ಸ್ರೀಯರು ರುದ್ರಾಕ್ಷಿ ಧರಿಸಬಹುದಾ? ಶಾಸ್ತ್ರಗಳಲ್ಲಿ ಏನು ಉಲ್ಲೇಖವಿದೆ ನೋಡಿ
ಸಾಮಾನ್ಯವಾಗಿ ಅಧ್ಯಾತ್ಮ ಸಾಧಕರು, ಪುರುಷರು ರುದ್ರಾಕ್ಷಿ ಮಾಲೆಯನ್ನು ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ, ಮಹಿಳೆಯರು ಇದನ್ನು ಧರಿಸುವುದು ಕಡಿಮೆ. ಮಹಿಳೆಯರು ಕೂಡ ರುದ್ರಾಕ್ಷಿಯನ್ನು ಧರಿಸಬಹುದೇ? ಶಾಸ್ತ್ರಗಳಲ್ಲಿ ಏನು ಹೇಳಿದೆ ಎಂಬುದನ್ನು ಖ್ಯಾತ ವಾಸ್ತು ಶಾಸ್ತ್ರಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
ಪುರುಷರು ಮತ್ತು ಸಾಮಾನ್ಯವಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವಂತಹವರು ರುದ್ರಾಕ್ಷಿ ಧಾರಣೆ ಮಾಡಿಕೊಳ್ಳುತ್ತಾ ಇರುತ್ತೇವೆ. ಆದರೆ ಇವತ್ತಿನ ದಿವಸ ಒಂದು ಪ್ರಶ್ನೆ ಉದ್ಭವಿಸುತ್ತಿದೆ. ಮಹಿಳೆಯರು ರುದ್ರಾಕ್ಷಿ ಧಾರಣೆಯನ್ನು ಮಾಡಿಕೊಳ್ಳಬಹುದಾ? ಎಷ್ಟೋ ಜನ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗೆ ಉತ್ತರವಾಗಿ ಇವತ್ತಿನ ಈ ಕಾರ್ಯಕ್ರಮದಲ್ಲಿ ಮಹಿಳೆಯರು ರುದ್ರಾಕ್ಷಿ ಧರಿಸಿಕೊಳ್ಳಬಹುದೇ ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಖ್ಯಾತ ವಾಸ್ತು ಶಾಸ್ತ್ರಜ್ಞ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ರುದ್ರಾಕ್ಷಿಗಳಲ್ಲಿ ನಾನಾ ವಿಧ ಇದೆ. ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಷ್ಠಮುಖ, ಸಪ್ತಮುಖ, ಅಷ್ಟಮುಖ, ನವಮುಖ, ದಶಮುಖ, ಏಕಾದಶಮುಖ, ದ್ವಾದಶಮುಖ ಈ ರೀತಿ ಸಾಕಷ್ಟು ರುದ್ರಾಕ್ಷಿಗಳಿವೆ. ಆ ಒಂದೊಂದು ರುದ್ರಾಕ್ಷಿಗೂ ಕೂಡ ಒಂದೊಂದು ಇತಿಹಾಸ, ಪುರಾಣ, ಮಹತ್ವ ಇದೆ. ಆದರೆ ಇವತ್ತಿನ ದಿವಸ ಎಲ್ಲರೂ ಕೂಡ ಸಾರ್ವಜನಿಕರು, ಪ್ರತಿಯೊಬ್ಬರು ಸಂಸಾರಿಗಳು ಎಲ್ಲರೂ ಕೂಡ ಪಂಚಮುಖ ರುದ್ರಾಕ್ಷಿಯನ್ನು ಧಾರಣೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.