ಹಂಪಿಯಿಂದ ಮುಳ್ಳಯ್ಯನಗಿರಿ ಬೆಟ್ಟದವರೆಗೂ… ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ಏರ್ಟೆಲ್ 5ಜಿ ಲಭ್ಯ
Airtel 5G in Karnataka: ಏರ್ಟೆಲ್ ಸಂಸ್ಥೆ 2022ರ ಅಕ್ಕೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 5ಜಿ ಸೇವೆ ಆರಂಭಿಸಿತ್ತು. ಒಂದು ವರ್ಷದಲ್ಲಿ 31 ಜಿಲ್ಲೆಗಳಲ್ಲಿ ಅದು ಲಭ್ಯವಾಗಿದೆ. ಹಂಪಿಯಂತಹ ಪ್ರವಾಸಿ ಸ್ಥಳಗಳು, ಹಾಗೂ ರಾಜ್ಯದ ತುತ್ತ ತುದಿ ಎನ್ನಲಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟದಲ್ಲೂ ಏರ್ಟೆಲ್ 5ಜಿ ಸೇವೆ ಸಿಗುತ್ತದೆ ಎಂದು ಟೆಲಿಕಾಂ ಸಂಸ್ಥೆ ತಿಳಿಸಿದೆ.
ಬೆಂಗಳೂರು, ನವೆಂಬರ್ 17: ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾದ ಏರ್ಟೆಲ್ ಸಂಸ್ಥೆಯ 5ಜಿ ಸೇವೆ ಅಳವಡಿಕೆ (Airtel 5G) ಬಹಳ ತ್ವರಿತವಾಗಿ ಆಗಿದೆ. ದೇಶಾದ್ಯಂತ 24.4 ಕೋಟಿ ಏರ್ಟೆಲ್ ಬಳಕೆದಾರರು ಇದ್ದು, ಈ ಪೈಕಿ 5ಜಿ ಸೇವೆ ಬಳಸುತ್ತಿರುವವರ ಸಂಖ್ಯೆ 5 ಕೋಟಿ ದಾಟಿದೆ. ಕರ್ನಾಟಕವೊಂದರಲ್ಲೇ 51 ಲಕ್ಷದಷ್ಟು ಗ್ರಾಹಕರು 5ಜಿ ಸೇವೆ ಬಳಸುತ್ತಿದ್ದಾರೆ. ಏರ್ಟೆಲ್ ಸಂಸ್ಥೆ ಈ ಮಾಹಿತಿ ನೀಡಿದ್ದು, ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ತನ್ನ 5ಜಿ ನೆಟ್ವರ್ಕ್ ಅಳವಡಿಸಿದ್ದೇವೆ ಎಂದು ತಿಳಿಸಿದೆ.
‘ಕರ್ನಾಟಕ ರಾಜ್ಯದಲ್ಲಿ ಹೈ ಸ್ಪೀಡ್ನ 5ಜಿ ತಂತ್ರಜ್ಞಾನವನ್ನು ಅಳವಡಿಸಿ ಮೊದಲ ಟೆಲಿಕಾಂ ಕಂಪನಿ ನಮ್ಮದು,’ ಎಂದು ಏರ್ಟೆಲ್ ಕರ್ನಾಟಕದ ಮುಖ್ಯಸ್ಥ ವಿವೇಕ್ ಎಂ ಅವರು ಹೇಳಿದ್ದಾರೆ.
ಏರ್ಟೆಲ್ ಸಂಸ್ಥೆ 2022ರ ಅಕ್ಕೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ 5ಜಿ ಸೇವೆ ಆರಂಭಿಸಿತ್ತು. ಒಂದು ವರ್ಷದಲ್ಲಿ 31 ಜಿಲ್ಲೆಗಳಲ್ಲಿ ಅದು ಲಭ್ಯವಾಗಿದೆ. ಹಂಪಿಯಂತಹ ಪ್ರವಾಸಿ ಸ್ಥಳಗಳು, ಹಾಗೂ ರಾಜ್ಯದ ತುತ್ತ ತುದಿ ಎನ್ನಲಾದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟದಲ್ಲೂ ಏರ್ಟೆಲ್ 5ಜಿ ಸೇವೆ ಸಿಗುತ್ತದೆ ಎಂದು ಟೆಲಿಕಾಂ ಸಂಸ್ಥೆ ಗುರುವಾರ (ನ. 16) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?
ಏರ್ಟೆಲ್ ಮತ್ತು ಜಿಯೋ ಪೈಪೋಟಿ
ಏರ್ಟೆಲ್ನ 5ಜಿ ಸೇವೆ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲೂ ಲಭ್ಯ ಇರುವುದಷ್ಟೇ ಅಲ್ಲ, ದೇಶದ ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಿಗುತ್ತವೆ. ರಿಲಾಯನ್ಸ್ ಜಿಯೋದ 5ಜಿ ನೆಟ್ವರ್ಕ್ ಕೂಡ ಸಮರ್ಪಕವಾಗಿದೆ. ಊಕ್ಲಾ ಸಂಸ್ಥೆ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಜಿಯೋ ಅತಿವೇಗದ 5ಜಿ ಮೊಬೈಲ್ ನೆಟ್ವರ್ಕ್ ಎನಿಸಿದೆ. 5ಜಿ ಮೊಬೈಲ್ ನೆಟ್ವರ್ಕ್ ಮೆಟ್ರಿಕ್ನಲ್ಲಿ ಏರ್ಟೆಲ್ 179.49 ಅಂಕ ಗಳಿಸಿದರೆ, ಜಿಯೋ 335.75 ಅಂಕ ಗಳಿಸಿ ಅತಿವೇಗದ 5ಜಿ ಮೊಬೈಲ್ ನೆಟ್ವರ್ಕ್ ಎಂಬ ದಾಖಲೆಗೆ ಪಾತ್ರವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ