ಬ್ಯಾಂಕ್ ಬ್ಯಾಲನ್ಸ್ ಎಷ್ಟಿದೆ ನೋಡಿ… 3 ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚುತ್ತಿದೆ ಆರ್ಬಿಐ
RBI updates: ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು, ಝೀರೋ ಬ್ಯಾಲನ್ಸ್ ಇರುವ ಬ್ಯಾಂಕ್ ಖಾತೆಗಳು ನಿಮ್ಮಲ್ಲಿದ್ದರೆ ಅದನ್ನು ಕೂಡಲೇ ಸಕ್ರಿಯಗೊಳಿಸಿದೆ. ಇಂಥ ಬ್ಯಾಂಕ್ ಖಾತೆಗಳನ್ನು ಜನವರಿ 1ರಿಂದ ಮುಚ್ಚಲು ಆರ್ಬಿಐ ನಿರ್ಧರಿಸಿದೆ. ಬ್ಯಾಂಕ್ ವ್ಯವಸ್ಥೆಯ ಆಧುನೀಕರಣ, ಡಿಜಿಟಲೀಕರಣಕ್ಕೆ ಉತ್ತೇಜಿಸಲು ಮತ್ತು ಹಣಕಾಸು ಅಕ್ರಮ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನವದೆಹಲಿ, ಡಿಸೆಂಬರ್ 30: ಜನವರಿ 1ರಿಂದ ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಖಾತೆಗಳು ಮುಚ್ಚಲ್ಪಡುವ ಸಾಧ್ಯತೆ ಇದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಮತ್ತು ವಂಚನೆ ಸಾಧ್ಯತೆಯನ್ನು ತಗ್ಗಿಸಲು ಆರ್ಬಿಐ ಆಗಾಗ್ಗೆ ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಈ ನಿಟ್ಟಿನಲ್ಲಿ ಜನವರಿ 1ರಿಂದ ಆರ್ಬಿಐ ಮೂರು ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚಲು ನಿರ್ಧರಿಸಿದೆ ಎನ್ನುವ ಸುದ್ದಿ ಇದೆ. ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ಉತ್ತೇಜನ ನೀಡಲು, ಹಣಕಾಸು ಅಕ್ರಮಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ನಿಷ್ಕ್ರಿಯ ಬ್ಯಾಂಕ್ ಖಾತೆಗಳು…
ಡಾರ್ಮಂಟ್ ಅಕೌಂಟ್ ಮತ್ತು ಇನ್ಯಾಕ್ಟಿವ್ ಅಕೌಂಟ್ಗಳನ್ನು ಮುಚ್ಚಲು ಆರ್ಬಿಐ ನಿರ್ಧರಿಸಿರುವುದು ತಿಳಿದುಬಂದಿದೆ. ಎರಡಕ್ಕೂ ಹೆಚ್ಚು ವರ್ಷಗಳವರೆಗೆ ಸತತವಾಗಿ ಯಾವುದೇ ವಹಿವಾಟು ಆಗದೇ ಇರುವ ಬ್ಯಾಂಕ್ ಖಾತೆಗಳನ್ನು ಡಾರ್ಮಂಟ್ ಅಕೌಂಟ್ ಎಂದು ವರ್ಗೀಕರಿಸಲಾಗುತ್ತದೆ. ಇಂಥ ಅಕೌಂಟ್ಗಳು ಹ್ಯಾಕರ್ಗಳಿಗೆ ಸುಲಭ ತುತ್ತಾಗಬಹುದು. ಅಕ್ರಮ ಹಣ ರವಾನೆಗೆ ಈ ಅಕೌಂಟ್ಗಳನ್ನು ಬಳಸುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಭಾರತೀಯ ಹೆಂಗಸರ ಬಳಿ ಇರುವ ಚಿನ್ನ ಅಮೆರಿಕ ಸೇರಿ ಐದು ದೇಶಗಳ ಗೋಲ್ಡ್ ರಿಸರ್ವ್ಗಿಂತಲೂ ಹೆಚ್ಚು..!
ಇನ್ನು, ಒಂದು ವರ್ಷದವರೆಗೆ ಯಾವುದೇ ವಹಿವಾಟು ಕಾಣದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯ ಅಕೌಂಟ್ ಎಂದು ವರ್ಗೀಕರಿಸಲಾಗುತ್ತದೆ. ಇವೂ ಕೂಡ ಅಕ್ರಮ ಹಣಕಾಸು ಚಟುವಟಿಕೆಗಳಿಗೆ ದುರ್ಬಳಕೆ ಆಗಬಹುದು. ಇಂಥ ಬ್ಯಾಂಕ್ ಖಾತೆಗಳು ಜನವರಿ 1ರಿಂದ ಮುಚ್ಚಲ್ಪಡಬಹುದು.
ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದರೆ ಯಾವುದಾದರೂ ಒಂದು ಅಕೌಂಟ್ ನಿಷ್ಕ್ರಿಯವಾಗಿದ್ದಿರುವ ಸಾಧ್ಯತೆ ಇಲ್ಲದಿಲ್ಲ. ನಿಮಗೆ ಅನಗತ್ಯವೆನಿಸುವ ಖಾತೆಗಳನ್ನು ಮುಚ್ಚಿಬಿಡಬಹುದು. ಇಲ್ಲದಿದ್ದರೆ ನಿಮ್ಮ ಎಲ್ಲಾ ಖಾತೆಗಳನ್ನು ನಿಮ್ಮ ನಿಯಮಿತ ವಹಿವಾಟಿಗೆ ಬಳಸಿಕೊಳ್ಳಲು ಪ್ಲಾನ್ ಮಾಡುವುದು ಉತ್ತಮ.
ಝೀರೋ ಬ್ಯಾಲನ್ಸ್ ಅಕೌಂಟ್ಗಳು…
ಬ್ಯಾಂಕ್ ಖಾತೆ ನಿಗದಿತ ಅವಧಿಯಲ್ಲಿ ಝೀರೋ ಬ್ಯಾಲನ್ಸ್ ಹೊಂದಿದ್ದರೆ, ಅಂಥ ಖಾತೆಗಳನ್ನೂ ಮುಚ್ಚಲು ಆರ್ಬಿಐ ನಿರ್ಧರಿಸಿದೆ. ಜನರು ಬ್ಯಾಂಕ್ ಖಾತೆಗಳನ್ನು ಸದುಪಯೋಗಿಸಿಕೊಂಡು ಹಣಕಾಸು ವಹಿವಾಟು ಸರಾಗವಾಗಿ ಆಗುವಂತಾಗಲು ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: Bank Holidays: ಹೊಸ ವರ್ಷಾಚರಣೆಯಿಂದ ಹಿಡಿದು ನೇತಾಜಿ ಜಯಂತಿವರೆಗೆ 15 ಬ್ಯಾಂಕ್ ರಜಾದಿನಗಳು; ಇಲ್ಲಿದೆ ಪಟ್ಟಿ
ನಿಮ್ಮ ಖಾತೆ ದೀರ್ಘಾವಧಿ ನಿಷ್ಕ್ರಿಯವಾಗಿದ್ದರೆ ಅದನ್ನು ಸಕ್ರಿಯಗೊಳಿಸಬಹುದು. ಅದಕ್ಕಾಗಿ ನೀವು ಬ್ಯಾಂಕ್ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಮತ್ತೊಮ್ಮೆ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ