ಬುಮ್ರಾ ಬೂಮ್ ಬೂಮ್​ಗೆ ಪಾಕ್ ವೇಗಿಯ ಸರ್ವಶ್ರೇಷ್ಠ ದಾಖಲೆ ಶೇಕಿಂಗ್..!

Jasprit Bumrah Records: ಟೆಸ್ಟ್​​ ಕ್ರಿಕೆಟ್​ನಲ್ಲಿ ಕರಾರುವಾಕ್ ದಾಳಿ ಮುಂದುವರೆಸಿರುವ ಜಸ್​ಪ್ರೀತ್ ಬುಮ್ರಾ ಇದೀಗ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಕೂಡ ಸ್ವಿಂಗ್ ಮಾಂತ್ರಿಕ ಪಾಕಿಸ್ತಾನ್ ತಂಡದ ಮಾಜಿ ವೇಗಿ ವಾಸಿಂ ಅಕ್ರಂ ಅವರ ಸರ್ವಶ್ರೇಷ್ಠ ದಾಖಲೆಯನ್ನು ಮುರಿಯುವ ಸನಿಹದಲ್ಲಿ. ಅಂದರೆ ಸಿಡ್ನಿ ಟೆಸ್ಟ್​ನಲ್ಲಿ ಬುಮ್ರಾ 4 ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಝಾಹಿರ್ ಯೂಸುಫ್
|

Updated on: Dec 31, 2024 | 9:17 AM

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4 ಪಂದ್ಯಗಳಿಂದ ಜಸ್​ಪ್ರೀತ್ ಬುಮ್ರಾ (Jasprit Bumrah) ಒಟ್ಟು 30 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ BGT ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

1 / 7
ಇದರ ಜೊತೆಗೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್​ ಮತ್ತು ಆಸ್ಟ್ರೇಲಿಯಾದಲ್ಲಿ (SENA) ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್​ ಎಂಬ ದಾಖಲೆಯನ್ನು ಜಸ್​ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು.

2 / 7
ಅನಿಲ್ ಕುಂಬ್ಳೆ ಆಸ್ಟ್ರೇಲಿಯಾದಲ್ಲಿ 49, ಇಂಗ್ಲೆಂಡ್‌ನಲ್ಲಿ 36, ನ್ಯೂಝಿಲೆಂಡ್‌ನಲ್ಲಿ 11 ಮತ್ತು ಸೌತ್ ಆಫ್ರಿಕಾದಲ್ಲಿ 45 ವಿಕೆಟ್​ಗಳನ್ನು ಕಬಳಿಸುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಕುಂಬ್ಳೆ ಹೆಸರಿನಲ್ಲಿದ್ದ 141 ವಿಕೆಟ್​​ಗಳ ದಾಖಲೆ ಮುರಿಯುವಲ್ಲಿ ಬುಮ್ರಾ ಯಶಸ್ವಿಯಾಗಿದ್ದಾರೆ.

3 / 7
ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ ಈವರೆಗೆ ಆಡಿರುವ 11 ಟೆಸ್ಟ್‌ಗಳಲ್ಲಿ 62 ವಿಕೆಟ್‌ಗಳನ್ನು ಕಬಳಿಸಿದರೆ, ಇಂಗ್ಲೆಂಡ್‌ನಲ್ಲಿ 37, ನ್ಯೂಝಿಲೆಂಡ್‌ನಲ್ಲಿ 6 ಮತ್ತು ಸೌತ್ ಆಫ್ರಿಕಾದಲ್ಲಿ 38 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಮೂಲಕ SENA ದೇಶಗಳಲ್ಲಿ ಒಟ್ಟು 143 ವಿಕೆಟ್ ಉರುಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 7
ವಿಶೇಷ ಎಂದರೆ, SENA ದೇಶಗಳಲ್ಲಿ ಐತಿಹಾಸಿಕ ಸಾಧನೆ ಮಾಡಲು ಜಸ್​ಪ್ರೀತ್ ಬುಮ್ರಾಗೆ ಇನ್ನೂ 4 ವಿಕೆಟ್​​ಗಳ ಅವಶ್ಯಕತೆಯಿದೆ. ಅಂದರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಳ್ಳಲು ಬುಮ್ರಾಗೆ ಉತ್ತಮ ಅವಕಾಶವಿದ್ದು, ಇದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ನಲ್ಲಿ 4 ವಿಕೆಟ್​ಗಳನ್ನು ಕಬಳಿಸಬೇಕು.

5 / 7
ಪ್ರಸ್ತುತ ಈ ಸರ್ವಶ್ರೇಷ್ಠ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ವಾಸಿಂ ಅಕ್ರಂ ಹೆಸರಿನಲ್ಲಿದೆ. SENA ದೇಶಗಳಲ್ಲಿ 55 ಟೆಸ್ಟ್ ಇನಿಂಗ್ಸ್ ಆಡಿರುವ ವಾಸಿಂ ಅಕ್ರಂ ಒಟ್ಟು 146 ವಿಕೆಟ್​ಗಳನ್ನು ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.

6 / 7
ಇದೀಗ SENA ದೇಶಗಳಲ್ಲಿ 58 ಇನಿಂಗ್ಸ್​ಗಳಿಂದ 143 ವಿಕೆಟ್ ಉರುಳಿಸಿರುವ ಜಸ್​ಪ್ರೀತ್ ಬುಮ್ರಾ, ಸಿಡ್ನಿ ಟೆಸ್ಟ್​ನಲ್ಲಿ 4 ವಿಕೆಟ್ ಕಬಳಿಸಿದರೆ ಅಕ್ರಂ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಬಹುದು. ಈ ಮೂಲಕ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ದಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿದೇಶಿ ಬೌಲರ್ ಎನಿಸಿಕೊಳ್ಳಬಹುದು.

7 / 7
Follow us