ಕ್ಯಾಲೆಂಡರ್ ವರ್ಷದ ಕೊನೆಯ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ಕ್ಯಾಲೆಂಡರ್ ವರ್ಷದ ಕೊನೆಯ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ

TV9 Web
| Updated By: Ganapathi Sharma

Updated on: Dec 31, 2024 | 6:34 AM

ಡಿಸೆಂಬರ್ 31, 2024 ರ ಮಂಗಳವಾರದ ದಿನದ ರಾಹುಕಾಲ ಮಧ್ಯಾಹ್ನ 3:13 ರಿಂದ 4:39 ರ ವರೆಗೆ ಇದೆ. ಸರ್ವಸಿದ್ಧಿ ಕಾಲ ಬೆಳಿಗ್ಗೆ 10:57 ರಿಂದ 12:22 ರ ವರೆಗೆ ಇದೆ. ಈ ದಿನ ಪುಷ್ಯ ಮಾಸ, ಹೊಸ ವರ್ಷದ ಪೂರ್ವದಿನವಾಗಿದೆ. ಈ ದಿನ ಗಾಣಿಗಾಪುರ, ತರೀಕೆರಿಯ ಸೋಮನಾಥಪುರ ಮತ್ತು ಹೇಮಗಿರಿಯಲ್ಲಿ ರಥೋತ್ಸವಗಳು ನಡೆಯುತ್ತಿವೆ. ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ.

ಇಂದು 31-12-2024 ಮಂಗಳವಾರ, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲಪಕ್ಷ, ಪಾಡ್ಯ, ಪೂರ್ವಾಷಾಡ ನಕ್ಷತ್ರ, ಧ್ರುವಯೋಗ, ಕಿಂಸ್ತುಜ್ಞ ಕರಣ. ರಾಹುಕಾಲ ಮಧ್ಯಾಹ್ನ 3:13 ರಿಂದ 4:39 ರ ವರೆಗೆ ಇದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ 10:57 ನಿಮಿಷದಿಂದ 12:22 ನಿಮಿಷ ತನಕ ಇದೆ.

ಇಂದು ಪುಷ್ಯ ಮಾಸ. ನಾವು ಮಾರ್ಗಶಿರ ಮಾಸದಿಂದ ಈಗ ಪುಷ್ಯ ಮಾಸಕ್ಕೆ ಬಂದಿದ್ದೇವೆ. ಅದರ ಜೊತೆಗೆ ನಾಳೆಯಿಂದ ಹೊಸ ವರ್ಷ ಪ್ರಾರಂಭ ಆಗುತ್ತಾ ಇದೆ. ಹೊಸ ವರ್ಷದ ಹಿಂದಿನ ದಿನ ನಾವು ಹೇಗೆ ಆಚರಿಸಿಕೊಳ್ಳುತ್ತೇವೆ? ಹೊಸ ವರ್ಷವನ್ನು ಎಷ್ಟು ಸಂತೋಷದಿಂದ ಸ್ವಾಗತಿಸುತ್ತೇವೆ? ಹೊಸ ಹೊಸ ನಿರೀಕ್ಷೆಗಳನ್ನು ಎಷ್ಟು ಪಡೆದುಕೊಳ್ಳುತ್ತೇವೆ? ಹಾಗೇನೆ ಹೊಸ ವರ್ಷದ ಹಿಂದಿನ ದಿನ ಇಂದು ಮಂಗಳವಾರ, ಇಂದು ಸಹ ನಾವು ಕೆಲವು ಸಂಕಲ್ಪ ಮಾಡ್ಕೋಬೇಕು. ಈ ವರ್ಷದಲ್ಲಿ ಮಾಡಿದಂತಹ ತಪ್ಪುಗಳನ್ನು ಮತ್ತೆ ಮಾಡದಂತೆ ಜಾಗರೂಕರಾಗಿರಬೇಕು. ಸ್ವಲ್ಪ ಆತ್ಮಾವಲೋಕನವನ್ನು ಇಂದು ಮಾಡಿಕೊಳ್ಳಬೇಕು.

ಕ್ಯಾಲೆಂಡರ್ ವರ್ಷದ ಕೊನೆಯ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ನೀಡಿದ್ದಾರೆ.