹರಿದುಬರುತ್ತಿದೆ ಹಣದ ಹೊಳೆ
ಮೊಹಮ್ಮದ್ ಶಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 17, 2023 | 5:06 PM

ನವದೆಹಲಿ, ನವೆಂಬರ್ 17: ಕ್ರಿಕೆಟ್ ವೃತ್ತಿಯೇ ಅಂತ್ಯವಾಯಿತು ಎಂದು ಎಲ್ಲರೂ ಭಾವಿಸುತ್ತಿರುವಂತೆಯೇ ಮೊಹಮ್ಮದ್ ಶಮಿ (Mohammed Shami) ಫೀನಿಕ್ಸ್​ನಂತೆ ಮರಳಿದ್ದಾರೆ. ಅವರ ವೃತ್ತಿಜೀವನದ ಸರ್ವಶ್ರೇಷ್ಠ ಪ್ರದರ್ಶನ ಭಾರತದ ಅದೃಷ್ಟಕ್ಕೆ ವಿಶ್ವಕಪ್ ವೇಳೆಯೇ ಬಂದಿದೆ. ಬದಲೀ ಆಟಗಾರನಾಗಿ ಟೂರ್ನಿಯ ಮಧ್ಯದಲ್ಲಿ ಬಂದು ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಪಡೆಯುವುದೆಂದರೆ ಸಾಮಾನ್ಯ ವಿಷಯವೇ…? ಈ ವಿಶ್ವಕಪ್ ಮೂಲಕ ಭಾರತೀಯ ಕ್ರಿಕೆಟಿಗರು ಶೈನಿಂಗ್ ಸ್ಟಾರ್​ಗಳಾಗಿದ್ದಾರೆ. ಎಲ್ಲರೂ ಕೂಡ ಉತ್ತಂಗದ ಫಾರ್ಮ್​ನಲ್ಲಿದ್ದಾರೆ. ಮೊಹಮ್ಮದ್ ಶಮಿ ಅವರಂತೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ್ದಾರೆ. ಭಾರತೀಯ ಕ್ರಿಕೆಟ್​ನ ಹೊಸ ಪೋಸ್ಟರ್ ಬಾಯ್ ಆಗಿದ್ದಾರೆ.

ಮೊಹಮ್ಮದ್ ಶಮಿ ಎಂಬ ಬ್ರ್ಯಾಂಡ್​ನ ಮೌಲ್ಯ ಒಮ್ಮೆಗೇ ಮೇಲೇರಿದೆ. ಸಾಲುಸಾಲಾಗಿ ಕಂಪನಿಗಳು ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ಮಾಡಿಕೊಳ್ಳಲು ಸರದಿಯಲ್ಲಿ ನಿಲ್ಲುವಂತಾಗಿದೆ. ಮೊಹಮ್ಮದ್ ಶಮಿಯ ಜಾಹೀರಾತುಗಳನ್ನು ಡೀಲ್ ಮಾಡುವ ಫ್ಲೇರ್ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಸೌರಜಿತ್ ಚಟರ್ಜಿ ನೀಡಿರುವ ಮಾಹಿತಿ ಪ್ರಕಾರ ಆರೋಗ್ಯ ಪಾನೀಯ ಕಂಪನಿಗಳು, ಹೆಡ್​ಫೋನ್ ಕಂಪನಿಗಳು, ಎಲೆಕ್ಟ್ರಾನಿಕ್ಸ್ ಕಂಪನಿಗಳು ಶಮಿಯನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಮುಗಬಿದ್ದಿವೆ.

ಇದನ್ನೂ ಓದಿ: Mohammed Shami: ತಂಡಕ್ಕೆ ಅಗತ್ಯವಿಲ್ಲ ಎಂದು ಕೈಬಿಟ್ಟದ್ದರು: ಮೊಹಮ್ಮದ್ ಶಮಿಯ ಕಮ್​ಬ್ಯಾಕ್ ಕಥೆಯೇ ರೋಚಕ

ಶಮಿ ಬ್ರ್ಯಾಂಡ್ ಮೌಲ್ಯ ದ್ವಿಗುಣ

ಸದ್ಯ, ಮೊಹಮ್ಮದ್ ಶಮಿ ಅವರು ಪ್ಯೂಮಾ, ಹೆಲ್ ಎನರ್ಜಿ ಡ್ರಿಂಕ್ ಮತ್ತು ವಿಶನ್ 11 ಫ್ಯಾಂಟಸಿ ಆ್ಯಪ್​ಗಳಿಗೆ ಜಾಹೀರಾತು ಕೊಡುತ್ತಿದ್ದಾರೆ. ವಿಶ್ವಕಪ್​ನಲ್ಲಿ ಶಮಿ ಮಾಡಿದ ಆರ್ಭಟವನ್ನು ಪ್ಯೂಮಾ ಸಖತ್ತಾಗಿ ಮೈಲೇಜ್ ಪಡೆಯಲು ಹೊರಟಿದೆ. ಸೋಷಿಯಲ್ ಮೀಡಿಯಾದಲ್ಲಿ ಶಮಿ ಹೆಸರನ್ನು ಪ್ಯೂಮಾ ಸಖತ್ತಾಗಿ ಬಳಸುತ್ತಿದೆ.

ಇದನ್ನೂ ಓದಿ: ‘ನಿಮಗೆ ನಾಚಿಕೆಯಾಗಬೇಕು’! ಪಾಕ್ ಮಾಜಿ ಆಟಗಾರನ ಮೋಸದಾಟದ ಆರೋಪಕ್ಕೆ ಶಮಿ ಖಡಕ್ ಉತ್ತರ

ಇದೇ ವೇಳೆ, ವಿಶ್ವಕಪ್ ವೇಳೆ ಮೊಹಮ್ಮದ್ ಶಮಿಯ ಜಾಹೀರಾತು ಮೌಲ್ಯ ಎರಡು ಪಟ್ಟು ಹೆಚ್ಚಾಗಿದೆ. ವಿಶ್ವಕಪ್​ಗೆ ಮುನ್ನ ಅವರ ಎಂಡೋರ್ಸ್ಮೆಂಟ್ ಡೀಲ್ 40ರಿಂದ 50 ಲಕ್ಷ ರೂ ರೇಂಜ್​ನಲ್ಲಿತ್ತು. ಈಗ ಒಂದು ಡೀಲ್​ಗೆ 1 ಕೋಟಿ ರೂ ಶುಲ್ಕ ತೆರಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Fri, 17 November 23