‘ರಾಧಾ ಕೃಷ್ಣ’ ತರ ಇದೀರಾ; ಭವ್ಯಾಗೆ ನೇರ ಮಾತಲ್ಲಿ ಹೇಳಿದ ತ್ರಿವಿಕ್ರಂ ತಾಯಿ

‘ರಾಧಾ ಕೃಷ್ಣ’ ತರ ಇದೀರಾ; ಭವ್ಯಾಗೆ ನೇರ ಮಾತಲ್ಲಿ ಹೇಳಿದ ತ್ರಿವಿಕ್ರಂ ತಾಯಿ

ರಾಜೇಶ್ ದುಗ್ಗುಮನೆ
|

Updated on: Dec 31, 2024 | 8:21 AM

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್. ಕುಟುಂಬದವರು ಬರುವ ಅವಕಾಶವನ್ನು ನೀಡಲಾಯಿತು. ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ರಾಧಾ ಕೃಷ್ಣ’ ರೀಯಲ್ಲಿ ನೀವು ಇದೀರಾ ಎಂದು ಭವ್ಯಾಗೆ ನೇರ ಮಾತಲ್ಲಿ ತ್ರಿವಿಕ್ರಂ ತಾಯಿ ಹೇಳಿದ್ದಾರೆ.

ಭವ್ಯಾ ಹಾಗೂ ತ್ರಿವಿಕ್ರಂ ಕ್ಲೋಸ್ ಆಗಿರೋದು ಗೊತ್ತೇ ಇದೆ. ಈಗ ತ್ರಿವಿಕ್ರಂ ತಾಯಿ ದೊಡ್ಮನೆ ಒಳಗೆ ಬಂದಿದ್ದಾರೆ. ಈ ವೇಳೆ ಅವರು ಭವ್ಯಾ ಗೌಡ ಅವರನ್ನು ಭೇಟಿ ಆಗಿದ್ದಾರೆ. ‘ನೀವುಬ್ಬರೂ (ಭವ್ಯಾ ಹಾಗೂ ತ್ರಿವಿಕ್ರಂ) ರಾಧಾ ಕೃಷ್ಣನ ರೀತಿ ಇದೀರಾ’ ಎಂದು ಹೇಳುವ ಮೂಲಕ ಭವ್ಯಾಗೆ ಸರ್​ಪ್ರೈಸ್ ಕೊಟ್ಟಿದ್ದಾರೆ. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.