AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಬಿಗಿಗೊಂಡ ಆರ್​ಬಿಐ ನಿಯಮಗಳು; ಸಾಲಕ್ಕೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ

Personal Loan Rules tightened: ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಅರ್​ಬಿಐ ಕೆಲ ನಿಯಮಗಳನ್ನು ಬಿಗಿಗೊಳಿಸಿರುವುದು ಇದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಮರ್ಷಿಯಲ್ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅಸುರಕ್ಷಿತ ಸಾಲಗಳ ವಿಚಾರದಲ್ಲಿ ಆರ್​ಬಿಐ ನಿಯಮ ಪರಿಷ್ಕರಿಸಿದೆ. ಅಸುರಕ್ಷಿತ ಸಾಲಗಳಿಗೆ ಆರ್​ಬಿಐ ನಿಗದಿ ಮಾಡಿರುವ ರಿಸ್ಕ್ ವೈಟೇಜ್ ಅನ್ನು 25 ಪ್ರತಿಶತದಷ್ಟು ಹೆಚ್ಚಿಸಿದೆ.

RBI: ಬಿಗಿಗೊಂಡ ಆರ್​ಬಿಐ ನಿಯಮಗಳು; ಸಾಲಕ್ಕೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ
ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 17, 2023 | 5:29 PM

Share

ನವದೆಹಲಿ, ನವೆಂಬರ್ 17: ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಅರ್​ಬಿಐ ಕೆಲ ನಿಯಮಗಳನ್ನು ಬಿಗಿಗೊಳಿಸಿರುವುದು ಇದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಮರ್ಷಿಯಲ್ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ಅಸುರಕ್ಷಿತ ಸಾಲಗಳ (Unsecured Loan) ವಿಚಾರದಲ್ಲಿ ಆರ್​ಬಿಐ ನಿಯಮ ಪರಿಷ್ಕರಿಸಿದೆ. ಅಸುರಕ್ಷಿತ ಸಾಲ ಅಥವಾ ಅನ್​ಸೆಕ್ಯೂರ್ಡ್ ಲೋನ್​ಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಾಗಿರುವುದು ಆರ್​ಬಿಐ (RBI) ಗಮನಕ್ಕೆ ಬಂದಿದ್ದು, ಬ್ಯಾಂಕ್ ವಲಯದ ಆರೋಗ್ಯಕ್ಕೆ ಇದು ಮಾರಕವಾಗಬಹುದು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಅಸುರಕ್ಷಿತ ಸಾಲಗಳಿಗೆ ಆರ್​ಬಿಐ ನಿಗದಿ ಮಾಡಿರುವ ರಿಸ್ಕ್ ವೈಟೇಜ್ (Risk Weight) ಅನ್ನು 25 ಪ್ರತಿಶತದಷ್ಟು ಹೆಚ್ಚಿಸಿದೆ. ಕಮರ್ಷಿಯಲ್ ಬ್ಯಾಂಕುಗಳಲ್ಲಿ ರಿಸ್ಕ್ ವೈಟ್ ಶೇ. 125 ಇದ್ದದ್ದು ಶೇ. 150ಕ್ಕೆ ಏರಿಸಲಾಗಿದೆ. ಎನ್​ಬಿಎಫ್​ಸಿಗಳಲ್ಲಿ ಶೇ. 100ರಿಂದ ಶೇ. 125ಕ್ಕೆ ಏರಿಸಲಾಗಿದೆ.

ಏನಿದು ರಿಸ್ಕ್ ವೈಟ್?

ಹಣಕಾಸು ಸಂಸ್ಥೆ ತನ್ನ ಗ್ರಾಹಕರಿಗೆ ಸಾಲ ನೀಡಿದಾಗ ನಿರ್ದಿಷ್ಟ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದಿರಿಸಬೇಕು. ಅಂದರೆ, ಒಂದು ವೇಳೆ ಆ ಸಾಲ ಮರಳದೇ ಹೋದರೆ ಅದನ್ನು ಭರಿಸುವಷ್ಟು ಫಂಡ್​ಗಳು ಬ್ಯಾಂಕ್​ನಲ್ಲಿ ಇರಬೇಕು ಎಂಬುದು ಆರ್​ಬಿಐನ ಅಪೇಕ್ಷೆ. ಹೀಗಾಗಿ, ರಿಸ್ಕ್ ವೈಟ್ ನಿಯಮವನ್ನು ಆರ್​ಬಿಐ ತಂದಿದೆ. ಇದರೊಂದಿಗೆ ಬ್ಯಾಂಕುಗಳು ಸಿಎಆರ್ ಅಥವಾ ಕ್ಯಾಷ್ ಅಡಿಕ್ವಸಿ ರೇಷಿಯೋ ಮೊತ್ತವನ್ನು ಶೇ. 20 ಇರಿಸಲು ಹೆಚ್ಚು ಹಣವನ್ನು ಎತ್ತಿ ಇಟ್ಟುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್​ಬಿಐನಿಂದ ನಿರ್ಬಂಧ

ಆರ್​ಬಿಐನ ಈ ರಿಸ್ಕ್ ವೈಟ್ ನಿಯಮ ಪರಿಷ್ಕರಣೆಯು ಹೆಚ್ಚಾಗಿ ಪರ್ನಲ್ ಲೋನ್​ಗಳಿಗೆ ಅನ್ವಯಿಸುತ್ತವೆ. ಗೃಹಸಾಲ, ವಾಹನ ಸಾಲ, ಚಿನ್ನದ ಸಾಲ ಇತ್ಯಾದಿ ಅಡಮಾನ ಸಾಲಗಳಿಗೆ ಈ ನಿಯಮಗಳ ಬದಲಾವಣೆ ಇಲ್ಲ. ಶಿಕ್ಷಣ ಸಾಲಕ್ಕೂ ಇದು ಅನ್ವಯಿಸುವುದಿಲ್ಲ.

ಈಗ ಹೆಚ್ಚಿನ ಮೊತ್ತವನ್ನು ತೆಗೆದಿರಿಸಬೇಕಾಗಿರುವುದರಿಂದ ಬ್ಯಾಂಕುಗಳು ವೈಯಕ್ತಿಕ ಸಾಲವನ್ನು ಹೆಚ್ಚಿನ ಬಡ್ಡಿದರಕ್ಕೆ ಕೊಡುವುದು ಅನಿವಾರ್ಯವಾಗಬಹುದು. ಪರ್ಸನಲ್ ಲೋನ್ ಬಡ್ಡಿದರಗಳು ಸದ್ಯ ಶೇ. 14ರಿಂದ 25ರಷ್ಟಿವೆ. ಇದು ಇನ್ನಷ್ಟು ಹೆಚ್ಚಾಗಬಹುದು.

ಇದನ್ನೂ ಓದಿ: ಇ-ರುಪಾಯಿ ವಹಿವಾಟು ನಡೆಸಿದರೆ ಸಿಗುತ್ತವೆ ಕ್ಯಾಷ್​ಬ್ಯಾಕ್, ರಿವಾರ್ಡ್​ಗಳು..! ಬ್ಯಾಂಕುಗಳಿಂದ ಭರ್ಜರಿ ಆಫರ್

ಆರ್​ಬಿಐನಿಂದ ಯಾಕೆ ಈ ಕ್ರಮ?

ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳಲ್ಲಿ ಪರ್ಸನಲ್ ಲೋನ್​ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಕಳೆದ ತಿಂಗಳು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ಅಡಮಾನರಹಿತವಾಗಿರುವ ಅಸುರಕ್ಷಿತ ಸಾಲವಾಗಿರುತ್ತವೆ. ಗ್ರಾಹಕರ ಆದಾಯದ ಆಧಾರದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ. ಇಂಥ ಸಾಲ ಮರುಪಾವತಿ ಆಗದೇ ಹೋದರೆ ಬ್ಯಾಂಕುಗಳು ನಷ್ಟಕ್ಕೆ ತಿರುಗಬಹುದು ಎಂಬುದು ಆರ್​​ಬಿಐ ಭೀತಿ. ಅದಕ್ಕೆ ಬ್ಯಾಂಕುಗಳನ್ನು ಇಂಥ ಅಪಾಯಕಾರಿ ಸಾಲದ ಬಗ್ಗೆ ಎಚ್ಚರಿಸಲು ರಿಸ್ಕ್ ವೈಟ್ ನಿಯಮವನ್ನು ಬಿಗಿಗೊಳಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:17 am, Fri, 17 November 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್